ಕರ್ನಾಟಕ

karnataka

ETV Bharat / sports

ಪುಕೋವ್​ಸ್ಕಿ, ಲಾಬುಶೇನ್ ಅರ್ಧಶತಕ: ಮೊದಲ ದಿನದಾಂತ್ಯಕ್ಕೆ ಆಸೀಸ್ ಮೇಲುಗೈ - Labuschagne latest news

ಮೊದಲ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 2 ವಿಕೆಟ್ ಕಳೆದುಕೊಂಡು 166 ರನ್​ ಗಳಿಸಿದ್ದು, ಸ್ಟೀವ್ ಸ್ಮಿತ್ 231 ರನ್ ಮತ್ತಯ ಲಾಬುಶೇಲ್ 67 ರನ್​ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Pucovski hand Australia control
ಪುಕೋವ್​ಸ್ಕಿ, ಲಾಬುಶೇನ್ ಅರ್ಧಶತಕ

By

Published : Jan 7, 2021, 1:33 PM IST

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಆಸೀಸ್ ಬ್ಯಾಟ್ಸ್​ಮನ್​ಗಳು ಉತ್ತಮ ಪ್ರದರ್ಶನ ತೋರಿದ್ದು, ಮೊದಲ ದಿನದ ಅಂತ್ಯಕ್ಕೆ ಕಾಂಗರೂ ಪಡೆ 2 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಸಿರಾಜ್, ಶಾಕ್ ನೀಡಿದ್ರು. ಸರಣಿಯಲ್ಲಿ ಮೊದಲ ಪಂದ್ಯವಾಡುತ್ತಿದ್ದ ಡೇವಿಡ್ ವಾರ್ನರ್ ಕೇವಲ 5 ರನ್​ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಮಳೆಯ ಕಾರಣ ಸುಮಾರು 4 ಗಂಟೆಗಳ ಕಾಲ ಪಂದ್ಯ ಸ್ಥಗಿತಗೊಂಡಿತ್ತು.

ಮೊದಲ ವಿಕೆಟ್ ಪತನವಾದ ನಂತರ ಜೊತೆಯಾದ ವಿಲ್​ ಪುಕೋವ್​ಸ್ಕಿ ಮತ್ತು ಲಾಬುಶೇನ್ ಆಸೀಸ್ ತಂಡಕ್ಕೆ ಆಸರೆಯಾದ್ರು. 2 ಬಾರಿ ಜೀವದಾನ ಪಡೆದ ವಿಲ್​ ಪುಕೋವ್​ಸ್ಕಿ ಪದಾರ್ಪಣೆ ಪಂದ್ಯದಲ್ಲೇ ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದ್ರು. ಇಬ್ಬರು ಆಟಗಾರರು 2ನೇ ವಿಕೆಟ್​ಗೆ 100 ರನ್​ಗಳ ಜೊತೆಯಾಟವಾಡಿದ್ರು.

ಚೊಚ್ಚಲ ಪಂದ್ಯವಾಡುತ್ತಿರುವ ವೇಗಿ ನವದೀಪ್ ಸೈನಿ, ಚೊಚ್ಚಲ ಪಂದ್ಯವಾಡುತ್ತಿದ್ದ ಪುಕೋವ್​ಸ್ಕಿ (62) ಅವರನ್ನು ಎಲ್​ಬಿ ಬಲೆಗೆ ಕಡೆವಿ, ಟೆಸ್ಟ್ ಕ್ರಿಕೆಟ್​ನಲ್ಲಿ ಮೊದಲ ವಿಕೆಟ್ ಕಬಳಿಸಿದ್ರು.

ನಂತರ ಜೊತೆಯಾದ ಲಾಬುಶೇನ್ ಮತ್ತು ಸ್ಮಿತ್​ ಭಾರತೀಯ ಬೌಲರ್​ಗಳ ಬೆವರಿಳಿಸಿದ್ರು. ಕಳೆದ 2 ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಸ್ಮಿತ್ ಇಂದಿನ ಪಂದ್ಯದಲ್ಲಿ ಲಯ ಕಂಡುಕೊಂಡು, ಉತ್ತಮವಾಗಿ ಬ್ಯಾಟ್ ಬೀಸಿದ್ರು. ಈ ಮಧ್ಯೆ ಲಾಬುಶೇನ್ ಟೆಸ್ಟ್ ಕ್ರಿಕೆಟ್​ನಲ್ಲಿ 9ನೇ ಅರ್ಧಶತಕ ದಾಖಲಿಸಿದ್ರು. ಈ ಜೋಡಿ 3ನೇ ವಿಕೆಟ್​ಗೆ ಅಜೇಯ 60 ರನ್​ಗಳ ಕಾಣಿಕೆ ನೀಡಿದೆ.

ಮೊದಲ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 2 ವಿಕೆಟ್ ಕಳೆದುಕೊಂಡು 164 ರನ್​ ಗಳಿಸಿದ್ದು, ಸ್ಟೀವ್ ಸ್ಮಿತ್ 31 ರನ್ ಮತ್ತು ಲಾಬುಶೇಲ್ 67 ರನ್​ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ಸೈನಿ ಮತ್ತು ಸಿರಾಜ್ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.

ABOUT THE AUTHOR

...view details