ಗಯಾನ:ವಿಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಮೊದಲೆರಡು ಟಿ-20 ಪಂದ್ಯಗಳನ್ನು ತನ್ನದಾಗಿಸಿಕೊಂಡಿದ್ದು, ಸರಣಿ ಕ್ಲೀನ್ಸ್ವೀಪ್ನತ್ತ ಚಿತ್ತ ನೆಟ್ಟಿದೆ.
ಟೂರ್ನಿಯ ಮೊಲದ ಪಂದ್ಯದಲ್ಲಿ ಆತಿಥೇಯರನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿ ಪ್ರಯಾಸದ ಗೆಲುವು ಸಾಧಿಸಿದ್ದ ವಿರಾಟ್ ಪಡೆ, ಮಳೆ ಬಾಧಿತ ಎರಡನೇ ಪಂದ್ಯದಲ್ಲಿ ಡಕ್ವರ್ತ್ ನಿಯಮದಂತೆ ಸುಲಭ ಗೆಲುವು ದಾಖಲಿಸಿತ್ತು.
ಇಂದು ಗಯಾನದಲ್ಲಿ ನಡೆಯಲಿರುವ ಕೊನೆಯ ಟಿ-20 ಪಂದ್ಯದಲ್ಲಿ ವಿರಾಟ್ ಪಡೆ ತಂಡದಲ್ಲಿ ಒಂದಷ್ಟು ಬದಲಾವಣೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಸರಣಿ ಕೈವಶ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಆಟಗಾರರು ಆಡುವ ಹನ್ನೊಂದರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಟಿ-20 ಸರಣಿಯ ಮೊದಲ ಎರಡು ಪಂದ್ಯದಿಂದ ಹೊರಗುಳಿದಿದ್ದ ಚಹಾರ್ ಬ್ರದರ್ಸ್ ಹಾಗೂ ಶ್ರೇಯಸ್ ಅಯ್ಯರ್ ತಂಡ ಸೇರಿಕೊಂಡರೆ ಅಚ್ಚರಿಯಿಲ್ಲ.
ಅತ್ತ ಸರಣಿ ಸೋತಿರುವ ಕೆರಬಿಯನ್ನರು ಕೊನೆಯ ಪಂದ್ಯವನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳುವ ಪ್ಲಾನ್ನಲ್ಲಿದ್ದಾರೆ. ಮೊದಲೆರಡು ಪಂದ್ಯದಲ್ಲೂ ವಿಂಡೀಸ್ಗೆ ನೀರಸ ಬ್ಯಾಟಿಂಗ್ ಪ್ರದರ್ಶನ ತೆಲನೋವಾಗಿ ಪರಿಣಮಿಸಿತ್ತು. ತಪ್ಪುಗಳನ್ನು ತಿದ್ದಿ, ಸರಣಿಯ ಒಂದು ಪಂದ್ಯವನ್ನಾದರೂ ಗೆಲ್ಲಲೇಬೇಕಾದ ಒತಡದಲ್ಲಿ ಬ್ರಾತ್ವೇಟ್ ಪಡೆ ಇದೆ.