ಕೋಲ್ಕತ್ತಾ:ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ನಲ್ಲಿ ನಿರೀಕ್ಷೆಯಂತೆ ಭಾರತೀಯ ವೇಗಿಗಳು ಪಾರಮ್ಯ ಮೆರೆದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇಶಾಂತ್ ಶರ್ಮಾ ಬಿರುಸಿನ ದಾಳಿಗೆ ಪ್ರವಾಸಿ ತಂಡ ಅಕ್ಷರಶಃ ತತ್ತರಿಸಿದೆ.
ವಿಕೆಟ್ ಕಿತ್ತ ಸಂಭ್ರಮದಲ್ಲಿ ಇಶಾಂತ್ ಶರ್ಮಾ ಬಾಂಗ್ಲಾದೇಶ ತಂಡದ ಮೇಲೆ ಸವಾರಿ ನಡೆಸಿದ ವೇಗಿ ಇಶಾಂತ್ ಮೊದಲ ದಿನವೇ ಕೆಲ ವಿಶೇಷ ದಾಖಲೆ ನಿರ್ಮಾಣ ಮಾಡಿದ್ದಾರೆ.
12 ಓವರ್ ಎಸೆತ ಇಶಾಂತ್ 22 ರನ್ ನೀಡಿ 5 ವಿಕೆಟ್ ಕಿತ್ತಿದ್ದಾರೆ. ಅಹರ್ನಿಶಿ ಟೆಸ್ಟ್ನಲ್ಲಿ ಚೊಚ್ಚಲ ವಿಕೆಟ್ ಹಾಗೂ ಚೊಚ್ಚಲ ಐದು ವಿಕೆಟ್ ಗೊಂಚಲು ಪಡೆದ ಭಾರತೀಯ ಬೌಲರ್ ಎನ್ನುವ ಹೆಗ್ಗಳಿಕೆ ಇಶಾಂತ್ ಪಾಲಾಗಿದೆ.
ಇನ್ನೊಂದು ಗಮನಾರ್ಹ ವಿಷಯವೆಂದರೆ 12 ವರ್ಷದ ಟೆಸ್ಟ್ ಕರಿಯರ್ನಲ್ಲಿ ಇಶಾಂತ್ ಶರ್ಮಾ ಮೊದಲ ಬಾರಿಗೆ ತವರಿನಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಈ ಸಾಧನೆ ಅಹರ್ನಿಶಿ ಟೆಸ್ಟ್ನಲ್ಲಿ ದಾಖಲಾಗಿದ್ದು, ಇದರ ಮಹತ್ವ ಹೆಚ್ಚಿಸಿದೆ ಎನ್ನಬಹುದು.