ಕರ್ನಾಟಕ

karnataka

ETV Bharat / sports

ಭಾರತ vs​ ಬಾಂಗ್ಲಾ ಟಿ20: ನೆಟ್ ಅಭ್ಯಾಸದ ವೇಳೆ ರೋಹಿತ್​ ಗಾಯ - ಟಿ-20 ಕ್ರಿಕೆಟ್​ ಸರಣಿ

ಅರುಣ್​ ಜೇಟ್ಲಿ ಮೈದಾನದಲ್ಲಿ ನವೆಂಬರ್​ 3ರಂದು ಭಾರತ-ಬಾಂಗ್ಲಾ ತಂಡಗಳ ನಡುವೆ ಮೊದಲ ಟಿ-20 ಪಂದ್ಯ ನಡೆಯಲಿದ್ದು ಉಭಯ ತಂಡಗಳು ಅಭ್ಯಾಸದಲ್ಲಿ ಬೆರಳಿಸುತ್ತಿವೆ.

ರೋಹಿತ್​ ಶರ್ಮಾ

By

Published : Nov 1, 2019, 4:47 PM IST

ನವದೆಹಲಿ:ಬಾಂಗ್ಲಾದೇಶ ವಿರುದ್ಧ ನವೆಂಬರ್​ 3ರಂದು ಅರುಣ್​ ಜೇಟ್ಲಿ ಮೈದಾನದಲ್ಲಿ ಮೂರು ಟಿ-20 ಪಂದ್ಯಗಳ ಕ್ರಿಕೆಟ್​​ ಸರಣಿ ಆರಂಭಗೊಳ್ಳಲಿದೆ. ಅದಕ್ಕಾಗಿ ಈಗಾಗಲೇ ಉಭಯ ತಂಡ ನೆಟ್‌​​ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿವೆ.

ವಿರಾಟ್​​ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ನಾಯಕತ್ವದ ಜವಾಬ್ದಾರಿ ಹೊತ್ತುಕೊಂಡಿರುವ ಹಿಟ್​​ಮ್ಯಾನ್​ ರೋಹಿತ್​ ಶರ್ಮಾ ಅಭ್ಯಾಸದ ವೇಳೆ ಗಾಯಗೊಂಡು ಹೊರಬರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಟೀಂ ಇಂಡಿಯಾ ಅಭ್ಯಾಸ

ಭಾರತದ ಥ್ರೋಡೌನ್ ಪರಿಣತ​ ನುವಾನ್ ಸೆನೆವಿರತ್ನ ಬೌಲಿಂಗ್​ ಮಾಡುತ್ತಿದ್ದ ವೇಳೆ ಏಕಾಏಕಿಯಾಗಿ ಚೆಂಡು ರೋಹಿತ್ ಕಾಲಿಗೆ ಬಡಿದ ಕಾರಣ, ನೋವಿನಿಂದ ತಕ್ಷಣವೇ ಅಭ್ಯಾಸ ಮೊಟಕುಗೊಳಿಸಿ ಕ್ರೀಡಾಂಗಣದಿಂದ ಹೊರನಡೆದಿದ್ದಾರೆ.

ಗಾಯಗೊಂಡಿರುವ ರೋಹಿತ್‌ ಇನ್ನೆರಡು ದಿನಗಳಲ್ಲಿ ಚೇತರಿಸಿಕೊಂಡು ಮೊದಲ ಟಿ20 ಪಂದ್ಯದಲ್ಲಿ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.

ABOUT THE AUTHOR

...view details