ಕರ್ನಾಟಕ

karnataka

ETV Bharat / sports

ಆಸೀಸ್​, ಕಿವೀಸ್​ ನಂತರ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ರೆಕಾರ್ಡ್​​... 50ನೇ ಜಯದ ದಾಖಲೆ ಬರೆದ ಭಾರತ! - ಟೀಂ ಇಂಡಿಯಾ

ಪ್ರಸಕ್ತ ಸಾಲಿನ ಏಕದಿನ ವಿಶ್ವಕಪ್​​ನಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿರುವ ಟೀಂ ಇಂಡಿಯಾ ಹೊಸದೊಂದು ದಾಖಲೆ ಬರೆದಿದೆ.

ಟೀಂ ಇಂಡಿಯಾ

By

Published : Jun 23, 2019, 1:12 AM IST

ಸೌತಮ್​ಟನ್​​:ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ದುರ್ಬಲ ಅಫ್ಘಾನಿಸ್ತಾನದ ವಿರುದ್ಧ ಗೆಲುವು ದಾಖಲು ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.

ವಿಶ್ವಕಪ್​ ಮಹಾಟೂರ್ನಿಯಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯುಜಿಲೆಂಡ್​ ತಂಡದ ಬಳಿಕ 50 ಪಂದ್ಯದಲ್ಲಿ ಗೆದ್ದಿರುವ ಹಿರಿಮೆ ಇದೀಗ ಟೀಂ ಇಂಡಿಯಾ ಪಾಲಾಗಿದೆ. ವಿಶ್ವಕಪ್​​ನಲ್ಲಿ ಒಟ್ಟು 79 ಪಂದ್ಯಗಳನ್ನಾಡಿರುವ ಭಾರತ 50ನೇ ಗೆಲುವು ದಾಖಲು ಮಾಡಿದೆ. ಇನ್ನು 27 ಪಂದ್ಯಗಳಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ರದ್ಧಾಗಿದ್ದರೆ, ಮತ್ತೊಂದು ಪಂದ್ಯ ಡ್ರಾ ಆಗಿದೆ.

ಟೀಂ ಇಂಡಿಯಾ ಸಂಭ್ರಮ
ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೆಲುವು ಪಡೆದ ತಂಡ
  • ಆಸ್ಟ್ರೇಲಿಯಾ: 67 ಗೆಲುವು (90 ಪಂದ್ಯ)
  • ನ್ಯೂಜಿಲೆಂಡ್: 52 ಗೆಲುವು (84 ಪಂದ್ಯ)
  • ಭಾರತ: 50 ಗೆಲುವು (79 ಪಂದ್ಯ)

ಕಳೆದ 21 ವಿಶ್ವಕಪ್​ ಪಂದ್ಯಗಳಲ್ಲಿ ಟೀಂ ಇಂಡಿಯಾ 18 ಮ್ಯಾಚ್​ಗಳಲ್ಲಿ ಗೆಲುವು ದಾಖಲು ಮಾಡಿದ್ದು, 2011ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹಾಗೂ 2015ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಾತ್ರ ಸೋಲು ಕಂಡಿದೆ.

ಟೀಂ ಇಂಡಿಯಾ ಸಂಭ್ರಮ

ನಿನ್ನೆ ಅಫ್ಘಾನಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ 224ರನ್​ಗಳಿಕೆ ಮಾಡಿದ್ದ ಟೀಂ ಇಂಡಿಯಾ ಎದುರಾಳಿ ತಂಡಕ್ಕೆ 225ರನ್​ಗಳ ಟಾರ್ಗೆಟ್​ ನೀಡಿತು. ಇದರ ಬೆನ್ನತ್ತಿದ್ದ ಅಫ್ಘಾನಿಸ್ತಾನ ತಂಡ 213ರನ್​ ಮಾತ್ರಗಳಿಸಲು ಶಕ್ತವಾಯಿತು. ಹೀಗಾಗಿ 11ರನ್​ಗಳ ಸೋಲು ಕಂಡಿದೆ. ಇದೇ ಪಂದ್ಯದಲ್ಲಿ ಶಮಿ 50ನೇ ಓವರ್​ನಲ್ಲಿ ಹ್ಯಾಟ್ರಿಕ್​ ಸಾಧನೆ ಸಹ ಮಾಡಿದರು.

ABOUT THE AUTHOR

...view details