ಕರ್ನಾಟಕ

karnataka

ETV Bharat / sports

ಧವನ್​ಗಿಲ್ಲ ಅವಕಾಶ: ರೋಹಿತ್​ ಜೊತೆ ಟಿ-20 ಓಪನರ್ ಆಗಿ ಕನ್ನಡಿಗ ರಾಹುಲ್​! - ಇಂಗ್ಲೆಂಡ್​ ವಿರುದ್ಧ ಟಿ-20 ಸರಣಿ

ಇಂಗ್ಲೆಂಡ್​ ವಿರುದ್ಧದ ಟಿ-20 ಕ್ರಿಕೆಟ್​ ಸರಣಿಯಲ್ಲಿ ರೋಹಿತ್​ ಶರ್ಮಾ ಜತೆ ಯಾರು ಇನ್ನಿಂಗ್ಸ್​ ಆರಂಭ ಮಾಡಲಿದ್ದಾರೆ ಎಂಬುದಕ್ಕೆ ಇದೀಗ ವಿರಾಟ್​ ಕೊಹ್ಲಿ ಉತ್ತರ ನೀಡಿದ್ದು, ಆರಂಭಿಕರಾಗಿ ಕನ್ನಡಿಗ ರಾಹುಲ್​ ಕಣಕ್ಕಿಳಿಯಲಿದ್ದಾರೆ.

KL Rahul
KL Rahul

By

Published : Mar 11, 2021, 7:25 PM IST

ಅಹಮದಾಬಾದ್​: ನಾಳೆಯಿಂದ ಇಂಗ್ಲೆಂಡ್​ ವಿರುದ್ಧದ ಟಿ-20 ಕ್ರಿಕೆಟ್ ಸರಣಿ ಆರಂಭಗೊಳ್ಳಲಿದ್ದು, ಟೀಂ ಇಂಡಿಯಾ ಪರ ಯಾರು ಆರಂಭಿಕರಾಗಿ ಇನ್ನಿಂಗ್ಸ್​ ಆರಂಭಿಸಲಿದ್ದಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇದಕ್ಕೆ ಖುದ್ದಾಗಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಉತ್ತರ ನೀಡಿದ್ದಾರೆ.

ಟೀಂ ಇಂಡಿಯಾ ಆರಂಭಿಕ ಶಿಖರ್​

ಟೂರ್ನಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ವಿರಾಟ್​ ಕೊಹ್ಲಿ ಮಾತನಾಡಿದ್ದು, ಕಳೆದ ಕೆಲ ಟೂರ್ನಿಗಳಲ್ಲಿ ರೋಹಿತ್​ ಹಾಗೂ ರಾಹುಲ್​​ ಸತತವಾಗಿ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಅವರೇ ಇನ್ನಿಂಗ್ಸ್​ ಆರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಜತೆಗೆ ಶಿಖರ್​ ಧವನ್​ ನಮಗೆ ಮೂರನೇ ಓಪನರ್​ ಎಂದಿದ್ದಾರೆ. ತಂಡದಲ್ಲಿ ಕೆಲ ಹೊಸ ಮುಖಗಳು ಅವಕಾಶ ಪಡೆದುಕೊಂಡಿದ್ದು, ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಅವರು ನಿರರ್ಗಳವಾಗಿ ತಮ್ಮ ಪ್ರದರ್ಶನ ತೋರಬೇಕಾಗಿದೆ ಎಂದಿದ್ದಾರೆ.

ರೋಹಿತ್​ ಶರ್ಮಾ

ಇದನ್ನೂ ಓದಿ: ನಾಳೆಯಿಂದ ಟಿ-20 ಫೈಟ್​: ಹೊಸ ದಾಖಲೆಗಳ ಮೇಲೆ ವಿರಾಟ್​, ರೋಹಿತ್​ ಕಣ್ಣು

ಐಸಿಸಿ ಟಿ-20ಯಲ್ಲಿ ಇಂಗ್ಲೆಂಡ್​ ನಂಬರ್​ 1 ತಂಡವಾಗಿದ್ದು, ಟಿ-20 ವಿಶ್ವಕಪ್​​ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದಿದ್ದಾರೆ. ಇಂಗ್ಲೆಂಡ್​ ವಿರುದ್ಧ ಮುಕ್ತಾಯಗೊಂಡ ಟೆಸ್ಟ್​ ಕ್ರಿಕೆಟ್​ನಲ್ಲಿ ರೋಹಿತ್​ ಶರ್ಮಾ ಅತಿ ಹೆಚ್ಚು ರನ್ ​ಗಳಿಕೆ ಮಾಡಿದ್ದು, ಶಿಖರ್​ ಧವನ್​ ಕಳೆದ ಕೆಲ ತಿಂಗಳಿಂದ ಯಾವುದೇ ಕ್ರಿಕೆಟ್​ ಪಂದ್ಯ ಆಡಿಲ್ಲ. ಇನ್ನು ರಾಹುಲ್​​ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು.

ಇನ್ನು ಭಾರತದ ಲೆಗ್​ ಸ್ಪಿನ್ನರ್​ ವರುಣ್​ ಚಕ್ರವರ್ತಿ ಫಿಟ್​ನೆಟ್​ ಪರೀಕ್ಷೆಯಲ್ಲಿ ಫೇಲ್​ ಆಗಿದ್ದು, ಟಿ-20 ಸರಣಿಯಿಂದ ಹೊರಗುಳಿಯಲಿದ್ದಾರೆ. ಇದರ ಮಧ್ಯೆ ವೇಗಿ ನಟರಾಜನ್​ ಭುಜದ ನೋವಿನಿಂದ ಬಳಲುತ್ತಿರುವ ಕಾರಣ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.

ABOUT THE AUTHOR

...view details