ಕರ್ನಾಟಕ

karnataka

ETV Bharat / sports

ಇಂಡಿಯಾ-ಆಸ್ಟ್ರೇಲಿಯಾ ಕ್ರಿಕೆಟ್​ ಸರಣಿ: 26 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ಪ್ರಕಟ ಸಾಧ್ಯತೆ!

ಇದೇ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕ್ರಿಕೆಟ್​ ಸರಣಿಗಾಗಿ 26 ಸದಸ್ಯರನ್ನೊಳಗೊಂಡ ತಂಡ ಪ್ರಕಟ ಮಾಡುವುದು ಉತ್ತಮ ಎಂದು ಟೀಂ ಇಂಡಿಯಾ ಮಾಜಿ ಸಮಿತಿ ಆಯ್ಕೆ ಅಧ್ಯಕ್ಷ ಎಂ.ಎಸ್​.ಕೆ ಪ್ರಸಾದ್​ ತಿಳಿಸಿದ್ದಾರೆ.

India team
India team

By

Published : Jul 24, 2020, 4:39 PM IST

Updated : Jul 24, 2020, 7:01 PM IST

ನವದೆಹಲಿ:ಆಸ್ಟ್ರೇಲಿಯಾ ಅಂಗಳದಲ್ಲಿ ಟೀಂ ಇಂಡಿಯಾ ಇದೇ ವರ್ಷದ ಅಂತ್ಯದ ವೇಳೆ ನಾಲ್ಕು ಪಂದ್ಯಗಳ ಟೆಸ್ಟ್​​ ಸರಣಿಯಲ್ಲಿ ಭಾಗಿಯಾಗುವ ಸಾಧ್ಯತೆ ದಟ್ಟವಾಗಿದ್ದು, ಅದಕ್ಕಾಗಿ 26 ಸದಸ್ಯರನ್ನೊಳಗೊಂಡ ತಂಡ ಪ್ರಕಟಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಇದೇ ವಿಷಯವಾಗಿ ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್​ ಮಾತನಾಡಿದ್ದು, 26 ಸದಸ್ಯರನ್ನೊಳಗೊಂಡ ತಂಡ ಪ್ರಕಟ ಮಾಡುವುದು ನನ್ನ ಪ್ರಕಾರ ಉತ್ತಮ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ 14 ದಿನಗಳ ಕಾಲ ಕ್ವಾರಂಟೈನ್​ಗೊಳಗಾಗುವ ಸಾಧ್ಯತೆ ದಟ್ಟವಾಗಿದ್ದು, ಹೀಗಾಗಿ ಈಗಾಗಲೇ ವೆಸ್ಟ್​​ ಇಂಡೀಸ್​, ಪಾಕಿಸ್ತಾನ ತಂಡಗಳು ಘೋಷಣೆ ಮಾಡಿರುವ ರೀತಿಯಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.

ಎಂ.ಎಸ್​.ಕೆ ಪ್ರಸಾದ್​

ಇಂಗ್ಲೆಂಡ್​ ಪ್ರವಾಸ ಬೆಳೆಸಿರುವ ಪಾಕಿಸ್ತಾನ ತಂಡ ಈಗಾಗಲೇ 29 ಸದಸ್ಯರ ತಂಡ ಘೋಷಣೆ ಮಾಡಿದ್ದು, ವೆಸ್ಟ್​ ಇಂಡೀಸ್​ ಕೂಡ 26 ಸದ್ಯಸರನ್ನ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​ ಕ್ರಿಕೆಟ್​​ ಸರಣಿಗಾಗಿ ಘೋಷಣೆ ಮಾಡಿತು. ಆಯ್ಕೆ ಸಮಿತಿ 26 ಸದಸ್ಯರ ತಂಡ ಘೋಷಣೆ ಮಾಡಿದರೆ ನೆಟ್​ ಪ್ರ್ಯಾಕ್ಟಿಸ್​ ವೇಳೆ ವೇಗಿಗಳಾದ ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಶಮಿ, ಇಶಾಂತ್​ ಶರ್ಮಾ ಹಾಗೂ ಉಮೇಶ್​ ಯಾದವ್​ಗೆ ಹೆಚ್ಚಿನ ಒತ್ತಡ ಬೀಳುವುದಿಲ್ಲ ಎಂದು ತಿಳಿಸಿದ್ದಾರೆ.

ಯಾರೆಲ್ಲ ಆಯ್ಕೆಯಾಗುವ ಸಾಧ್ಯತೆ!?

ರೋಹಿತ್​ ಶರ್ಮಾ, ಮಯಾಂಕ್​ ಅಗರವಾಲ್​, ಪೃಥ್ವಿ ಶಾ, ಕೆಎಲ್​ ರಾಹುಲ್​, ವಿರಾಟ್​ ಕೊಹ್ಲಿ(ಕ್ಯಾಪ್ಟನ್​) ಅಜಿಂಕ್ಯ ರಹಾನೆ, ಚೇತೇಶ್ವರ್​​ ಪೂಜಾರ, ಹನುಮ ವಿಹಾರಿ, ಶುಭಮನ್​ ಗಿಲ್​,ಶ್ರೇಯಸ್​​ ಅಯ್ಯರ್​, ರಿಷಬ್​ ಪಂತ್​, ವೃದ್ಧಿಮಾನ್​ ಸಾಹಾ, ಆರ್​.ಅಶ್ವಿನ್​, ರವೀಂದ್ರ ಜಡೇಜಾ, ನದೀಮ್​, ರಾಹುಲ್​ ಚಹರ್​, ಕುಲ್ದೀಪ್​ ಯಾದವ್​, ಹಾರ್ದಿಕ್​ ಪಾಂಡ್ಯಾ, ಇಶಾಂತ್​ ಶರ್ಮಾ, ಮೊಹಮ್ಮದ್​ ಶಮ್ಮಿ, ಜಸ್​ಪ್ರೀತ್​ ಬುಮ್ರಾ, ಭುವನೇಶ್ವರ್​ ಕುಮಾರ್​, ಉಮೇಶ್​ ಯಾದವ್​, ನವದೀಪ್​ ಸೈನಿ, ಖಲೀಲ್​ ಅಹ್ಮದ್​, ಶಾರ್ದೂಲ್​ ಠಾಕೂರ್​, ದೀಪಕ್​ ಚಹರ್​, ಯಜುವೇಂದ್ರ ಚಹಲ್​, ಕೃನಾಲ್​ ಪಾಂಡ್ಯ

Last Updated : Jul 24, 2020, 7:01 PM IST

ABOUT THE AUTHOR

...view details