ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆದ ನಾಲ್ಕನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಸೂಪರ್ ಓವರ್ ಮೂಲಕ ಗೆಲುವು ದಾಖಲು ಮಾಡಿದ್ದು, ಈ ಮೂಲಕ ಸರಣಿಯಲ್ಲಿ 4-0 ಅಂತರದ ಮುನ್ನಡೆ ಪಡೆದುಕೊಂಡಿದೆ.
4ನೇ ಟಿ-20 ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್... ಕೊಹ್ಲಿ ಪಡೆಗೆ ಐಸಿಸಿ ದಂಡ!
ನ್ಯೂಜಿಲೆಂಡ್ ವಿರುದ್ಧ ನಡೆದ ನಾಲ್ಕನೇ ಟಿ-20 ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ಟೀಂ ಇಂಡಿಯಾಗೆ ದಂಡ ವಿಧಿಸಲಾಗಿದೆ.
ದಿಢೀರ್ ಕುಸಿತದ ಹೊರತಾಗಿ ಕೂಡ 165 ರನ್ ಗಳಿಸಿದ್ದ ಟೀಂ ಇಂಡಿಯಾ, ಎದುರಾಳಿ ಪಡೆಯನ್ನು 165 ರನ್ಗಳಿಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು. ಆದರೆ ಕೊನೆಯ ಎರಡು ಓವರ್ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ಟೀಂ ಇಂಡಿಯಾ ಇದೀಗ ದಂಡ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಮ್ಯಾಚ್ ರೆಫ್ರಿ ಕ್ರಿಸ್ ಬೋರ್ಡ್ ಹಾಗೂ ಅಂಪೈರ್ಗಳ ಸೂಚನೆ ಮೇರೆಗೆ ಈ ದಂಡ ವಿಧಿಸಲು ಐಸಿಸಿ ಸೂಚನೆ ನೀಡಿದೆ.
ಐಸಿಸಿ ನೀತಿ ಸಂಹಿತೆ 2.22 ಪ್ರಕಾರ ಇದೀಗ ಟೀಂ ಇಂಡಿಯಾ ತಂಡದ ಶೇ. 40ರಷ್ಟು ದಂಡ ಕಟ್ಟಬೇಕಾಗಿದ್ದು, ಪ್ರತಿ ಓವರ್ಗೆ ಶೇ. 20ರಷ್ಟು ದಂಡ ವಿಧಿಸಲಾಗಿದೆ. ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ದಂಡಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.