ಸಿಡ್ನಿ(ಆಸ್ಟ್ರೇಲಿಯಾ):ಎಸ್ಸಿಜಿ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮತ್ತೊಂದು ದಾಖಲೆ ಬರೆದ ರನ್ ಮಷಿನ್ ವಿರಾಟ್ ಕೊಹ್ಲಿ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 22 ಸಾವಿರ ರನ್ ಪೂರೈಸಿದ್ದಾರೆ. ಆ ಮೂಲಕ ಈ ಮೈಲಿಗಲ್ಲು ಮುಟ್ಟಿದ 8ನೇ ಆಟಗಾರ ಎಂಬ ಕೀರ್ತಿಯೂ ಅವರಿಗೆ ಸಲ್ಲುತ್ತಿದೆ..
ದ್ವಿತೀಯ ಏಕದಿನ ಪಂದ್ಯದಲ್ಲಿ 89 ರನ್ ಗಳಿಸಿದ ವಿರಾಟ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 22 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಕೊಹ್ಲಿ 22 ಸಾವಿರ ಅಂತಾರಾಷ್ಟ್ರೀಯ ರನ್ ಗಳಿಸಿದ ವೇಗದ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ 34,357 ರನ್, ಕುಮಾರ್ ಸಂಗಕ್ಕಾರ 28,016, ರಿಕಿ ಪಾಂಟಿಂಗ್ 27,483, ಮಹೇಲಾ ಜಯವರ್ಧನೆ 25,957, ಜಾಕ್ ಕಾಲಿಸ್ 25,534, ರಾಹುಲ್ ದ್ರಾವಿಡ್ 24,208 ರನ್ ಗಳಿಸಿದ್ದು, ಬ್ರಿಯಾನ್ ಲಾರ್ 22,358 ರನ್ ಗಳಸಿದ್ದಾರೆ. ಈಗ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ 22 ಸಾವಿರ ರನ್ ಪೂರೈಸಿದ 8ನೇ ಆಟಗಾರನಾಗಿದ್ದಾರೆ.