ಈಸ್ಟ್ ಲಂಡನ್:ಅಂಡರ್ 19 ವಿಶ್ವಕಪ್ಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಭಾರತ ಕಿರಿಯರ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 8 ವಿಕೆಟ್ಗಳಿಂದ ಮಣಿಸಿದೆ.
ಟಾಸ್ ಗೆದ್ದು ಭಾರತ ತಂಡ ಆಫ್ರಿಕನ್ನರನ್ನು ಬ್ಯಾಟಿಂಗ್ ಆಹ್ವಾನಿಸಿತು. ನಾಯಕ ಪ್ರಿಯಂ ಗರ್ಗ್ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡ ಭಾರತದ ಯುವ ಪಡೆ ದಕ್ಷಿಣ ಆಫ್ರಿಕಾದ ಆಟಗಾರರನ್ನು ಕೇವಲ 119 ರನ್ಗಳಿಗೆ ಗಂಟುಮೂಟೆ ಕಟ್ಟುವಂತೆ ಮಾಡಿದರು.
ದಕ್ಷಿಣ ಆಫ್ರಿಕಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಆ್ಯಂಡ್ರಿವ್ ಲೋವ್ 24, ಜೊನಾಥನ್ ಬರ್ಡ್ 25 ರನ್ಗಳಿಸಿದ್ದ ತಂಡದ ಗರಿಷ್ಠ ಮೊತ್ತವಾಯಿತು. ಉಳಿದ ಬ್ಯಾಟ್ಸ್ಮನ್ಗಳು ಭಾರತೀಯ ಬೌಲರ್ಗಳ ಮುಂದೆ ನಿಲ್ಲರಾರದೇ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.