ಕರ್ನಾಟಕ

karnataka

ETV Bharat / sports

ಭಾರತ -ಆಸ್ಟ್ರೇಲಿಯಾ ನಡುವಿನ ಅಹರ್ನಿಶಿ ಟೆಸ್ಟ್ ವೀಕ್ಷಿಸಲು 27000 ಅಭಿಮಾನಿಗಳಿಗೆ ಅವಕಾಶ​ - india vs australia day night test fans allowed

ಬ್ರಿಸ್ಬೇನ್ ಟೆಸ್ಟ್​ನಲ್ಲಿ 30000 ಮತ್ತು ಮೆಲ್ಬೋರ್ನ್​ನಲ್ಲಿ ನಡೆಯುವ ಬಾಕ್ಸಿಂಗ್​ ಡೇ ಟೆಸ್ಟ್​ಗೆ 25,000 ವೀಕ್ಷಕರಿಗೆ ಕ್ರಿಕೆಟ್ ಆಸ್ಟೇಲಿಯಾ ಅವಕಾಶ ಕಲ್ಪಿಸಿಕೊಟ್ಟಿದೆ.

ಭಾರತ -ಆಸ್ಟ್ರೇಲಿಯಾ
ಭಾರತ -ಆಸ್ಟ್ರೇಲಿಯಾ

By

Published : Nov 10, 2020, 6:54 PM IST

ಮೆಲ್ಬೋರ್ನ್​: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಡಿಸೆಂಬರ್​ 17ರಿಂದ 21ರವರೆಗೆ ಅಡಿಲೇಡ್​ನಲ್ಲಿ ನಡೆಯುವ ಮೊದಲ ಟೆಸ್ಟ್​ ಪಂದ್ಯವನ್ನು ವೀಕ್ಷಿಸಲು 27 ಸಾವಿರ ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ಪ್ರಕಟಣೆ ಹೊರಡಿಸಿದೆ.

ಬಾರ್ಡರ್​-ಗವಾಸ್ಕರ್ ಸರಣಿಯ ಮೊದಲ ಪಂದ್ಯ ಡೇ ಅಂಡ್ ನೈಟ್​ ಪಂದ್ಯವೆಂದು ಘೋಷಿಸಲಾಗಿದೆ. ​ ಎರಡು ಬಲಿಷ್ಠ ತಂಡಗಳು ಸೆಣಲಾಡಲಿರುವ ಈ ಪಂದ್ಯವನ್ನು ವೀಕ್ಷಿಸಲು ಕೋವಿಡ್ ಬಿಕ್ಕಟ್ಟಿನ​ ನಡುವೆಯೂ ಕ್ರೀಡಾಂಗಣದ ಅರ್ಧದಷ್ಟು ಮಂದಿಗೆ ಅಂದರೆ 27000 ಕ್ರಿಕೆಟ್ ಪ್ರಿಯರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಮಂಗಳವಾರ ಸಿಎ ಖಚಿತಪಡಿಸಿದೆ.

ಈ ಪಂದ್ಯ ಭಾರತದ ಪಾಲಿಗೆ 2ನೇ ಹಗಲು ರಾತ್ರಿ ಟೆಸ್ಟ್​ ಪಂದ್ಯ ಮತ್ತು ವಿದೇಶದಲ್ಲಿ ಮೊದಲ ಪಂದ್ಯವಾಗಿದೆ. ಅಹರ್ನಿಶಿ ಟೆಸ್ಟ್​ನಲ್ಲಿ ಭಾರತ ಆಡಿರುವ ಒಂದು ಪಂದ್ಯವನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ ಆಡಿರುವ 4 ಪಂದ್ಯಗಳನ್ನು ಗೆದ್ದು ಹೆಚ್ಚು ಅಹರ್ನಿಶಿ ಪಂದ್ಯಗಳನ್ನು ಗೆದ್ದಿರುವ ತಂಡ ಎಂಬ ದಾಖಲೆ ನಿರ್ಮಿಸಿದೆ.

ಬ್ರಿಸ್ಬೇನ್ ಟೆಸ್ಟ್​ನಲ್ಲಿ 30000 ಮತ್ತು ಮೆಲ್ಬೋರ್ನ್​ನಲ್ಲಿ ನಡೆಯುವ ಬಾಕ್ಸಿಂಗ್​ ಡೇ ಟೆಸ್ಟ್​ಗೆ 25,000 ವೀಕ್ಷಕರಿಗೆ ಕ್ರಿಕೆಟ್ ಆಸ್ಟೇಲಿಯಾ ಅವಕಾಶ ಕಲ್ಪಿಸಿಕೊಟ್ಟಿದೆ.

ಇಂದು ಐಪಿಎಲ್ ಫೈನಲ್ ಮುಗಿಯಲಿದ್ದು, ಭಾರತ ತಂಡ 12ರಂದು ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿದೆ. ಅಲ್ಲಿ ಮೊದಲು 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಿದೆ. ನಂತರ 4 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.

ABOUT THE AUTHOR

...view details