ದುಬೈ: ಬುಧವಾರ ಮುಗಿದ ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ನಲ್ಲಿ ನ್ಯೂಜಿಲ್ಯಾಂಡ್ ತಂಡ 101 ರನ್ಗಳ ಜಯ ಸಾಧಿಸಿದರೂ ಮುಂದಿನ ವರ್ಷ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂಕಪಟ್ಟಿಯಲ್ಲಿ ಭಾರತ ತಂಡ 2ನೇ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕೋವಿಡ್-19 ನಿಂದ ಕೆಲವು ಪಂದ್ಯಗಳು ರದ್ದಾಗಿರುವುದರಿಂದ ಅಂಕಗಳ ಆಧಾರದ ಬದಲು ಹೆಚ್ಚು ಗೆಲುವಿನ ಶೇಕಡಾವಾರು ಹೊಂದಿರುವ ಮೊದಲೆರಡು ತಂಡಗಳು ಫೈನಲ್ ಪ್ರವೇಶಿಸಲಿವೆ ಎಂದು ಐಸಿಸಿ ಈಗಾಗಲೇ ಘೋಷಿಸಿದೆ.
ಪ್ರಸ್ತುತ ಅಂಕಪಟ್ಟಿಯ ಪ್ರಕಾರ ಶೇ 76.6 ಗೆಲುವಿನ ಸರಾಸರಿ ಹೊಂದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. ಭಾರತ 72.2 ಗೆಲುವಿನ ಸರಾಸರಿಯೊಂದಿಗೆ 2ನೇ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್ ತಂಡ 66.7 ಸರಾಸರಿಯಲ್ಲಿ ಮೂರನೇ ಸ್ಥಾನದಲ್ಲೇ ಸ್ಥಿರವಾಗಿದೆ.
4ರಲ್ಲಿ ಇಂಗ್ಲೆಂಡ್ (60.8%), 5ರಲ್ಲಿ ಪಾಕಿಸ್ತಾನ (34%), 6ರಲ್ಲಿ ದಕ್ಷಿಣ ಆಫ್ರಿಕಾ (28%), 7ರಲ್ಲಿ ಶ್ರೀಲಂಕಾ (26.7%), 8ನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್(11.1%) ಇದೆ.
ಇದನ್ನು ಓದಿ:ಐಸಿಸಿ ಟೆಸ್ಟ್ ಶ್ರೇಯಾಂಕ: ಆಸ್ಟ್ರೇಲಿಯಾ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕಿವೀಸ್