ಧರ್ಮಶಾಲಾ:ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ.
ಧರ್ಮಶಾಲಅದಲ್ಲಿ ಮಧ್ಯಾಹ್ನ 3 ಗಂಟೆಯಿಂದ ತುಂತುರು ಮಳೆ ಬೀಳುತ್ತಿದೆ. ಸದ್ಯಕ್ಕೆ ಮಳೆ ನಿಂತಿದೆಯಾದರೂ ಅಂಗಳದಲ್ಲಿ ನೀರು ನಿಂತಿದೆ ಎಂಬ ಮಾಹಿತಿ ತಿಳಿದುಬಂದಿದೆ.

3 ವರ್ಷಗಳ ನಂತರ ಧರ್ಮಶಾಲಾದಲ್ಲಿ ಟಿ20 ಪಂದ್ಯ ಆಯೋಜನೆಗೊಂಡಿದೆ. ಆದರೆ ಮಳೆಯ ಕಾರಣ 40 ಓವರ್ಗಳ ಪಂದ್ಯ ಅನುಮಾನವಾಗಿದ್ದು, ಓವರ್ಗಳು ಕಡಿತವಾಗುವ ಸಂಭವವೇ ಹೆಚ್ಚಿದೆ. ಇಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ತಂಡಗಳು 2016 ವಿಶ್ವಕಪ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು.
ಸೇಡಿಗಾಗಿ ಕಾದಿರುವ ಟೀಂ ಇಂಡಿಯಾ:
2015ರಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಇದೇ ಅಂಗಳದಲ್ಲಿ ಎದುರಿಸಿತ್ತು. ಆದಾದ ನಂತರ ಭಾರತ ತಂಡ ಇಲ್ಲಿ ಟಿ20 ಪಂದ್ಯ ಆಡಿಲ್ಲ. ಅಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 106 ರನ್ ಗಳಿಸಿ ಶತಕ ದಾಖಲಿಸಿದ್ದರು. ಆದರೆ ಆ ಪಂದ್ಯದಲ್ಲಿ 200 ರನ್ಗಳ ಗುರಿಯನ್ನು ಹರಿಣಗಳು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಭಾರತೀಯರಿಗೆ ಶಾಕ್ ನೀಡಿದ್ದರು. ವರ್ಷಗಳ ನಂತರ ಇದೇ ಅಂಗಳದಲ್ಲಿ ಮತ್ತೆ ಮುಖಾಮುಖಿಯಾಗುತ್ತಿದ್ದು, ದುರ್ಬಲ ಹರಿಣಗಳ ವಿರುದ್ಧ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಿದೆ.