ಕರ್ನಾಟಕ

karnataka

ETV Bharat / sports

ಭಾರತ-ನ್ಯೂಜಿಲ್ಯಾಂಡ್ ದ್ವಿತೀಯ ಟಿ-20: ಟಾಸ್​ ಗೆದ್ದ ಕಿವೀಸ್ ಬ್ಯಾಟಿಂಗ್.. - ಭಾರತ vs ನ್ಯೂಜಿಲ್ಯಾಂಡ್ ಟಿ-20

ಆಕ್ಲೆಂಡ್​ನ ಈಡನ್ ಪಾರ್ಕ್​ನಲ್ಲಿ ನಡೆಯುತ್ತಿರುವ ದ್ವಿತೀಯ ಟಿ-20 ಪಂದ್ಯದಲ್ಲಿ ಟಾಸ್​ ಗೆದ್ದ ವಿಲಿಯಮ್ಸನ್​ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

india vs new zealand 2nd T20ಭಾರತ-ನ್ಯೂಜಿಲ್ಯಾಂಡ್ ದ್ವಿತೀಯ ಟಿ-20
ಟಾಸ್​ ಗೆದ್ದ ಕಿವೀಸ್ ಬ್ಯಾಟಿಂಗ್ ಆಯ್ಕೆ

By

Published : Jan 26, 2020, 12:09 PM IST

ಆಕ್ಲೆಂಡ್:ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆತಯತ್ತಿರುವ ಎರಡನೇ ಟಿ-20 ಪಂದ್ಯದಲ್ಲಿ ಟಾಸ್​ಗೆದ್ದ ಕಿವೀಸ್ ನಾಯಕ ವಿಲಿಯಮ್ಸನ್​ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಮೊದಲ ಟಿ-20 ಪಂದ್ಯದಲ್ಲಿ ಆರು ವಿಕೆಟ್‌ಗಳ ಜಯ ಸಾಧಿಸಿರುವ ಟೀಂ ಇಂಡಿಯಾ ಈಡನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಗೆಲುವಿನ ಓಟ ಮುಂದುವರೆಸಲು ಮತ್ತು ಸರಣಿಯಲ್ಲಿ ಮುನ್ನಡೆ ಸಾಧಿಸುವ ಹುಮ್ಮಸ್ಸಿನಲ್ಲಿದೆ.

204 ರನ್‌ಗಳ ಕಠಿಣ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾದ ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಿತ್ತು. ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಎರಡೂ ತಂಡದ ಬ್ಯಾಟ್ಸ್‌ಮನ್‌ಗಳು ಮೊದಲ ಟಿ-20 ಪಂದ್ಯದಲ್ಲಿ ಉತ್ತಮ ಆಟವಾಡಿದ್ದರು. ಒಂದೇ ಪಂದ್ಯದಲ್ಲಿ ಐದು ಅರ್ಧಶತಕಗಳು ದಾಖಲಾಗಿದ್ದವು. ಹೀಗಾಗಿ ಇಂದಿನ ಪಂದ್ಯದಲ್ಲೂ ಉಭಯ ತಂಡಗಳ ನಡುವೆ ಬಿಗ್​ಫೈಟ್​ ನಿರೀಕ್ಷೆಯಿದೆ.

ಉಭಯ ತಂಡಗಳು ಇಂತಿವೆ:

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶಾರ್ಮಾ, ಕೆ ಎಲ್ ರಾಹುಲ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ಶಿವಂ ದುಬೆ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್‍ಪ್ರೀತ್ ಬುಮ್ರಾ, ಯಜುವೇಂದ್ರ ಚಹಲ್, ಮೊಹಮ್ಮದ್ ಶಮಿ.

ನ್ಯೂಜಿಲ್ಯಾಂಡ್:ಕೇನ್ ವಿಲಿಯಮ್ಸನ್(ನಾಯಕ), ಮಾರ್ಟಿನ್ ಗಫ್ಟಿಲ್, ಕಾಲಿನ್ ಮನ್ರೋ, ಟೀ ಸೈಫರ್ಟ್, ರಾಸ್ ಟೇಲರ್, ಕಾಲಿನ್ ಡಿ ಗ್ರ್ಯಾಂಡ್‍ಹೋಮ್, ಮಿಚೆಲ್ ಸಾಂಟ್ನರ್, ಟೀಮ್ ಸೌಥಿ, ಈಶ್ ಸೋಧಿ, ಬ್ಲೈರ್ ಟಿಕ್ನರ್, ಹೇಮಿಸ್​ ಬೆನೆಟ್.

ABOUT THE AUTHOR

...view details