ಕರ್ನಾಟಕ

karnataka

ETV Bharat / sports

ವಿರಾಟ್​ ಕಟ್ಟಿಹಾಕಿ, ಟೀಮ್​ ಇಂಡಿಯಾ ಮತ್ತೊಮ್ಮೆ ಸೋಲಿಸುತ್ತೇವೆ: ಟಾಪ್ ಲ್ಯಾಥಮ್​ ವಿಶ್ವಾಸ

ಮೊದಲ ಟೆಸ್ಟ್​ನಲ್ಲಿ ಭಾರತದ ಸ್ಟಾರ್​ ಬೌಲರ್​ಗಳಾದ ಬುಮ್ರಾ, ಶಮಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಆದರೆ, ಲ್ಯಾಥಮ್​ ಮಾತ್ರ ಅವರಿಬ್ಬರ ಮೇಲೆ ನಾವು ಎಚ್ಚರ ವಹಿಸಬೇಕಿದೆ ಎಂದಿದ್ದಾರೆ.

India vs New Zealand
ಭಾರತ-ನ್ಯೂಜಿಲ್ಯಾಂಡ್​ ಟೆಸ್ಟ್​ ಸರಣಿ

By

Published : Feb 27, 2020, 8:56 PM IST

ಕ್ರೈಸ್ಟ್ ಚರ್ಚ್: ಮೊದಲ ಟೆಸ್ಟ್​ನಲ್ಲಿ ವಿರಾಟ್​ ಕೊಹ್ಲಿಯನ್ನು ಹೇಗೆ ರನ್​ಗಳಿಸಲು ಬಿಡಲಿಲ್ಲವೋ, ಅದೇ ರೀತಿ ಎರಡನೇ ಪಂದ್ಯದಲ್ಲೂ ಕೊಹ್ಲಿಗಾಗಿ ರಣತಂತ್ರ ರೂಪಿಸಿದ್ದು, ಭಾರತ ತಂಡವನ್ನು ಮತ್ತೆ ಮಣಿಸುತ್ತೇವೆ ಎಂದು ಕಿವೀಸ್ ಆರಂಭಿಕ ಬ್ಯಾಟ್ಸ್​ಮನ್​ ಲ್ಯಾಥಮ್​ ವಿಶ್ವಾಸದಿಂದ ಹೇಳಿದ್ದಾರೆ.

ರನ್​ ಮಷಿನ್​ ಎಂದೇ ಖ್ಯಾತಿ ಗಳಿಸಿದ್ದ ವಿರಾಟ್​ ಕೊಹ್ಲಿ ಏಕದಿನ ಸರಣಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದರು. ನಂತರ ವೆಲ್ಲಿಂಗ್ಟನ್​ನಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಕ್ರಮವಾಗಿ 2 ಮತ್ತು 19 ರನ್ ಗಳಿಸಿ ಔಟಾಗಿದ್ದರು. ಕೊಹ್ಲಿ ಹಾಗೂ ಪೂಜಾರ ಅಂತಹ ಹಿರಿಯ ಅಟಗಾರರ ಬ್ಯಾಟಿಂಗ್​ ವೈಫಲ್ಯದಿಂದ ಭಾರತ ತಂಡ 10 ವಿಕೆಟ್​ಗಳಿಂದ ಸೋಲನುಭವಿಸಿತ್ತು. ಇದರ ಬೆನ್ನಲ್ಲೇ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದರು.

ಟಾಮ್​ ಲ್ಯಾಥಮ್​

ಈ ಕುರಿತು ಮಾತನಾಡಿರುವ ನ್ಯೂಜಿಲ್ಯಾಂಡ್ ತಂಡದ ವಿಕೆಟ್​ ಕೀಪರ್​, "ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್​, ಹಾಗಿ ಎಲ್ಲಾ ವಿಭಾಗದ ಕ್ರಿಕೆಟ್​ನಲ್ಲಿ ನಂಬರ್​ ಒನ್ ಬ್ಯಾಟ್ಸ್​ಮನ್​ ಆಗಿ ದೀರ್ಘ ಸಮಯ ಕಳೆದಿದ್ದಾರೆ. ಆದರೆ, ಈ ಟೂರ್ನಿಯಲ್ಲಿ ಅವರು ವೈಫಲ್ಯಕಂಡಿದ್ದಾರೆ. ಎರಡನೇ ಟೆಸ್ಟ್​ನಲ್ಲಿ ತಿರುಗಿ ಬೀಳಲು ಪ್ರಯತ್ನಿಸುತ್ತಾರೆ. ಆದರೆ, ನಾವು ಅವರಿಗಾಗಿ ವಿಶೇಷ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ. ಈ ಪಂದ್ಯದಲ್ಲಿ ನಮ್ಮ ಬೌಲರ್​ಗಳು ಅವರ ಮೇಲೆ ಮತ್ತೆ ಮೇಲುಗೈ ಸಾಧಿಸಲಿದ್ದಾರೆ ಎಂದು ಲ್ಯಾಥಮ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿರಾಟ್​ ಕೊಹ್ಲಿ

ಕೊಹ್ಲಿ ಎಲ್ಲ ಪರಿಸ್ಥಿತಿಗಳಲ್ಲಿಯೂ ತಾವೊಬ್ಬ ಶ್ರೇಷ್ಠ ಬ್ಯಾಟ್ಸ್​​ಮನ್​ ಎಂದು ತೋರಿಸಿಕೊಟ್ಟಿದ್ದಾರೆ. ಆದರೆ, ಇಲ್ಲಿನ ಪಿಚ್​ನಲ್ಲಿ ವೈಫಲ್ಯ ಅನುಭವಿಸುತ್ತಿರುವ ಈ ಸಮಯವನ್ನು ನಾವು ಉಪಯೋಗಿಸಿಕೊಳ್ಳಲಿದ್ದೇವೆ ಎಂದು ಲ್ಯಾಥಮ್​ ಹೇಳಿದ್ದಾರೆ.

ಬುಮ್ರಾ - ಶಮಿ ವಿರುದ್ಧ ಎಚ್ಚರಿಕೆ ವಹಿಸಬೇಕಿದೆ:ಮೊದಲ ಟೆಸ್ಟ್​ನಲ್ಲಿ ಭಾರತದ ಸ್ಟಾರ್​ ಬೌಲರ್​ಗಳಾದ ಬುಮ್ರಾ, ಶಮಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಆದರೆ ಲ್ಯಾಥಮ್​ ಮಾತ್ರ ಅವರಿಬ್ಬರ ಮೇಲೆ ನಾವು ಎಚ್ಚರ ವಹಿಸಬೇಕಿದೆ ಎಂದಿದ್ದಾರೆ.

ಮೊಹಮ್ಮದ್​ ಶಮಿ

"ನಾವು ಮೊದಲ ಟೆಸ್ಟ್​ನಲ್ಲಿ ಅವರಿಬ್ಬರ ಬೌಲಿಂಗ್​ಗೆ ಉತ್ತಮವಾಗಿ ಆಡಿದ್ದೇವೆ. ಆದರೆ ಅವರು ವಿಶ್ವದರ್ಜೆಯ ಬೌಲರ್​ಗಳು, ಹಾಗಾಗಿ ನಾವು ಅವರ ಬಗ್ಗೆ ಎಚ್ಚರಿಕೆಯಿಂದಲೇ ಆಡಬೇಕಿದೆ" ಎಂದಿದ್ದಾರೆ.

ಜಸ್ಪ್ರೀತ್​ ಬುಮ್ರಾ

ಇನ್ನು ಗಾಯದಿಂದಾಗಿ ಮೊದಲನೇ ಪಂದ್ಯಕ್ಕೆ ಅಲಭ್ಯರಾಗಿದ್ದ ನೀಲ್ ವ್ಯಾಗ್ನರ್ ಎರಡನೇ ಹಣಾಹಣಿಗೆ ತಂಡಕ್ಕೆ ಮರಳುತ್ತಿದ್ದು, ಬೌಲಿಂಗ್ ಇನ್ನಷ್ಟು ಬಲಿಷ್ಟವಾಗಲಿದೆ ಎಂದು ಲ್ಯಾಥಮ್​​ ತಿಳಿಸಿದ್ದಾರೆ.

ABOUT THE AUTHOR

...view details