ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ ಪಂದ್ಯದ 2ನೇ ದಿನದ ಮೊದಲ ಸೆಷನ್ನಲ್ಲಿ ಟೀಂ ಇಂಡಿಯಾ ಬೌಲರ್ಗಳು ಅದ್ಭುತ ಪ್ರದರ್ಶನ ತೋರಿದ್ದು, ಆಸ್ಟ್ರೇಲಿಯಾ ತಂಡ 369 ರನ್ಗಳಿಗೆ ಸರ್ವಪತನ ಕಂಡಿದೆ.
ಆಸ್ಟ್ರೇಲಿಯಾ ಮೊದಲ ದಿನದ ಮುಕ್ತಾಯಕ್ಕೆ 5 ವಿಕೆಟ್ ಕಳೆದುಕೊಂಡು 274 ರನ್ ಗಳಿಸಿತ್ತು. 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಗ್ರೀನ್ ಮತ್ತು ಟಿಮ್ ಪೇನ್ ಇಂದು ಕೂಡ ಉತ್ತಮವಾಗಿ ಬ್ಯಾಟ್ ಬೀಸಿದ್ರು.
3ನೇ ಟೆಸ್ಟ್ ಪಂದ್ಯದಲ್ಲಿನ ಕಳಪೆ ಕೀಪಿಂಗ್ ಮತ್ತು ದುರ್ನಡತೆಯಿಂದ ಟೀಕೆಗೆ ಗುರಿಯಾಗಿದ್ದ ಆಸೀಸ್ ನಾಯಕ ಇಂದು ಟೆಸ್ಟ್ ಕ್ರಿಕೆಟ್ನಲ್ಲಿ 9ನೇ ಅರ್ಧಶತಕ ಸಿಡಿಸಿದ್ರು. ಈ ವೇಳೆ ದಾಳಿಗಿಳಿದ ಶಾರ್ದೂಲ್ ಆಸೀಸ್ ನಾಯಕನನ್ನು ಪೆವಿಲಿಯನ್ಗೆ ಸೇರಿಸಿದ್ರು.
ಮೊದಲ ದಿನದಿಂದಲೂ ಉತ್ತಮವಾಗಿ ಬ್ಯಾಟ್ ಬೀಸಿದ್ದ ಗ್ರೀನ್ ಇಂದು ಕೂಡ ಭಾರತೀಯ ಬೌಲರ್ಗಳನ್ನು ಕಾಡುತ್ತಿದ್ರು. ಆದರೆ 48 ರನ್ ಗಳಿಸಿರುವಾಗ ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಅರ್ಧಶತಕ ವಂಚಿತರಾದ್ರು. ನಂತರದ ಓವರ್ನಲ್ಲಿ ಠಾಕೂರ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದ ಕಮ್ಮಿನ್ಸ್ 2 ರನ್ ಗಳಿಸಿ ಔಟ್ ಆದ್ರು.
100ನೇ ಟೆಸ್ಟ್ ಪಂದ್ಯವಾಡುತ್ತಿರುವ ಲಿಯಾನ್ ಕೆಲ ಕಾಲ ಬೌಂಡರಿಗಳ ಮೂಲಕ ಗಮನ ಸೆಳೆದ್ರು. 24 ರನ್ ಗಳಿಸಿದ ಲಿಯಾನ್ ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಬೌಲ್ಡ್ ಆದ್ರು. ನಂತರ ಬಂದ ಹೆಜಲ್ವುಡ್ 11 ರನ್ ಗಳಿಸಿ ನಟರಾಜನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಆಸ್ಟ್ರೇಲಿಯಾ ಸರ್ವಪತನ ಕಂಡಿತು. 20 ರನ್ ಗಳಿಸಿದ ಸ್ಟಾರ್ಕ್ ಅಜೇಯರಾಗಿ ಉಳಿದ್ರು. ಟೀಂ ಇಂಡಿಯಾ ಪರ ಶಾರ್ದೂಲ್ ಠಾಕೂರ್, ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 3 ವಿಕೆಟ್ ಪಡೆದ್ರೆ, ಸಿರಾಜ್ ಒಂದು ವಿಕೆಟ್ ಪಡೆದಿದ್ದಾರೆ.