ವೆಲ್ಲಿಂಗ್ಟನ್:ವರುಣನ ಉಪಟಳದಿಂದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೊದಲನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯವಾಗಿದೆ. ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 122 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಕಿವೀಸ್ ಬೌಲರ್ಗಳು ಆಘಾತ ನೀಡಿದ್ರು. ಆರಂಭಿಕ ಆಟಗಾರ ಪೃಥ್ವಿ ಶಾ ಕೇವಲ 16 ರನ್ ಗಳಿಸಿ ಸೌಥಿಗೆ ವಿಕೆಟ್ ಒಪ್ಪಿಸಿದ್ರು. ನಂತರ ಬಂದ ಭರವಸೆಯ ಆಟಗಾರ ಚೇತೇಶ್ವರ್ ಪುಜಾರ ಕೂಡ ಕೇವಲ 11 ರನ್ ಗಳಿಸಿ ಔಟ್ ಆಗುವ ಮೂಲಕ ನಿರಾಸೆ ಅನುಭವಿಸಿದ್ರು.
ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾಕ್ಕೆ ಆಸರೆಯಾಗಬೇಕಿದ್ದ ನಾಯಕ ವಿರಾಟ್ ಕೊಹ್ಲಿ 2 ರನ್ ಗಳಿಸಿ ಜೆಮಿಸನ್ ಬೌಲಿಂಗ್ನಲ್ಲಿ ರಾಸ್ ಟೇಲರ್ಗೆ ಕ್ಯಾಚ್ ನೀಡಿದ್ರು. 40 ರನ್ಗಳಾಗುವಷ್ಟರಲ್ಲೇ ಭಾರತ ತಂಡ ಪ್ರಮುಖ ನಾಲ್ಕು 3 ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು.
ಒಂದೆಡೆ ವಿಕೆಟ್ ಬಿದ್ದರೂ ಉತ್ತಮವಾಗಿಯೇ ಬ್ಯಾಟ್ ಬೀಸುತ್ತಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಬೌಲ್ಟ್ ಎಸೆತದಲ್ಲಿ ಜೆಮಿಸನ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ಇತ್ತ ಹನುಮ ವಿಹಾರಿ ಕೂಡ ಭಾರತ ತಂಕ್ಕೆ ಆಸರೆಯಾಗಲಿಲ್ಲ. ಕೇವಲ 7 ರನ್ ಗಳಿಸಿ ನಿರ್ಗಮಿಸಿದ್ರು. ಅಂತಿಮ ಸೆಷನ್ಗೂ ಮೊದಲು ಮಳೆ ಬಂದ ಕಾರಣ ಮೊದಲ ದಿನದಾಟ ಅಂತ್ಯಗೊಳಿಸಿಸಲಾಗಿದೆ.
ಭಾರತ ತಂಡಕ್ಕೆ ಉಪನಾಯಕನ ಆಸರೆ:ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಉಪನಾಯಕ ಅಜಿಂಕ್ಯಾ ರಹಾನೆ ಸದ್ಯ ಟೀಂ ಇಂಡಿಯಾದ ಭರವಸೆ. 122 ಎಸೆತಗಳನ್ನ ಎದುರಿಸಿರುವ ರಹಾನೆ 4 ಬೌಡರಿ ಸಹಿತ 38 ರನ್ ಗಳಿಸಿದ್ದು, 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇತ್ತ ಯುವ ವಿಕೆಟ್ ಕೀಪರ್ ರಿಷಭ್ ಪಂತ್ 37 ಎಸೆತಗಳಲ್ಲಿ 10 ರನ್ಗಳಿಸಿ ಅಜೇಯರಾಗಿದ್ದಾರೆ.
ಕಿವೀಸ್ ತಂಡದ ಪರ ಉತ್ತಮ ಸ್ಪೆಲ್ ಮಾಡಿದ ಜೆಮಿಸನ್ ಮೂರು ವಿಕೆಟ್ ಪಡೆದ್ರೆ, ಟ್ರೆಂಟ್ ಬೋಲ್ಟ್ ಮತ್ತು ಟಿಮ್ ಸೌಥಿ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.