ಕೋಲ್ಕತ್ತಾ:ಭಾರತ-ಬಾಂಗ್ಲಾದೇಶ ನಡುವಿನ ಅಹರ್ನಿಶಿ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯವಾಗಿದ್ದು, ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿದೆ.
ಪ್ರವಾಸಿ ಬಾಂಗ್ಲಾದೇಶ 106 ರನ್ನಿಗೆ ಆಲೌಟ್ ಆದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಅಷ್ಟೇನು ಉತ್ತಮ ಆರಂಭ ಪಡೆಯಲಿಲ್ಲ.
ಕನ್ನಡಿಗ ಮಯಾಂಕ್ ಅಗರ್ವಾಲ್ 14 ರನ್ನಿಗೆ ವಿಕೆಟ್ ಒಪ್ಪಿಸಿದರೆ, ಭರವಸೆ ಮೂಡಿಸಿದ್ದ ರೋಹಿತ್ ಶರ್ಮಾ ಗಳಿಕೆ 21 ರನ್ನಿಗೆ ಅಂತ್ಯವಾಯಿತು.
ಕೊಹ್ಲಿ ಮುಂದೆ ಅಸಾಧ್ಯದ ಮಾತೇ ಇಲ್ಲ..! ಈ ದಾಖಲೆ ಬರೆದ ಮೊದಲ ಭಾರತೀಯ
ನಂತರದಲ್ಲಿ ತಂಡಕ್ಕೆ ಆಸರೆಯಾದ ಚೇತೇಶ್ವರ ಪೂಜಾರ ಆಕರ್ಷಕ ಅರ್ಧಶತಕ(55) ಗಳಿಸಿ ಪೆವಿಲಿಯನ್ ಸೇರಿದರು. ನಾಯಕ ವಿರಾಟ್ ಕೊಹ್ಲಿ 59 ಹಾಗೂ ಅಜಿಂಕ್ಯ ರಹಾನೆ 23 ರನ್ ಗಳಿಸಿ ಎರಡನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಕೊಹ್ಲಿ ಬಳಗ ಒಟ್ಟಾರೆ 68 ರನ್ ಮುನ್ನಡೆ ಪಡೆದಿದೆ.
ಬಾಂಗ್ಲಾ ಪರ ಇಬಾದತ್ ಹೊಸೈನ್ 2 ಹಾಗೂ ಅಲ್-ಅಮಿನ್ ಹೊಸೈನ್ 1 ವಿಕೆಟ್ ಪಡೆದಿದ್ದಾರೆ.
ಅಲ್ಪ ಮೊತ್ತಕ್ಕೆ ಕುಸಿದ ಬಾಂಗ್ಲಾ..!
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಪ್ರವಾಸಿ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. 17 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ನಡುವೆ ಆರಂಭಿಕ ಆಟಗಾರ ಶದ್ಮಾನ್ ಇಸ್ಲಾಂ ಕೊಂಚ ಪ್ರತಿರೋಧ ತೋರಿದರು.
ಶದ್ಮಾನ್ ಆಟ 29 ರನ್ನಿಗೆ ಅಂತ್ಯವಾಯಿತು. ನಾಯಕ ಮೊಮಿನುಲ್ ಹಕ್, ಮೊಹಮ್ಮದ್ ಮಿಥುನ್ ಹಾಗೂ ಅನುಭವಿ ಆಟಗಾರ ಮುಷ್ಫೀಕರ್ ರಹೀಂ ಶೂನ್ಯಕ್ಕೆ ನಿರ್ಗಮಿಸಿದ್ದು ತಂಡಕ್ಕೆ ದುಬಾರಿಯಾಯಿತು.
ವಿ.ಕೀಪರ್ ಬ್ಯಾಟ್ಸ್ಮನ್ 24 ರನ್ ಗಳಿಸಿದ್ದಾಗ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ನಂತರದಲ್ಲೂ ಯಾವೊಬ್ಬ ಬ್ಯಾಟ್ಸ್ಮನ್ ಕ್ರೀಸ್ಗೆ ಕಚ್ಚಿ ನಿಲ್ಲುವಲ್ಲಿ ವಿಫಲವಾದರು. 30.3 ಓವರ್ ಆಡಿದ ಬಾಂಗ್ಲಾದೇಶ 106 ರನ್ ಗಳಿಸಲಷ್ಟೇ ಶಕ್ತವಾಯಿತು.
ಇಶಾಂತ್ ಬಿರುಗಾಳಿ ಬೌಲಿಂಗ್..! ಪಿಂಕ್ ಬಾಲ್ನಲ್ಲಿ ಹಲವು ದಾಖಲೆ ನಿರ್ಮಾಣ
ಭಾರತದ ಪರ ವೇಗಿಗಳು ಪಾರಮ್ಯ ಮೆರೆದಿದ್ದು, ಹಾಗೂ ಇಶಾಂತ್ ಶರ್ಮಾ 5, ಉಮೇಶ್ ಯಾದವ್ 3 ಹಾಗೂ ಶಮಿ 1 ವಿಕೆಟ್ ಕಿತ್ತರು.