ಪುಣೆ:ಪ್ರವಾಸಿ ಇಂಗ್ಲೆಂಡ್ ವಿರುದ್ಧ ಈಗಾಗಲೇ ಟೆಸ್ಟ್ ಹಾಗೂ ಟಿ-20 ಸರಣಿ ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ, ಇಂದು ಕೊನೆಯ ಏಕದಿನ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಹ್ಯಾಟ್ರಿಕ್ ಸರಣಿ ಗೆಲ್ಲುವ ತವಕದಲ್ಲಿದೆ.
ವಿಕೆಟ್ ಪಡೆದ ಸಂಭ್ರಮದಲ್ಲಿ ಇಂಡಿಯಾ ಭಾರತ-ಇಂಗ್ಲೆಂಡ್ ತಂಡಗಳ ನಡುವೆ ಇಂದು ಮೂರು ಏಕದಿನ ಪಂದ್ಯಗಳ ಕೊನೆಯ ಪಂದ್ಯ ನಡೆಯಲಿದ್ದು, ಸರಣಿ ಈಗಾಗಲೇ 1-1 ಅಂತರದಿಂದ ಸಮಬಲಗೊಂಡಿರುವ ಕಾರಣ ಫೈನಲ್ ಪಂದ್ಯ ರೋಚಕತೆಯಿಂದ ಕೂಡಿದೆ.
ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದ್ದ ಟೀಂ ಇಂಡಿಯಾ, ಎರಡನೇ ಏಕದಿನ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿನ ಕಳಪೆ ಪ್ರದರ್ಶನಿಂದ 6 ವಿಕೆಟ್ಗಳ ಸೋಲು ಕಂಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಕೆಲವೊಂದು ಬದಲಾವಣೆ ಮಾಡುವ ಸಾಧ್ಯತೆ ಇದೆ. ಫೈನಲ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಕುಲ್ದೀಪ್ ಯಾದವ್, ಕೃನಾಲ್ ಪಾಂಡ್ಯ ಬದಲಿಗೆ ಯಜುವೇಂದ್ರ ಚಹಾಲ್ ಹಾಗೂ ವಾಷಿಂಗ್ಟನ್ ಸುಂದರ್ಗೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದ್ದು, ವೇಗಿಗಳಾಗಿ ಪ್ರಸಿದ್ಧ್ ಕೃಷ್ಣ ಹಾಗೂ ಭುವನೇಶ್ವರ್ ಕುಮಾರ್ ಮುಂದುವರೆಯಲಿದ್ದಾರೆ. ಫೈನಲ್ ಪಂದ್ಯದಲ್ಲಿ ಮತ್ತಷ್ಟು ಪ್ರಯೋಗ ಮಾಡುವ ಉದ್ದೇಶದಿಂದ ಯಾರ್ಕರ್ ಸ್ಪೇಷಲಿಸ್ಟ್ ಟಿ. ನಟರಾಜನ್ಗೆ ಅವಕಾಶ ನೀಡಿದ್ರೆ ಆಶ್ಚರ್ಯ ಪಡೆಬೇಕಾಗಿಲ್ಲ.
ಪ್ರಸಿದ್ಧ್ ಕೃಷ್ಣ ಬೌಲಿಂಗ್ ಇದನ್ನೂ ಓದಿ: ಸ್ಟೋಕ್ಸ್ ಐಪಿಎಲ್ನಲ್ಲೂ ಬೌಲರ್ಗಳನ್ನು ಇದೇ ರೀತಿ ಹೆದರಿಸಲಿದ್ದಾರೆಂದು ಭಾವಿಸುವೆ : ಜೋಸ್ ಬಟ್ಲರ್
ಆದರೆ ಈಗಾಗಲೇ ಟೆಸ್ಟ್ ಸರಣಿಯಲ್ಲಿ 3-1, ಟಿ-20 ಪಂದ್ಯದಲ್ಲಿ 3-2 ಅಂತರದ ಸೋಲು ಕಂಡಿರುವ ಇಂಗ್ಲೆಂಡ್ ಪಡೆ ಕೊನೆಯ ಪಕ್ಷ ಏಕದಿನ ಸರಣಿ ಕೈವಶ ಮಾಡಿಕೊಳ್ಳುವ ಉದ್ದೇಶ ಹೊಂದಿದೆ. ಇಂಗ್ಲೆಂಡ್ ತಂಡದ ಕೆಲ ಬ್ಯಾಟ್ಸಮನ್ಗಳು ಇದೀಗ ಫಾರ್ಮ್ಗೆ ಮರಳಿದ್ದು, ಸ್ಟೋಕ್ಸ್, ಜಾಸನ್ ರಾಯ್, ಬೈರ್ಸ್ಟೋವ್ ಹಿಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇವರನ್ನ ತಡೆದು ಹಾಕುವಲ್ಲಿ ಟೀಂ ಇಂಡಿಯಾ ವಿಫಲವಾದರೆ ಪಂದ್ಯ ಕೈಚೆಲ್ಲುವುದು ಬಹುತೇಕ ಖಚಿತವಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿರುವ ಎಂಸಿಎ ಮೈದಾನದಲ್ಲಿ ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭಗೊಳ್ಳಲಿದೆ.
ಬ್ಯಾಟಿಂಗ್ನಲ್ಲಿ ಮಿಂಚಿದ್ದ ಬೈರ್ಸ್ಟೋವ್- ಸ್ಟೋಕ್ಸ್ ಉಭಯ ತಂಡಗಳು ಇಂತಿವೆ
ಭಾರತ:ವಿರಾಟ್ ಕೊಹ್ಲಿ(ಕ್ಯಾಪ್ಟನ್), ರೋಹಿತ್ ಶರ್ಮಾ(ಉಪನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್(ವಿ.ಕೀ), ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಕೃಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಟಿ. ನಟರಾಜನ್, ಭುವನೇಶ್ವರ್ ಕುಮಾರ್,ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್
ಇಂಗ್ಲೆಂಡ್:ಜೋಸ್ ಬಟ್ಲರ್(ಕ್ಯಾಪ್ಟನ್), ಮೊಯಿನ್ ಅಲಿ,ಸ್ಯಾಮ್ ಕರನ್, ಟಾಮ್ ಕರನ್, ಅದಿಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಜಾನಿ ಬೈರ್ಸ್ಟೋ, ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್, ಪಾರ್ಕಿನ್ಸನ್, ರೀಸ್ ಟಾಫ್ಲಿ, ಮಾರ್ಕ್ ವುಡ್, ಜೇಕ್ ಬೆಲ್, ಕ್ರಿಸ್ ಜೋರ್ಡಾನ್, ಡೇವಿಡ್ ಮಲನ್