ಮುಂಬೈ:ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯಲ್ಲಿ ಚಾನ್ಸ್ ಪಡೆದುಕೊಂಡಿದ್ರು ಆಡುವ 11ರ ಬಳಗದಲ್ಲಿ ಯುವ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಚಾನ್ಸ್ ಪಡೆದುಕೊಂಡಿರಲಿಲ್ಲ. ಮೂರು ಪಂದ್ಯಗಳಲ್ಲೂ ಬೆಂಚ್ ಕಾದಿದ್ದ ಈ ಪ್ಲೇಯರ್ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಔಟ್ ಆಗಿದ್ದರು.
ಟೀಕೆಗಳಿಂದ ಎಚ್ಚೆತ್ತ ಕ್ರಿಕೆಟ್ ಆಯ್ಕೆ ಸಮಿತಿ... ಸಂಜು ಸ್ಯಾಮ್ಸನ್ಗೆ ಮಣೆ ಹಾಕಲು ನಿರ್ಧಾರ!?
ಬಾಂಗ್ಲಾ ವಿರುದ್ಧ ನಡೆದಿದ್ದ ಮೂರು ಟಿ-20 ಕ್ರಿಕೆಟ್ ಪಂದ್ಯಗಳ ಸರಣಿಯಲ್ಲಿ ಚಾನ್ಸ್ ಪಡೆದುಕೊಂಡಿದ್ರೂ ಬೆಂಚ್ ಕಾದಿದ್ದ ಸಂಜು ಸ್ಯಾಮ್ಸನ್ಗೆ ಇದೀಗ ಆಯ್ಕೆ ಸಮಿತಿ ಮಣೆ ಹಾಕಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಯಾವುದೇ ರೀತಿಯಲ್ಲೂ ಆಡಲು ಅವಕಾಶ ನೀಡದೇ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಅವರನ್ನ ಕೈಬಿಟ್ಟಿದ್ದಕ್ಕಾಗಿ ಆಯ್ಕೆ ಸಮಿತಿ ವಿರುದ್ಧ ಟೀಂ ಇಂಡಿಯಾ ಆಟಗಾರ ಹರ್ಭಜನ್ ಸಿಂಗ್ ಸೇರಿದಂತೆ ಅನೇಕರು ಟೀಕಾಪ್ರಹಾರ ನಡೆಸಿದ್ದರು. ಇದೀಗ ಇದರಿಂದ ಎಚ್ಚೆತ್ತುಕೊಂಡಿರುವ ಎಂಎಸ್ಕೆ ಪ್ರಸಾದ್ ನೇತೃತ್ವದ ಸಮಿತಿ ಸ್ಯಾಮ್ಸನ್ಗೆ ಚಾನ್ಸ್ ನೀಡಲು ಮುಂದಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಗಾಗಿ ಹೆಚ್ಚುವರಿ ಆಟಗಾರನಾಗಿ ಸಂಜು ಸ್ಯಾಮ್ಸನ್ಗೆ ಚಾನ್ಸ್ ನೀಡಲು ಇದೀಗ ಪ್ಲಾನ್ ಹಾಕಿಕೊಳ್ಳಲಾಗಿದ್ದು, ಒಂದು ವೇಳೆ ಯಾರಾದ್ರೂ ಪ್ಲೇಯರ್ ಗಾಯಗೊಂಡರೆ ಇವರು ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಮುಂದಿನ ತಿಂಗಳು ಮೂರು ಟಿ-20 ಪಂದ್ಯ ಹಾಗೂ ಏಕದಿನ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ.