ಬ್ರಿಸ್ಬೇನ್:ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾಕ್ಕೆ ಗಾಯ ಸಮಸ್ಯೆ ಬಿಟ್ಟೂ ಬಿಡದೆ ಕಾಡಿದ ಪರಿಣಾಮ ನಾಲ್ಕೂ ಟೆಸ್ಟ್ ಪಂದ್ಯಗಳ 11 ಬಳಗದಲ್ಲಿ ಕಾಣಿಸಿಕೊಂಡಿದ್ದು ಇಬ್ಬರು ಆಟಗಾರರು ಮಾತ್ರ.
ಟೂರ್ನಿಗೂ ಮೊದಲೇ ಟೀಂ ಇಂಡಿಯಾ ಆಟಗಾರರಾದ ರೋಹಿತ್ ಮತ್ತು ಇಶಾಂತ್ ಗಾಯಕ್ಕೆ ತುತ್ತಾಗಿದ್ದರು. ಇಶಾಂತ್ ಸರಣಿಯಿಂದ ಹೊರಗುಳಿದರೆ, ರೋಹಿತ್ ಮೂರನೇ ಟೆಸ್ಟ್ ಪಂದ್ಯದಿಂದ ಮೈದಾನಕ್ಕೆ ಇಳಿದಿದ್ದರು. ನಾಯಕ ಕೊಹ್ಲಿ ಮೊದಲ ಟೆಸ್ಟ್ ಪಂದ್ಯದ ಬಳಿಕ ಪಿತೃತ್ವ ರಜೆ ಮೇಲೆ ತವರಿಗೆ ಮರಳಿದ್ರು.
ಆರಂಭಿಕ ಆಟಗಾರರಾದ ಪೃಥ್ವಿ ಶಾ ಮತ್ತು ಮಯಾಂಕ್ ಫಾರ್ಮ್ ಸಮಸ್ಯೆಯಿಂದಾಗಿ 11ರ ಬಳಗದಿಂದ ಹೊರಗುಳಿದ್ರು. ಇನ್ನುಳಿದಂತೆ ಬುಮ್ರಾ, ಅಶ್ವಿನ್, ವಿಹಾರಿ, ಉಮೇಶ್ ಯಾದವ್, ಜಡೇಜ ಗಾಯದ ಕಾರಣದಿಂದಾಗಿ ಸರಣಿ ತೊರೆದಿದ್ದಾರೆ.
ಅಜಿಂಕ್ಯಾ ರಹಾನೆ, ಚೇತೇಶ್ವರ್ ಪೂಜಾರ ಪ್ರಮುಖ ಆಟಗಾರರ ಗಾಯದ ಕಾರಣದಿಂದಾಗಿ ಐವರು ಆಟಗಾರರು ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಹೀಗಾಗಿ ರಹಾನೆ ಮತ್ತು ಚೇತೇಶ್ವರ್ ಪುಜಾರ ಮಾತ್ರ ನಾಲ್ಕೂ ಪಂದ್ಯಗಳ 11ರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದ ಆಟಗಾರರೆಲ್ಲ ಎರಡು, ಮೂರು ಮತ್ತು ಒಂದು ಟೆಸ್ಟ್ ಪಂದ್ಯದಲ್ಲಿ ಮೈದಾನಕ್ಕೆ ಇಳಿದಿದ್ದರು.