ಕರ್ನಾಟಕ

karnataka

ETV Bharat / sports

ಹರಿಣಗಳ ವಿರುದ್ಧದ ಟೆಸ್ಟ್​ ಸರಣಿಗೆ ಟೀಂ ಇಂಡಿಯಾ ಪ್ರಕಟ... ರೋಹಿತ್​ಗೆ ಜಾಕ್​ಪಾಟ್​, ಕೆಎಲ್​ಗಿಲ್ಲ ಚಾನ್ಸ್​! - ರೋಹಿತ್​ ಶರ್ಮಾ

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್​ ಪಂಧ್ಯಗಳ ಸರಣಿಗಾಗಿ ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಆರಂಭಿಕ ಆಟಗಾರ ಕೆಎಲ್​ ರಾಹುಲ್​ಗೆ ಕೊಕ್​ ನೀಡಲಾಗಿದ್ದು, ಮತ್ತೋರ್ವ ಉದಯೋನ್ಮುಖ ಬ್ಯಾಟ್ಸ್​​ಮನ್​ ಶುಭ್ಮನ್​ ಗಿಲ್​ಗೆ ಚಾನ್ಸ್​ ನೀಡಲಾಗಿದೆ.

ಟೀಂ ಇಂಡಿಯಾ ಪ್ರಕಟ

By

Published : Sep 12, 2019, 5:16 PM IST

Updated : Sep 12, 2019, 5:30 PM IST

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ ಅಕ್ಟೋಬರ್​ 2ರಿಂದ ಆರಂಭಗೊಳ್ಳಲಿರುವ ಮೂರು ಟೆಸ್ಟ್​​ ಪಂದ್ಯಗಳ ಸರಣಿಗಾಗಿ ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ನಿರೀಕ್ಷೆಯಂತೆ ಕನ್ನಡಿಗ ಕೆಎಲ್​ ರಾಹುಲ್​ಗೆ ಕೊಕ್​ ನೀಡಲಾಗಿದೆ.

ಕೆಎಲ್​ ರಾಹುಲ್​​

ವೆಸ್ಟ್​​ ಇಂಡೀಸ್​ ವಿರುದ್ಧ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದ ಕೆಎಲ್​ ರಾಹುಲ್​ಗೆ ಕೈಬಿಡಲಾಗಿದ್ದು, ಮತ್ತೋರ್ವ ಕನ್ನಡಿಗ ಮಯಾಂಕ್​ ಅಗರವಾಲ್​ ಅವಕಾಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ 15 ಸದಸ್ಯರ ಬಳಗದಲ್ಲಿ ಯುವ ಬ್ಯಾಟ್ಸ್​ಮನ್​ ಶುಬ್ಮನ್​​​​ ಗಿಲ್​​ ಚಾನ್ಸ್​ ಪಡೆದುಕೊಂಡಿದ್ದಾರೆ. ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ನೇತೃತ್ವದ ಸಮಿತಿ 15 ಸದಸ್ಯರ ತಂಡ ಪ್ರಕಟಗೊಳಿಸಿದ್ದು, ತಂಡ ಇಂತಿದೆ.

ಹನುವ ವಿಹಾರಿ,ರಹಾನೆ

ತಂಡ ಇಂತಿದೆ:ವಿರಾಟ್​ ಕೊಹ್ಲಿ(ಕ್ಯಾಪ್ಟನ್​​) ಮಯಾಂಕ್​ ಅಗರವಾಲ್​, ರೋಹಿತ್​ ಶರ್ಮಾ, ಚೇತೇಶ್ವರ್​ ಪೂಜಾರಾ​, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್​ ಪಂತ್​(ವಿ.ಕೀ),ವೃದ್ಧಿಮಾನ್​ ಸಾಹಾ(ವಿ.ಕೀ),ಆರ್​ ಅಶ್ವಿನ್​,ರವೀಂದ್ರ ಜಡೇಜಾ, ಕುಲ್ದೀಪ್​ ಯಾದವ್​, ಮೊಹಮ್ಮದ್​ ಶಮಿ, ಜಸ್​ಪ್ರೀತ್​ ಬುಮ್ರಾ, ಇಶಾಂತ್​ ಶರ್ಮಾ ಹಾಗೂ ಶುಬ್ಮನ್​ ​ಗಿಲ್​​.

ಟೀಂ ಇಂಡಿಯಾ ಸಂಭ್ರಮ

ವೆಸ್ಟ್​ ಇಂಡೀಸ್​ ವಿರುದ್ಧ ಅದ್ಭುತ ಪ್ರದರ್ಶನ ತೋರಿದ್ದ ರಹಾನೆ ಹಾಗೂ ವಿಹಾರಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸುವುದು ಫಿಕ್ಸ್​ ಆಗಿರುವ ಕಾರಣ, ರೋಹಿತ್​ ಶರ್ಮಾ ಕನ್ನಡಿಗ ಅಗರವಾಲ್ ಜತೆ ಸೇರಿ ಟೆಸ್ಟ್​​ನಲ್ಲಿ ಆರಂಭಿಕವಾಗಿ ಬ್ಯಾಟ್​ ಬೀಸಲಿದ್ದಾರೆ.

Last Updated : Sep 12, 2019, 5:30 PM IST

ABOUT THE AUTHOR

...view details