ಕರ್ನಾಟಕ

karnataka

ETV Bharat / sports

ಭಾರತ-ಪಾಕ್​​​ ನಡುವಿನ ಕ್ರಿಕೆಟ್​​​ ಪಂದ್ಯ ಯುದ್ಧದ ಥರ, ನಾವು ಗೆಲ್ಲಲೇಬೇಕು: ಸೆಹ್ವಾಗ್​

ವಿಶ್ವಕಪ್​ನಲ್ಲಿ ಭಾರತ-ಪಾಕ್​ ಜೂನ್​ 16ರಿಂದ ಮುಖಾಮುಖಿಯಾಗುತ್ತಿವೆ. ಇದೇ ವಿಷಯವಾಗಿ ಸೆಹ್ವಾಗ್​ ಗೋವಾದಲ್ಲಿ ಮಾತನಾಡಿದ್ದಾರೆ.

ಇಂಡೋ-ಪಾಕ್​

By

Published : Apr 12, 2019, 9:33 PM IST

Updated : Apr 12, 2019, 10:04 PM IST

ನವದೆಹಲಿ:ಭಾರತ-ಪಾಕಿಸ್ತಾನದ ನಡುವಿನ ಕ್ರಿಕೆಟ್​ ಪಂದ್ಯ ಯುದ್ಧಕ್ಕಿಂತ ಕಡಿಮೆ ಅಲ್ಲ. ಅದರಲ್ಲಿ ನಾವು ಗೆಲುವು ಸಾಧಿಸಲೇಬೇಕು ಎಂದು ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್​ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್​ನಲ್ಲಿ ಭಾರತ-ಪಾಕ್​ ಜೂನ್​ 16ರಿಂದ ಮುಖಾಮುಖಿಯಾಗುತ್ತಿವೆ. ಇದೇ ವಿಷಯವಾಗಿ ಸೆಹ್ವಾಗ್​ ಗೋವಾದಲ್ಲಿ ಮಾತನಾಡಿದರು. ಪುಲ್ವಾಮಾ ದಾಳಿ ಆದ ಬಳಿಕ ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧದ ಪಂದ್ಯದಿಂದ ಭಾರತ ಹಿಂದೆ ಸರಿಯಬೇಕು ಎಂಬ ಮಾತು ಸಹ ಹೇಳಿದ್ದರು. ಅದಕ್ಕೆ ಗೌತಮ್​ ಗಂಭೀರ್​ ಕೂಡ ಧ್ವನಿಗೂಡಿಸಿದ್ದರು.

ಇದೀಗ ಮಾತನಾಡಿರುವ ಸೆಹ್ವಾಗ್​, ದೇಶದ ಒಳತಿಗಾಗಿ ಏನೆಲ್ಲ ಸಾಧ್ಯವೋ ನಾವು ಅದನ್ನ ಮಾಡಬೇಕು. ಭಾರತ-ಪಾಕಿಸ್ತಾನದ ನಡುವೆ ಯಾವುದೇ ಸಮಯದಲ್ಲಿ ಕ್ರಿಕೆಟ್​ ನಡೆದರೂ ಅದು ಯುದ್ಧಕ್ಕಿಂತ ಕಡಿಮೆ ಇರಲ್ಲ. ಅದರಲ್ಲಿ ನಾವು ಗೆಲುವು ಕಾಣಲೇಬೇಕು ಎಂದಿದ್ದಾರೆ.

ಏಕದಿನ ವಿಶ್ವಕಪ್ ಇಂಗ್ಲೆಂಡ್​ನಲ್ಲಿ ನಡೆಯಲಿದ್ದು, ಮೇ 30ರಿಂದ ಜುಲೈ 14ರವರೆಗೆ ಈ ಮಹಾ ಟೂರ್ನಿ ನಡೆಯಲಿದೆ. ಎಲ್ಲ ತಂಡಗಳು 9 ಪಂದ್ಯಗಳನ್ನಾಡಲಿವೆ. ​ಇದೇ ವೇಳೆ ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿರುವ ವೀರೂ, ನಾನು ರಣಜಿ ಹಾಗೂ ಐಪಿಎಲ್​​ನಲ್ಲಿ ಒಪ್ಪಂದದ ಆಧಾರದ ಮೇಲೆ ಕೆಲಸ ಮಾಡಿರುವೆ. ಈಗ ಯಾವ ಪಕ್ಷ ಉತ್ತಮ ಒಪ್ಪಂದ ಮಾಡಿಕೊಳ್ಳುತ್ತದೆಯೋ ಅದರೊಂದಿಗೆ ಕೆಲಸ ಮಾಡಲು ಸಿದ್ಧ ಎಂದಿದ್ದಾರೆ.

Last Updated : Apr 12, 2019, 10:04 PM IST

ABOUT THE AUTHOR

...view details