ಕರ್ನಾಟಕ

karnataka

ETV Bharat / sports

ಇಂಡಿಯಾ ವರ್ಸಸ್​ ಆಸ್ಟ್ರೇಲಿಯಾ ಫೈಟ್​​... ಎದುರಾಳಿ ತಂಡಕ್ಕೆ ವಾರ್ನಿಂಗ್​ ನೀಡಿದ ಬುಮ್ರಾ, ಸೈನಿ! - ಬಲಿಷ್ಠ ಭಾರತ-ಆಸ್ಟ್ರೇಲಿಯಾ ತಂಡ

ನಾಳೆಯಿಂದ ಬಲಿಷ್ಠ ಭಾರತ-ಆಸ್ಟ್ರೇಲಿಯಾ ತಂಡಗಳ ನಡುವೆ ಮೂರು ಏಕದಿನ ಕ್ರಿಕೆಟ್​ ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ಗೆಲುವಿನೊಂದಿಗೆ ಶುಭಾರಂಭ ಮಾಡಲು ಉಭಯ ತಂಡಗಳು ಭರ್ಜರಿ ತಾಲೀಮು ನಡೆಸುತ್ತಿವೆ.

India vs Australia
ಇಂಡಿಯಾ ವರ್ಸಸ್​ ಆಸ್ಟ್ರೇಲಿಯಾ ಫೈಟ್

By

Published : Jan 13, 2020, 9:46 PM IST

ಮುಂಬೈ:ಪ್ರವಾಸಿ ಆಸ್ಟ್ರೇಲಿಯಾ-ಭಾರತ ನಡುವೆ ನಾಳೆಯಿಂದ ಮೂರು ಏಕದಿನ ಕ್ರಿಕೆಟ್​​ ಸರಣಿಯ ಮೊದಲ ಪಂದ್ಯ ಮುಂಬೈನ ವಾಖೆಂಡೆ ಮೈದಾನದಲ್ಲಿ ನಡೆಯಲಿದ್ದು, ಹಣಾಹಣಿಗಾಗಿ ಉಭಯ ತಂಡಗಳು ಭರ್ಜರಿ ತಾಲೀಮು ನಡೆಸಿವೆ.

ಈ ಹಿಂದೆ ಭಾರತದಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ಪಾರಮ್ಯ ಮರೆದಿದ್ದ ಆಸ್ಟ್ರೇಲಿಯಾ ತಂಡ ಐದು ಏಕದಿನ ಪಂದ್ಯಗಳ ಸರಣಿಯನ್ನ 3-2 ಅಂತರದಲ್ಲಿ ಕೈವಶ ಮಾಡಿಕೊಂಡಿತ್ತು. ಇದೀಗ ಕೊಹ್ಲಿ ಪಡೆ ತಿರುಗೇಟು ನೀಡಲು ಸಜ್ಜಾಗಿದೆ. ಬೌಲಿಂಗ್​ ವಿಭಾಗದ ಜವಾಬ್ದಾರಿ ಹೊತ್ತುಕೊಳ್ಳಲಿರುವ ಜಸ್​ಪ್ರೀತ್​ ಬುಮ್ರಾ ಈಗಾಗಲೇ ನೆಟ್​ನಲ್ಲಿ ಅಬ್ಬರಿಸುತ್ತಿದ್ದು, ಅವರೊಂದಿಗೆ ನವದೀಪ್​ ಸೈನಿ ಸಹ ತಮ್ಮ ಕೈಚಳಕ ತೋರಿಸಲು ಸಜ್ಜಾಗಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲು ಬಲಿಷ್ಠ ಟೀಂ ಇಂಡಿಯಾ ಈಗಾಗಲೇ ಪ್ರಕಟಗೊಂಡಿದ್ದು, ಆರಂಭಿಕರಾಗಿ ಸ್ಪೋಟಕ ಬ್ಯಾಟ್ಸಮನ್​ ಶಿಖರ್​ ಧವನ್​ ಹಾಗೂ ರೋಹಿತ್​ ಶರ್ಮಾ ಮೈದಾನ ಹಂಚಿಕೊಳ್ಳುವ ಸಾಧ್ಯತೆ ದಟ್ಟವಾಗಿದ. ಮೂರನೇ ಕ್ರಮಾಂಕದಲ್ಲಿ ಕನ್ನಡಿಗ ರಾಹುಲ್ ಬ್ಯಾಟ್​ ಬೀಸಿದ್ರೆ, ನಾಲ್ಕನೇ ಕ್ರಮಾಂಕದಲ್ಲಿ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಅಬ್ಬರಿಸುವುದು ಕನ್ಫರ್ಮ್​. ಉಳಿದಂತೆ ಮನೀಷ್​ ಪಾಂಡೆ, ಕೇದಾರ್​ ಜಾಧವ್​,ಶ್ರೇಯಸ್​ ಅಯ್ಯರ್​ ಹಾಗೂ ರಿಷಭ್​ ಪಂತ್​ ಸಹ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳಲು ಉತ್ತಮ ಪ್ರದರ್ಶನ ನೀಡುವ ಅನಿವಾರ್ಯತೆ ಎದುರಾಗಿದೆ.

ತಂಡ ಇಂತಿವೆ
ಟೀಂ ಇಂಡಿಯಾ:ವಿರಾಟ್​ ಕೊಹ್ಲಿ(ಕ್ಯಾಪ್ಟನ್​),ರೋಹಿತ್​ ಶರ್ಮಾ,ಶಿಖರ್​ ಧವನ್​,ಕೆಎಲ್​ ರಾಹುಲ್​,ಶ್ರೇಯಸ್​ ಅಯ್ಯರ್​,ಮನೀಷ್​ ಪಾಂಡೆ,ಕೇದಾರ್​ ಜಾಧವ್​,ರಿಷಭ್​ ಪಂತ್​(ವಿ.ಕೀ),ಶಿವಂ ದುಬೆ,ರವೀಂದ್ರ ಜಡೇಜಾ,ಯಜುವೇಂದ್ರ ಚಹಾಲ್​,ಕುಲ್ದೀಪ್​ ಯಾದವ್​,ನವದೀಪ್​ ಸೈನಿ,ಜಸ್​ಪ್ರೀತ್​ ಬುಮ್ರಾ,ಶಾರ್ದೂಲ್​ ಠಾಕೂರ್​,ಮೊಹಮ್ಮದ್ ಶಮಿ.

ಆಸ್ಟ್ರೇಲಿಯಾ ತಂಡ:ಆರೋನ್​ ಫಿಂಚ್​(ಕ್ಯಾಪ್ಟನ್​),ಅಲೆಕ್ಸ್​ ಕ್ಯಾರಿ(ವಿ,ಕೀ),ಕುಮ್ಮಿನ್ಸ್​​,ಆಷ್ಟನ್ ಅಗರ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹ್ಯಾಜಲ್‌ವುಡ್, ಮಾರ್ನಸ್ ಲ್ಯಾಬುಸ್‌ಚಾಗ್ನೆ, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಆಷ್ಟನ್ ಟರ್ನರ್, ಡೇವಿಡ್ ವಾರ್ನರ್, ಆಡಮ್ ಜಂಪಾ.

ABOUT THE AUTHOR

...view details