ಮುಂಬೈ: 2021ರ ವೇಳೆಗೆ ನ್ಯೂಜಿಲ್ಯಾಂಡ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಭಾರತ ಮಹಿಳಾ ತಂಡ ನೇರ ಅರ್ಹತೆ ಗಿಟ್ಟಿಸಿಕೊಂಡಿದೆ.
ಭಾರತದ ಜೊತೆ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ದೇಶಗಳು 2021ರ ವಿಶ್ವಕಪ್‌ಗೆ ನೇರ ಅರ್ಹತೆ ಸಂಪಾದಿಸಿದೆ. ಪಾಕಿಸ್ತಾನ, ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ಮಹಿಳಾ ತಂಡಗಳು ಅರ್ಹತಾ ಸುತ್ತಿನ ಪಂದ್ಯವನ್ನಾಡಲಿವೆ. ಈ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ವಿಶ್ವಕಪ್ ಫೆಬ್ರವರಿ 6ರಿಂದ ಮಾರ್ಚ್7ರವರೆಗೆ ವೇಳಾಪಟ್ಟಿ ನಿಗಧಿಯಾಗಿದೆ.
ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಏಕದಿನ ಚಾಂಪಿಯನ್‌ಶಿಪ್ ರೌಂಡ್ ರದ್ದಾದ ಬಳಿಕ ಭಾರತಕ್ಕೆ ವಿಶ್ವಕಪ್‌ಗೆ ಪ್ರವೇಶ ಪಡೆದುಕೊಂಡಿದೆ.
ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಭಾರತ ಸರ್ಕಾರ ರಾಜಕೀಯ ಕಲಹಗಳ ದೃಷ್ಟಿಯಿಂದ ಬಿಸಿಸಿಐಗೆ ಅನುಮೋದನೆ ನೀಡಿರಲಿಲ್ಲ. ಹೀಗಾಗಿ ಭಾರತ-ಪಾಕ್ ಏಕದಿನ ಚಾಂಪಿಯನ್‌ಶಿಪ್ ಸುತ್ತು ರದ್ದುಗೊಂಡಿದೆ.
ಕಳೆದ ವರ್ಷ ಜುಲೈ ಮತ್ತು ನವೆಂಬರ್‌ನಲ್ಲಿ ಭಾರತ-ಪಾಕಿಸ್ತಾನ ರೌಂಡ್ ನಡೆಸಲು ವೇಳಾಪಟ್ಟಿ ಸಿದ್ಧವಾಗಿತ್ತು. ಆದರೆ ಎರಡು ಪಂದ್ಯಕ್ಕೆ ಸರ್ಕಾರದಿಂದ ಅನುಮತಿ ಸಿಗದಿದ್ದರಿಂದ ಪಂದ್ಯ ನಡೆದಿರಲಿಲ್ಲ. ಇತ್ತಂಡಗಳ ಮೂರು ಪಂದ್ಯಗಳ ಸರಣಿ ರದ್ದಾಗಿರುವುದರಿಂದ ಎರಡೂ ತಂಡಗಳು ಪಾಯಿಂಟ್ ಹಂಚಿಕೊಂಡಿದ್ದರಿಂದ ವಿಶ್ವಕಪ್‌ಗೆ ನೇರ ಅರ್ಹತೆಗಿಟ್ಟಿಸಿಕೊಂಡಿದೆ.
ಭಾರತ ತಂಡ 2018ರ ವಿಶ್ವಕಪ್‌ನಲ್ಲಿ ಫೈನಲ್ ತಲುಪುವಲ್ಲಿ ಯಶಸ್ವಿಯಾದರು ವಿಶ್ವಕಪ್ ಗೆಲ್ಲುವಲ್ಲಿ ಎಡವಿ ರನ್ನರ್ ಅಪ್ ಆಗಿದ್ದರು.ಫೈನಲ್ನಲ್ಲಿ 9 ರನ್ಗಳಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿತ್ತು.