ಕರ್ನಾಟಕ

karnataka

ETV Bharat / sports

ಆಸೀಸ್ ವಿರುದ್ಧ‌ ಮೊದಲ ಪಿಂಕ್​ ಬಾಲ್​ ಟೆಸ್ಟ್​: ಭಾರತಕ್ಕೆ ಆರಂಭಿಕ ಆಘಾತ - 1st Test

ಕಾಂಗರೂ ಪಡೆಯ ವಿರುದ್ಧ ಅಡಿಲೇಡ್​​​ನಲ್ಲಿ ಆರಂಭವಾಗಿರುವ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಪಡೆ ಎರಡು ವಿಕೆಟ್ ಕಳೆದುಕೊಂಡಿದೆ. ಭೋಜನ ವಿರಾಮದ ಹೊತ್ತಿಗೆ ಭಾರತ ಎರಡು ವಿಕೆಟ್‌ಗಳ ನಷ್ಟಕ್ಕೆ 41 ರನ್‌ ಗಳಿಸಿದೆ.

India vs Australia Pink ball Test Match
ಪಿಂಕ್​ ಬಾಲ್​ ಟೆಸ್ಟ್

By

Published : Dec 17, 2020, 11:17 AM IST

Updated : Dec 17, 2020, 11:46 AM IST

ಅಡಿಲೇಡ್​ (ಆಸ್ಟ್ರೇಲಿಯಾ): ಕೋವಿಡ್​ ಬಳಿಕ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಮೊದಲ ಪಿಂಕ್ ಬಾಲ್ ಟೆಸ್ಟ್​​ ಪಂದ್ಯ ನಡೆಯುತ್ತಿದೆ. ಟಾಸ್​ ಗೆದ್ದು ಬ್ಯಾಟಿಂಗ್​​ ಆಯ್ಕೆ ಮಾಡಿಕೊಂಡಿರುವ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದೆ.

ಪಂದ್ಯ ಆರಂಭದಲ್ಲಿ ಆಸೀಸ್ ಬೌಲರ್‌ಗಳು ಆರ್ಭಟಿಸಿದ್ದು, ಸ್ಟಾರ್ಕ್​ ಬೌಲಿಂಗ್​ನಲ್ಲಿ ಮಯಾಂಕ್ ಅಗರವಾಲ್ 17ರನ್ ಗಳಿಸಿ ಪೆವಿಲಿಯನ್​ಗೆ ತೆರಳಿದ್ದಾರೆ. ಇದಕ್ಕೂ ಮುನ್ನ ಪೃಥ್ವಿ ಶಾ ಶೂನ್ಯಕ್ಕೆ ಕಮಿನ್ಸ್​​ಗೆ ವಿಕೆಟ್ ಒಪ್ಪಿಸಿದ್ದಾರೆ.

ಸದ್ಯ ಭಾರತ ಎರಡು ವಿಕೆಟ್​ಗೆ 41ರನ್ ಗಳಿಸಿದ್ದು, ಚೇತೇಶ್ವರ ಪೂಜಾರಾ ಹಾಗೂ ವಿರಾಟ್​ ಕೊಹ್ಲಿ ಕ್ರೀಸ್​ನಲ್ಲಿದ್ದಾರೆ.

Last Updated : Dec 17, 2020, 11:46 AM IST

ABOUT THE AUTHOR

...view details