ಮ್ಯಾಂಚೆಸ್ಟರ್:ಕೊಹ್ಲಿ ಪಡೆ ವಿಶ್ವಕಪ್ನಲ್ಲಿ ಆಡಿರುವ 9 ಪಂದ್ಯಗಳಲ್ಲಿ 7 ಗೆಲುವು ಹಾಗೂ ಒಂದು ಸೋಲಿನೊಂದಿಗೆ 15 ಅಂಕ ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿದೆ.
ಇನ್ನು ಕಿವೀಸ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು. ಇಂಗ್ಲೆಂಡ್ ವಿರುದ್ಧ ಮಾತ್ರ ಕೊಹ್ಲಿಪಡೆ ಸೋಲನುಭವಿಸಿತ್ತು. ಇತ್ತನ್ಯೂಜಿಲ್ಯಾಂಡ್ ತಂಡ ಭಾರತದ ವಿರುದ್ಧದ ಪಂದ್ಯ ರದ್ದಾಗಿದ್ದು ಬಿಟ್ಟರೆ, ಉಳಿದ 8 ಪಂದ್ಯಗಳಲ್ಲಿ 5 ಗೆಲುವು ಹಾಗೂ 3 ಸೋಲು ಕಂಡು ಕೊನೆಯ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತ್ತು. ಮೊದಲ 5 ಪಂದ್ಯಗಳನ್ನು ಸುಲಭವಾಗಿ ಗೆದ್ದಿದ್ದ ಕಿವೀಸ್ ನಂತರದ ಮೂರು ಪಂದ್ಯಗಳಲ್ಲಿ ಸೋಲನುಭವಿಸಿ ರನ್ರೇಟ್ ಆಧಾರದ ಮೇಲೆ ಸೆಮಿಫೈನಲ್ ಪ್ರವೇಶಿಸಿದೆ.
ವಿಶ್ವಕಪ್ನಲ್ಲಿ ಸಾಧನೆ:
ಭಾರತ ತಂಡ 1983 ಹಾಗೂ 2011 ರಲ್ಲಿ ಚಾಂಪಿಯನ್ ಆಗಿದ್ದರೆ 2003ರ ವಿಶ್ವಕಪ್ನಲ್ಲಿ ರನ್ನರ್ ಆಪ್ ಆಗಿದೆ. ಒಟ್ಟಾರೆ 12 ವಿಶ್ವಕಪ್ ಇತಿಹಾಸದಲ್ಲಿ ಟೀಮ್ ಇಂಡಿಯಾಗೆ ಇದು 7ನೇ ಸೆಮಿಫೈನಲ್ ಆಗಿದೆ.
ನ್ಯೂಜಿಲ್ಯಾಂಡ್ ತಂಡ 2015 ರಲ್ಲಿ ರನ್ನರ್ ಆಪ್ ಆಗಿರುವುದೇ ದೊಡ್ಡ ಸಾಧನೆಯಾಗಿದೆ. 12 ವಿಶ್ವಕಪ್ಗಳ ಇತಿಹಾಸದಲ್ಲಿ ಕಿವೀಸ್ 8 ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದೆ.
ಭಾರತ ಹಾಗೂ ನ್ಯೂಜಿಲ್ಯಾಂಡ್ ಏಕದಿನ ಮುಖಾಮುಖಿ