ಸಾಕಷ್ಟು ಅಭಿಮಾನಿ ಬಳಗ ಹೊಂದಿರುವ ಸ್ಮೃತಿ ಮಂದಾನ ಶುಕ್ರವಾರ ಟ್ವಿಟರ್ನಲ್ಲಿ ಕೊಂಚ ತಮಾಷೆ ಮಾಡುತ್ತಲೇ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ನೀವು ಹೀರೋಯಿನ್ ರೀತಿ ತುಂಬಾ ಚೆನ್ನಾಗಿದ್ದೀರಾ.. ನೀವೇಕೆ ಸಿನಿಮಾನದಲ್ಲಿ ನಟಿಸಬಾರದೆಂದು ಯುವ ಅಭಿಮಾನಿಗಳು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ನಾನು ಸಿನಿಮಾದಲ್ಲಿ ನಟಿಸಿದ್ರೆ ನೋಡಲು ಯಾರೂ ಬರುವುದಿಲ್ಲವೆಂದು ತಮಾಷೆ ಮಾಡಿದ್ದಾರೆ ಟೀಂ ಇಂಡಿಯಾ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ.
ಪ್ರೀತಿಸ್ತೀನಿ, ಹಿರಿಯರನ್ನೂ ಒಪ್ಪಿಸಿ ಮದ್ವೆಯಾಗ್ತೀನಿ ಎಂದ ಸ್ಟೈಲಿಶ್ ಆಟಗಾರ್ತಿ ಸ್ಮೃತಿ ಮಂದಾನ!! - ಅಭಿಮಾನಿಗಳೊಂದಿಗೆ ತಮಾಷೆ ಮಾಡಿದ ಸ್ಮೃತಿ ಮಂಧಾನ
ತನ್ನ ಅಂದ, ಚೆಂದ ಮತ್ತು ಸ್ಟೈಲಿಶ್ ಆಟದಿಂದಲೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಭಾರತದ ಮಹಿಳಾ ಕ್ರಿಕೆಟರ್ ಸ್ಮೃತಿ ಮಂದಾನ ಅಭಿಮಾನಿಗಳೊಂದಿಗೆ ಕೆಲ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ನಿಮ್ಮ ಇಷ್ಟದ ಹುಡುಗ ಯಾರು ಅಂತಾ ಕೇಳಿದ್ರೆ, ಹೃತಿಕ್ ರೋಷನ್ ಅಂತಾ ಥಟ್ ಅಂತಾ ಉತ್ತರ ಕೊಟ್ರು ಸ್ಮೃತಿ. ನೀವು ಲವ್ ಮ್ಯಾರೇಜೋ ಅಥವಾ ಅರೇಂಜ್ಡ್ ಮ್ಯಾರೇಜ್ ಆಗ್ತೀರೋ ಅಂತಾ ಕೇಳಿದ್ದಕ್ಕೆ, ಪ್ರೀತಿಸಿ ಹಿರಿಯರನ್ನು ಒಪ್ಪಿಸಿ ಮದುವೆ ಮಾಡಿಕೊಳ್ಳುತ್ತೇನೆ ಎಂದು ಉತ್ತರಿಸಿದ್ದಾರೆ. ಕೊನೆಯಲ್ಲಿ ವಿಶ್ವಕಪ್ ಗೆಲ್ಲುವುದೇ ನನ್ನ ಕನಸು ಎಂದು ಸ್ಮೃತಿ ತಮ್ಮ ಮನದಾಳದ ಮಾತುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು.