ಸಿಡ್ನಿ:ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ಕಾಮೆಂಟರಿ ವೇಳೆ ಆಸೀಸ್ ತಂಡದ ಮಾಜಿ ಆಟಗಾರ ಆ್ಯಡಂ ಗಿಲ್ಕ್ರಿಸ್ಟ್ ಟೀಂ ಇಂಡಿಯಾ ವೇಗಿ ನವದೀಪ್ ಸೈನಿ ಕ್ಷಮೆ ಕೇಳಿದ್ದಾರೆ.
ಭಾರತ - ಆಸೀಸ್ ಏಕದಿನ ಪಂದ್ಯ: ಕಂಮೆಂಟರಿ ವೇಳೆ ವೇಗಿ ನವದೀಪ್ ಸೈನಿ ಕ್ಷಮೆ ಕೋರಿದ ಗಿಲ್ಕ್ರಿಸ್ಟ್! - ಸೈನಿ ಕ್ಷಮೆ ಕೇಳಿದ ಆ್ಯಡಂ ಗಿಲ್ಕ್ರಿಸ್ಟ್
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ಕಮೆಂಟರಿ ವೇಳೆ ತಮ್ಮಿಂದಾದ ಪ್ರಮಾದಕ್ಕೆ ಗಿಲ್ಕ್ರಿಸ್ಟ್, ನವದೀಪ್ ಸೈನಿ ಕ್ಷಮೆ ಕೇಳಿದ್ದಾರೆ.
ಆ್ಯಡಂ ಗಿಲ್ಕ್ರಿಸ್ಟ್
ಕಮೆಂಟರಿ ವೇಳೆ ತಮ್ಮಿಂದಾದ ಪ್ರಮಾದಕ್ಕೆ ಗಿಲ್ಕ್ರಿಸ್ಟ್ ಕ್ಷಮೆ ಕೋರಿದ್ದಾರೆ. ಕಾಮೆಂಟರಿ ವೇಳೆ ನವದೀಪ್ ಸೈನಿ ಇತ್ತೀಚೆಗೆ ತಂದೆ ಕಳೆದುಕೊಂಡಿದ್ದರೂ, ತಂಡಕ್ಕಾಗಿ ಆಸ್ಟ್ರೇಲಿಯಾದಲ್ಲೇ ಉಳಿದುಕೊಂಡಿದ್ದಾರೆ ಎಂದಿದ್ದರು.
ಆದರೆ, ಮೊಹಮ್ಮದ್ ಸಿರಾಜ್ ಹೆಸರು ಹೇಳುವ ಬದಲು ನವದೀಪ್ ಸೈನಿ ಹೆಸರು ಹೇಳಿದ್ದರು. ತಮ್ಮ ತಪ್ಪಿನ ಅರಿವಾಗುತ್ತಿದ್ದಂತೇ ಗಿಲ್ ಕ್ರಿಸ್ಟ್ ಕ್ಷಮೆ ಕೋರಿದ್ದಾರೆ. ಈ ಬಗ್ಗೆ ಗಿಲ್ಕ್ರಿಸ್ಟ್ ಟ್ವೀಟ್ ಕೂಡ ಮಾಡಿದ್ದು, ಎಲ್ಲರಲ್ಲಿ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.