ಕರ್ನಾಟಕ

karnataka

ETV Bharat / sports

ಅಧ್ಯಕ್ಷನಾದ ಒಂದೇ ವಾರದಲ್ಲಿ ದಾದಾ ಮ್ಯಾಜಿಕ್​... ಹಗಲು ರಾತ್ರಿ ಟೆಸ್ಟ್​ಗೆ ಜೈ ಅಂದ ಬಿಸಿಬಿ ​ - ಭಾರತ-ಬಾಂಗ್ಲಾದೇಶ ಟೆಸ್ಟ್​

ಬಿಸಿಸಿಐ ಚುಕ್ಕಾಣಿ ಇಡಿದ ಕೇವಲ ​ ಒಂದೇ ವಾರದಲ್ಲಿ ಗಂಗೂಲಿ ಟೆಸ್ಟ್​ ಪಂದ್ಯವನ್ನು ಹಗಲು ರಾತ್ರಿ ಕಾಲಮಾನದಲ್ಲಿ ನಡೆಸಲು ಯಶಸ್ವಿಯಾಗಿದ್ದಾರೆ. ಮುಂಬರುವ ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ನಡೆಯುವ ಎರಡನೇ ಟೆಸ್ಟ್​ ಪಂದ್ಯ ಭಾರತದ ಮೊದಲ ಹಗಲು ರಾತ್ರಿ ಟೆಸ್ಟ್​ ಪಂದ್ಯವಾಗಲಿದೆ.

India day-night Test against Bangladesh

By

Published : Oct 30, 2019, 12:28 PM IST

ಕೋಲ್ಕತ್ತಾ: ಸೌರವ್​ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಮಹತ್ತರ ಬದಲಾವಣೆ ತರಲು ಬಯಸಿದ್ದು, ಕ್ರಿಕೆಟ್​ನ ಅಸ್ಥಿತ್ವ ತಂದುಕೊಟ್ಟ ಟೆಸ್ಟ್ ಕ್ರಿಕೆಟ್​ ಅನ್ನು ಮತ್ತೆ ಪ್ರಸಿದ್ದಗೊಳಿಸಲು ಹಗಲು ರಾತ್ರಿ ಪಂದ್ಯವನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಸಿಸಿಐ ಚುಕ್ಕಾಣಿ ಹಿಡಿದ ಕೇವಲ ​ ಒಂದೇ ವಾರದಲ್ಲಿ ಗಂಗೂಲಿ ಟೆಸ್ಟ್​ ಪಂದ್ಯವನ್ನು ಹಗಲು ರಾತ್ರಿ ಕಾಲಮಾನದಲ್ಲಿ ನಡೆಸಲು ಯಶಸ್ವಿಯಾಗಿದ್ದಾರೆ. ಮುಂಬರುವ ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ನಡೆಯುವ ಎರಡನೇ ಟೆಸ್ಟ್​ ಪಂದ್ಯ ಭಾರತದ ಮೊದಲ ಹಗಲು ರಾತ್ರಿ ಟೆಸ್ಟ್​ ಪಂದ್ಯವಾಗಲಿದೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆ ಈ ವಿಚಾರವಾಗಿ ಸಭೆ ನಡೆಸಿದ್ದ ಗಂಗೂಲಿ ಅವರ ಅಭಿಪ್ರಾಯವನ್ನು ಪಡೆದು ನಂತರ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿಯ ಜೊತೆಗೂ ಮಾತನಾಡಿ ದಾದಾ ಹಗಲು ರಾತ್ರಿ ಪಂದ್ಯಕ್ಕೆ ಉಪಖಂಡದಲ್ಲಿ ನಾಂದಿ ಹಾಡಿದ್ದಾರೆ.

ಇದರ ಜೊತೆಗೆ ಹಗಲು ರಾತ್ರಿ ನಡೆಯುವ ಟೆಸ್ಟ್​ ಪಂದ್ಯದಲ್ಲಿ ಪಿಂಕ್‌ ಬಾಲ್ ಬಳಸುವುದಕ್ಕೂ ಎರಡೂ ದೇಶಗಳ ಕ್ರಿಕೆಟ್​ ಮಂಡಳಿ ಒಪ್ಪಿಗೆ ಸೂಚಿಸಿದ್ದು, ನವೆಂಬರ್​ 22 ರಿಂದ ನಡೆಯುವ ಟೆಸ್ಟ್​ ಪಂದ್ಯ ಇತಿಹಾಸದ ಪುಟ ಸೇರಲಿದೆ.

ಈ ಐತಿಹಾಸಿಕ ಪಂದ್ಯಕ್ಕೆ ಒಲಿಂಪಿಕ್ ಪದಕ ವಿಜೇತರಾದ ಶೂಟರ್ ಅಭಿನವ್ ಬಿಂದ್ರಾ, ಬಾಕ್ಸರ್ ಮೇರಿ ಕೋಮ್, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಬ್ರೆಸ್ಟ್​​ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಪಿಂಕ್ ಬಾಲ್‌ ಟೆಸ್ಟ್ ಆಯೋಜಿಸಲಾಗುತ್ತಿದೆ.

ABOUT THE AUTHOR

...view details