ಅಹ್ಮದಾಬಾದ್: ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಪ್ರವಾಸಿ ಇಂಗ್ಲೆಂಡ್ ತಂಡವನ್ನು 205ಕ್ಕೆ ಆಲೌಟ್ ಮಾಡಿರುವ ಭಾರತ ತಂಡ, ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸಿ ಮೊದಲ ಆಘಾತ ಎದುರಿಸಿದೆ. ಯುವ ಆಟಗಾರ ಶುಬ್ಮನ್ ಗಿಲ್ ಖಾತೆ ತೆರೆಯದೆ ನಿರ್ಗಮಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊದಲ ಬಾರಿಗೆ 200ರ ಗಡಿ ದಾಟಿತು. ಆಲ್ರೌಂಡರ್ ಬೆನ್ ಸ್ಟೋಕ್ಸ್ (55) ಅರ್ಧಶತಕ ಸಿಡಿಸಿದರೆ, ಡೇನಿಯಲ್ ಲಾರೆನ್ಸ್ 46 ರನ್ ಗಳಿಸಿದರು.
ಇನ್ನು 206 ರನ್ಗಳನ್ನು ಬೆನ್ನತ್ತಿರುವ ಭಾರತ ತಂಡ ಮೊದಲ ದಿನದಾಟದ ಅಂತ್ಯಕ್ಕೆ 24 ರನ್ಗಳಿಸಿದೆ. ಶುಬ್ಮನ್ ಗಿಲ್ ಖಾತೆ ತೆರೆಯದೆ ಜೇಮ್ಸ್ ಆ್ಯಂಡರ್ಸನ್ ಎಸೆದ ಮೊದಲ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮಾ 8 ಮತ್ತು ಚೇತೇಶ್ವರ್ ಪೂಜಾರ 15 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
ಇನ್ನು ಮೊದಲ ಇನ್ನಿಂಗ್ಸ್ನಲ್ಲಿ ಅದ್ಭುತ ಬೌಲಿಂಗ್ ನಡೆಸಿದ ಅಕ್ಷರ ಪಟೇಲ್ 68 ರನ್ ನೀಡಿ 4 ವಿಕೆಟ್ ಪಡೆದು ಆಂಗ್ಲರ ಪತನಕ್ಕೆ ಕಾರಣರಾದರು. ರವಿಚಂದ್ರನ್ ಅಶ್ವಿನ್ 47ಕ್ಕೆ 3, ಮೊಹಮ್ಮದ್ ಸಿರಾಜ್ 45ಕ್ಕೆ 2 ಮತ್ತು ಸುಂದರ್ 14ಕ್ಕೆ 1 ವಿಕೆಟ್ ಪಡೆದರು.
ಇದನ್ನು ಓದಿ:ಸಿರಾಜ್ ಕೆಣಕಿದ ಸ್ಟೋಕ್ಸ್ ಜೊತೆ ವಾದಕ್ಕಿಳಿದ ಕೊಹ್ಲಿ: ವಿಡಿಯೋ ವೈರಲ್