ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಟಿ-20 ಸರಣಿ ಮತ್ತು ಟೆಸ್ಟ್ ಸರಣಿಗಾಗಿ ಬಿಸಿಸಿಐ 15 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾವನ್ನ ಪ್ರಕಟ ಮಾಡಿದೆ.
ಟಿ-20ಗೆ ಯುವ ಆಟಗಾರರ ತಂಡ:
ಮೂರು ಪಂದ್ಯಗಳ ಟಿ-20 ಸರಣಿಗೆ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಅಲ್ಲದೇ ನಾಯಕ ವಿರಾಟ್ ಕೊಹ್ಲಿಗೆ ರೆಸ್ಟ್ ನೀಡಲಾಗಿದ್ದು, ಹಿಟ್ ಮ್ಯಾನ್ ರೋಹಿತ್ ಶರ್ಮಾ ತಂಡವನ್ನ ಮುನ್ನಡೆಸಲಿದ್ದಾರೆ.
15 ಆಟಗಾರರ ಟಿ-20 ತಂಡ:ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಸಂಜು ಸ್ಯಾಮ್ಸನ್, ಶ್ರೇಯಸ್ ಐಯ್ಯರ್, ಮನಿಶ್ ಪಾಂಡೆ, ರಿಷಬ್ ಪಂತ್(ಕೀಪರ್), ವಾಷಿಂಗ್ಟನ್ ಸುಂದರ್, ಕೃನಾಲ್ ಪಾಂಡ್ಯ, ಯಜುವೇಂದ್ರ ಚಹಾಲ್, ರಾಹುಲ್ ಚಹಾರ್, ದೀಪಕ್ ಚಹಾರ್, ಖಲೀಲ್ ಅಹ್ಮದ್, ಶಿವಂ ದುಬೆ, ಶಾರ್ದೂಲ್ ಠಾಕೂರ್.
15 ಆಟಗಾರರ ಟೆಸ್ಟ್ ತಂಡ:ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಚೆತೇಶ್ವರ್ ಪುಜಾರ, ಅಜಿಂಕ್ಯಾ ರಹಾನೆ, ಹನುಮ ವಿಹಾರಿ, ವೃದ್ದಿಮಾನ್ ಸಹಾ(ಕೀಪರ್),ರವೀಂದ್ರ ಜಡೇಜಾ, ಆರ್.ಅಶ್ವಿನ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಶುಬ್ಮನ್ ಗಿಲ್, ರಿಷಭ್ ಪಂತ್.
ನವೆಂಬರ್ 3 ರಂದು ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮೊದಲ ಟಿ-20 ಪಂದ್ಯ ನಡೆದರೆ, 2ನೇ ಪಂದ್ಯ ನ.7ಕ್ಕೆ ರಾಜ್ಕೋಟ್ ಮತ್ತು ಮೂರನೇ ಪಂದ್ಯ ನ.10ಕ್ಕೆ ನಾಗ್ಪುರ್ನಲ್ಲಿ ನಡೆಯಲಿದೆ. ಮೊದಲ ಟೆಸ್ಟ್ ಪಂದ್ಯ ನ.14ಕ್ಕೆ ಇಂದೋರ್ನಲ್ಲಿ ನಡೆಯಲಿದ್ದು. ನ.22 ರಂದು ಎರಡನೇ ಟೆಸ್ಟ್ ಪಂದ್ಯ ಕೊಲ್ಕತ್ತಾದಲ್ಲಿ ನಡೆಯಲಿದೆ.