ಪಾಟ್ಶೆಫ್ಸ್ಟ್ರೂಮ್(ದಕ್ಷಿಣ ಆಫ್ರಿಕಾ):ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಬಾಂಗ್ಲಾ 3ವಿಕೆಟ್ಗಳ ಗೆಲುವು ದಾಖಲು ಮಾಡಿ ಹೊಸ ದಾಖಲೆ ನಿರ್ಮಿಸಿದ್ದು, ಚೊಚ್ಚಲ ಬಾರಿಗೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ.
ಫೈನಲ್ ಗೆಲ್ಲುತ್ತಿದ್ದಂತೆ ದುರ್ವರ್ತನೆ... ಟೀಂ ಇಂಡಿಯಾ ವಿರುದ್ಧ ಕೆಟ್ಟದಾಗಿ ವರ್ತಿಸಿದ ಬಾಂಗ್ಲಾ ಕ್ರಿಕೆಟರ್ಸ್! - ಅಂಡರ್-19 ವಿಶ್ವಕಪ್ ಫೈನಲ್
ಟೀಂ ಇಂಡಿಯಾ ವಿರುದ್ಧದ ಐಸಿಸಿ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಎದುರಾಳಿ ತಂಡ ಬಾಂಗ್ಲಾ ಗೆಲುವು ದಾಖಲು ಮಾಡುತ್ತಿದ್ದಂತೆ ಮೈದಾನದಲ್ಲಿ ದುವರ್ತನೆ ತೋರಿರುವ ಘಟನೆ ನಡೆದಿದೆ.
ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಮೈದಾನಕ್ಕೆ ನುಗ್ಗಿರುವ ಬಾಂಗ್ಲಾ ಪ್ಲೇಯರ್ಸ್ ಟೀಂ ಇಂಡಿಯಾ ಆಟಗಾರರ ಎದುರು ಕೆಟ್ಟದಾಗಿ ವರ್ತಿಸಿದ್ದಾರೆ. ಈ ವೇಳೆ ಬಾಂಗ್ಲಾದೇಶದ ಆಟಗಾರನೋರ್ವ ಭಾರತೀಯ ಪ್ಲೇಯರ್ಸ್ ಎದುರುಗಡೆ ನಿಂತುಕೊಂಡು ದುರ್ವರ್ತನೆ ತೋರಿದ್ದು, ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಈ ವೇಳೆ, ಟೀಂ ಇಂಡಿಯಾ ಪ್ಲೇಯರ್ ಅವರನ್ನ ದೂರ ತಳ್ಳಿದ್ದಾರೆ. ಮೈದಾನದಲ್ಲಿದ್ದ ಅಂಪೈರ್, ಇಬ್ಬರು ಆಟಗಾರರನ್ನ ದೂರ ಕರೆದುಕೊಂಡು ಹೋಗಿದ್ದಾರೆ. ಪಂದ್ಯದ ವೇಳೆ ಭಾರತೀಯ ಆಟಗಾರರ ಮುಂದೆ ಬಾಂಗ್ಲಾ ಪ್ಲೇಯರ್ಸ್ ಅನೇಕ ಸಲ ಸ್ಲೆಡ್ಜಿಂಗ್ ಸಹ ಮಾಡಿದ್ದಾರೆ. ನಿನ್ನೆಯ ಫೈನಲ್ನಲ್ಲಿ ಟೀಂ ಇಂಡಿಯಾ ನೀಡಿದ್ದ 177ರನ್ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ಪಂದ್ಯವನ್ನು ಡಕ್ವರ್ಥ್ ಲೂಯಿಸ್ ನಿಯಮದನ್ವಯ ಗೆದ್ದುಕೊಂಡಿದೆ.