ಕರ್ನಾಟಕ

karnataka

ETV Bharat / sports

ಬಾಕ್ಸಿಂಗ್​ ಡೇ ಟೆಸ್ಟ್​ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಹಾರಾಡಿತು ಕನ್ನಡ ಬಾವುಟ

ಕೋವಿಡ್​ ಸೋಂಕಿನ ಭೀತಿಯಿರುವುದರಿಂದ ಈ ಬಾರಿ ಸ್ಟೇಡಿಯಂನಲ್ಲಿ ಸೀಮಿತ ಜನರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ವಿಶ್ವಪ್ರಸಿದ್ಧ ಮೆಲ್ಬೋರ್ನ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಸುಮಾರು 30 ಸಾವಿರ ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ. ಭಾರತೀಯರು ಕೂಡ ಈ ಪಂದ್ಯದ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವರ್ಷದ ಕೊನೆಯ ಕ್ರಿಕೆಟ್​ ಹಬ್ಬವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕನ್ನಡದ ಬಾವುಟ ಹಾರಾಡಿದ್ದು ವಿಶೇಷವಾಗಿತ್ತು.

ಬಾಕ್ಸಿಂಗ್​ ಡೇ ಟೆಸ್ಟ್
ಬಾಕ್ಸಿಂಗ್​ ಡೇ ಟೆಸ್ಟ್

By

Published : Dec 27, 2020, 7:00 PM IST

ಮೆಲ್ಬೋರ್ನ್​:ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್​ ಡೇ ಪಂದ್ಯದ ನಡುವೆ ಕರ್ನಾಟಕದ ಅಭಿಮಾನಿಗಳು ಕನ್ನಡ ಬಾವುಟವನ್ನು ಹಾರಿಸಿರುವ ಫೋಟೋಗಳು ವೈರಲ್​ ಆಗಿವೆ.

ಆಸ್ಟ್ರೇಲಿಯಾದಲ್ಲಿ ಬಾಕ್ಸಿಂಗ್​ ಡೇ ಟೆಸ್ಟ್​ ಎಂದರೆ ಹಬ್ಬದ ಸಂಭ್ರಮವಿರುತ್ತದೆ. ಕ್ರಿಸ್​ಮಸ್​ ನಂತರ ಈ ಟೆಸ್ಟ್​ ಪಂದ್ಯ ನಡಯುತ್ತಿದ್ದು, ನ್ಯೂಜಿಲ್ಯಾಂಡ್​, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಭಾರಿ ಸಂಖ್ಯೆಯ ವೀಕ್ಷಕರಿದ್ದಾರೆ.

ಕೋವಿಡ್​ ಸೋಂಕಿನ ಭೀತಿಯಿರುವುದರಿಂದ ಈ ಬಾರಿ ಸ್ಟೇಡಿಯಂನಲ್ಲಿ ಸೀಮಿತ ಜನರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ವಿಶ್ವಪ್ರಸಿದ್ಧ ಮೆಲ್ಬೋರ್ನ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಸುಮಾರು 30 ಸಾವಿರ ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ. ಭಾರತೀಯರು ಕೂಡ ಈ ಪಂದ್ಯದ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವರ್ಷದ ಕೊನೆಯ ಕ್ರಿಕೆಟ್​ ಹಬ್ಬವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ವಿಶೇಷವೆಂದರೆ, 2ನೇ ದಿನ ಮೆಲ್ಬೋರ್ನ್​ನಲ್ಲಿ ಕನ್ನಡಿಗರು ಪಂದ್ಯದ ವೀಕ್ಷಣೆಗೆ ಬಂದಿದ್ದು, ಪಂದ್ಯದ ನಡುವೆ ಕನ್ನಡ ಬಾವುಟ ಹಾರಾಟ ಮಾಡಿ ಕನ್ನಡ ಪ್ರೇಮ ಮೆರೆದಿದ್ದಾರೆ. ಈ ಮೂಲಕ ತಾವು ಎಲ್ಲಿದ್ದರೂ ಕನ್ನಡತನವನ್ನು ಮಾತ್ರ ಬಿಡೋದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಇದೇ ವೇಳೆ, ಅಭಿಮಾನಿಗಳು 'ಕಾವೇರಿನೂ ನಮ್ದೆ, ಕಪ್​ ನಮ್ದೆ, ಕಾಶ್ಮೀರನೂ ನಮ್ಮದೆ' ಎಂಬ ನಾಮಫಲಕಗಳನ್ನು ಹಿಡಿದು ಪಂದ್ಯದ ವೇಳೆ ಕ್ಯಾಮರಾಗೆ ಪೋಸ್​ ನೀಡಿದ್ದಾರೆ. ಈ ಫೋಟೋವನ್ನು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿ ವಿದೇಶದಲ್ಲಿರುವ ಕನ್ನಡಿಗರಿಗೆ ಧನ್ಯವಾದ ಅರ್ಪಿಸಿದ್ದಾರೆ.

ABOUT THE AUTHOR

...view details