ಮುಂಬೈ:ಟೀಂ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್, ಡೆತ್ ಓವರ್ ಮಾಸ್ಟರ್ ಎಂದು ಕರೆಯಿಸಿಕೊಳ್ಳುವ ಜಸ್ಪ್ರೀತ್ ಬುಮ್ರಾ ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಹೀನಾಯ ಬೌಲಿಂಗ್ ಪ್ರದರ್ಶನ ನೀಡಿದ್ದು, ಇಷ್ಟೊಂದು ಕೆಟ್ಟ ಫಾರ್ಮ್ನಲ್ಲಿ ಇದೇ ಮೊದಲ ಬಾರಿಗೆ ಬೌಲಿಂಗ್ ಮಾಡಿದ್ದಾರೆ.
30 ಓವರ್, 167ರನ್, 0 ವಿಕೆಟ್: ಡೆತ್ ಓವರ್ ಸ್ಪೆಷಲಿಸ್ಟ್ನ ಕೆಟ್ಟ ಬೌಲಿಂಗ್!
ಟೀಂ ಇಂಡಿಯಾ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ನ್ಯೂಜಿಲ್ಯಾಂಡ್ನಲ್ಲಿ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ್ದು, ಇದೇ ಮೊದಲ ಸಲ ಇಂತಹದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯನ್ನ ಟೀಂ ಇಂಡಿಯಾ 3-0 ಅಂತರದಿಂದ ಕೈಚೆಲ್ಲಿದ್ದು, ಸುಮಾರು 31 ವರ್ಷಗಳ ಬಳಿಕ ಕ್ಲೀನ್ ಸ್ವೀಪ್ ಮುಖಭಂಗಕ್ಕೊಳಗಾಗಿರುವ ಕಳಪೆ ಸಾಧನೆ ನಿರ್ಮಿಸಿದೆ. ಇದರ ಜತೆಗೆ ಕ್ರಿಕೆಟ್ ಸರಣಿವೊಂದರಲ್ಲಿ ಯಾವುದೇ ವಿಕೆಟ್ ಪಡೆದುಕೊಳ್ಳದ ಕಳಪೆ ಸಾಧನೆವೊಂದನ್ನ ಟೀಂ ಇಂಡಿಯಾ ಡೆತ್ ಓವರ್ ಸ್ಪೆಷಲಿಸ್ಟ್ ಬುಮ್ರಾ ನಿರ್ಮಿಸಿದ್ದಾರೆ.
ಮೂರು ಏಕದಿನ ಪಂದ್ಯಗಳಿಂದ ಒಟ್ಟು 30 ಓವರ್ ಎಸೆದಿರುವ ಈ ಪ್ಲೇಯರ್ 167ರನ್ ಬಿಟ್ಟುಕೊಟ್ಟಿದ್ದು, ಯಾವುದೇ ವಿಕೆಟ್ ಪಡೆದುಕೊಂಡಿಲ್ಲ. ನಿನ್ನೆ ನಡೆದ ಫೈನಲ್ ಪಂದ್ಯದಲ್ಲೂ ಬುಮ್ರಾ 10 ಓವರ್ ಮಾಡಿ 50ರನ್ ನೀಡಿದ್ದು, ಯಾವುದೇ ವಿಕೆಟ್ ಪಡೆದುಕೊಂಡಿಲ್ಲ. ಇದರ ಜತೆಗೆ ಭಾರತದ ಯುವ ಬೌಲರ್ ನವದೀಪ್ ಸೈನಿ ಕೂಡ ಯಾವುದೇ ವಿಕೆಟ್ ಪಡೆದುಕೊಂಡಿಲ್ಲ.