ಬ್ರಿಸ್ಬೇನ್:ಮೆಲ್ಬೋರ್ನ್ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಅಮೋಘ ಪ್ರದರ್ಶನ ಮೂಲಕ ಪ್ರಸಕ್ತ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಒಂದೇ ಇ್ನನಿಂಗ್ಸ್ನಲ್ಲಿ 5 ವಿಕೆಟ್ ಪಡೆದ ಏಕೈಕ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಪರ ಆಡುವ ಕನಸುಹೊತ್ತು ಆಸ್ಟ್ರೇಲಿಯಾಕ್ಕೆ ಬಂದಿದ್ದ ವೇಗಿ ಮೊಹಮ್ಮದ್ ಸಿರಾಜ್ ತಂದೆ ಕಳೆದುಕೊಂಡ ನೋವಿನಲ್ಲೂ ತವರಿಗೆ ತೆರಳದೆ ಅಪ್ಪನ ಆಸೇಯನ್ನು ಪೂರ್ಣಗೊಳಿಸಿಲು ಆಸೀಸ್ ನೆಲದಲ್ಲೇ ಉಳಿದ್ರು.ಮೆಲ್ಬೋರ್ನ್ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ ಹೈದರಾಬಾದ್ ಮೂಲದ ವೇಗಿ ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್ ಪಡೆದು ತನ್ನ ತಂದೆಯ ಆಸೆಯನ್ನು ಪೂರ್ಣಗೊಳಿಸಿದ್ರು.
ದ್ವಿತೀಯ ಟೆಸ್ಟ್ಗಾಗಿ ಸಿಡ್ನಿಗೆ ಮೈದಾನಕ್ಕೆ ಬಂದ ಸಿರಾಜ್ಗೆ ದೊಡ್ಡ ಅಪಮಾನ ಎದುರಾಯಿತು, ಮೊಹಮ್ಮದ್ ಸಿರಾಜ್ ಮತ್ತು ತಂಡದ ಹಿರಿಯ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಕುಡಿದ ಮತ್ತಿನಲ್ಲಿದ್ದ ಪ್ರೇಕ್ಷಕರ ಗುಂಪೊಂದು ಅವಾಚ್ಯ ಪದಗಳಿಂದ ನಿಂದಿಸಿದೆ ಎಂದು ಬಿಸಿಸಿಐ ಅಧಿಕಾರಿಗಳು ಮ್ಯಾಚ್ ರೆಫ್ರಿ ಡೇವಿಡ್ ಬೂನ್ಗೆ ವರದಿ ಮಾಡಿದ್ದರು. ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ತಮ್ಮನ್ನು ಬ್ರೌನ್ ಡಾಗ್, ಬಿಗ್ ಮಂಕಿ ಎಂದು ಕರೆದಿದ್ದಾರೆಂದು ಸಿರಾಜ್ ಆರೋಪಿಸಿದ್ದರು. ಈ ಪಂದ್ಯದಲ್ಲಿ ಸಿರಾಜ್ 2 ವಿಕೆಟ್ ಪಡೆದುಕೊಂಡಿದ್ದರು.
ಆದರೆ ಬ್ರಿಸ್ಬೇನ್ ಪಂದ್ಯದಲ್ಲಿ ಘಾತಕ ದಾಳಿ ನಡೆಸಿದ ಸಿರಾಜ್ ದ್ವಿತೀಯ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದು ಅಮೋಘ ಪ್ರದರ್ಶನ ನೀಡಿದ್ರು. ಸರ್ವಶ್ರೇಷ್ಠ ಆಟಗಾರರಾರ ಸ್ಮಿತ್, ವಾರ್ನರ್ ಮತ್ತು ಲಾಬುಶೇನ್ ವಿಕೆಟ್ ಕಬಳಿಸಿ ಮಿಚಿದ್ರ. ಸಿರಾಜ್ ಆಸೀಸ್ ವಿರುದ್ಧದ ಪ್ರಸಕ್ತ ಸರಣಿಯಲ್ಲಿ ಒಂದೇ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದ ಟೀ ಇಂಡಿಯಾದ ಏಕೈಕ ಬೌಲರ್ ಆಗಿದ್ದಾರೆ.
ತಂದೆಯನ್ನು ಕಳೆದುಕೊಂಡ ನೋವು, ಆಸೀಸ್ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ, ಅವಮಾನಗಳನ್ನು ಮೆಟ್ಟಿ ನಿಂತ 26 ವರ್ಷದ ಮೊಹಮ್ಮದ್ ಸಿರಾಜ್ ಅಮೋಘ ಪ್ರದರ್ಶನ ತೋರಿದ್ದಾರೆ.