ಚೆನ್ನೈ:ಇಲ್ಲಿನ ಎಂಎ. ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಭಾರತ - ಇಂಗ್ಲೆಂಡ್ ತಂಡಗಳ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 286ರನ್ಗಳಿಗೆ ಆಲೌಟ್ ಆಗಿದ್ದು, ಎದುರಾಳಿ ತಂಡಕ್ಕೆ 482ರನ್ಗಳ ಗೆಲುವಿನ ಟಾರ್ಗೆಟ್ ನೀಡಿದೆ.
ಮೊದಲ ಇನ್ನಿಂಗ್ಸ್ನಲ್ಲಿ 195ರನ್ಗಳ ಮುನ್ನಡೆ ಪಡೆದುಕೊಂಡಿದ್ದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಆರ್ ಅಶ್ವಿನ್ ಅಮೋಘ ಶತಕ(106), ಕ್ಯಾಪ್ಟನ್ ವಿರಾಟ್ ಕೊಹ್ಲಿ(62)ರನ್ಗಳ ನೆರವಿನಿಂದ 85.5 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 286ರನ್ ಗಳಿಕೆ ಮಾಡಿದೆ.
ಓದಿ: ಇಂಡಿಯಾ ವರ್ಸಸ್ ಇಂಗ್ಲೆಂಡ್: ಒಂದೇ ಟೆಸ್ಟ್ನಲ್ಲಿ ಶತಕ, 5 ವಿಕೆಟ್ ಪಡೆದು ಮಿಂಚಿದ ಆರ್.ಅಶ್ವಿನ್
ಇಂಗ್ಲೆಂಡ್ ತಂಡದ ಪರ ಜಾಕ್ ಲೆಚ್ ಹಾಗೂ ಮೊಯಿನ್ ಅಲಿ ತಲಾ 4ವಿಕೆಟ್ ಪಡೆದುಕೊಂಡರೆ, ಒಲಿ ಸ್ಟೋನ್ 1ವಿಕೆಟ್ ಕಬಳಿಸಿದ್ದಾರೆ. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕದ ನೆರವಿನಿಂದ 329ರನ್ಗಳಿಕೆ ಮಾಡಿತ್ತು. ಇನ್ನು ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 134ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತ್ತು.
ಇನ್ನು ಎರಡು ದಿನಗಳ ಆಟ ಬಾಕಿ ಇರುವ ಕಾರಣ ಎರಡನೇ ಟೆಸ್ಟ್ ಪಂದ್ಯದಲ್ಲೂ ನಿಖರ ಫಲಿತಾಂಶ ಹೊರಬರುವ ಸಾಧ್ಯತೆ ಇದೆ. ಈಗಾಗಲೇ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿದೆ. ಟೆಸ್ಟ್ ಕ್ರಿಕೆಟ್ನಲ್ಲಿ 5ನೇ ಶತಕ ಸಿಡಿಸಿ ಮಿಂಚಿದ ಅಶ್ವಿನ್ ಒಂದೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಪಡೆದುಕೊಂಡಿರುವ ಸಾಧನೆ ಸಹ ನಿರ್ಮಿಸಿದರು.