ಕರ್ನಾಟಕ

karnataka

ETV Bharat / sports

ಬಾಂಗ್ಲಾ ವಿರುದ್ಧ ಸಂಜು ಸಾಮ್ಸನ್ ಸೇರಿದಂತೆ ಯುವ ಆಟಗಾರರಿಗೆ ಅವಕಾಶ? - ಬಾಂಗ್ಲಾದೇಶ ಭಾರತ ಟಿ20 ಸರಣಿ

ನಾಳೆ ನಡೆಯಲಿರುವ 2ನೇ ಟಿ20 ಪಂದ್ಯಕ್ಕೆ ಕೇರಳದ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಸಂಜು ಸಾಮ್ಸನ್​ಗೆ ಅವಕಾಶ ನೀಡುವ ಸಾಧ್ಯತೆ ಇದೆ.

sanju samson

By

Published : Nov 6, 2019, 11:47 PM IST

ರಾಜ್​ಕೋಟ್​: ಬಾಂಗ್ಲಾದೇಶದ ವಿರುದ್ಧ ಯುವ ಆಟಗಾರರಾದ ಸಂಜು ಸಾಮ್ಸನ್​, ರಾಹುಲ್​ ಚಹಾರ್​ಗೆ ಅವಕಾಶ ನೀಡಲು ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.

ಬಾಂಗ್ಲಾದೇಶದ ವಿರುದ್ಧದ ಮೊದಲ ಪಂದ್ಯದಲ್ಲಿ ಸಂಜು ಸಾಮ್ಸನ್​, ರಾಹುಲ್​ ಚಹಾರ್​ ಹಾಗೂ ಮನೀಷ್​ ಪಾಂಡೆಗೆ ಅವಕಾಶ ಸಿಕ್ಕಿರಲಿಲ್ಲ. ಆ ಪಂದ್ಯದಲ್ಲಿ ಸೋಲುಕಂಡಿರುವ ಹಿನ್ನಲೆಯಲ್ಲಿ ನಾಯಕ ರೋಹಿತ್​ ತಂಡದಲ್ಲಿ ಕೆಲ ಬದಲಾವಣೆ ಬಯಸಿದ್ದು ಯುವಕರಿಗೆ ಹೆಚ್ಚು ಆದ್ಯತೆ ನೀಡುವುದಾಗಿ ತಿಳಿಸಿದ್ದರು. ಈಗಾಗಿ ಪಂತ್​ ಜಾಗಕ್ಕೆ ಸಂಜು ಹಾಗೂ ರಾಹುಲ್​ ಅಥವಾ ಅಯ್ಯರ್​ ಜಾಗಕ್ಕೆ ಮನೀಷ್​ ಪಾಂಡೆ, ವಾಷಿಂಗ್ಟನ್​ ಸುಂದರ್​ ಜಾಗದಲ್ಲಿ ರಾಹುಲ್​ ಚಹಾರ್​ಗೆ ಅವಕಾಶ ದೊರೆಯಬಹುದು ಎನ್ನಲಾಗುತ್ತಿದೆ.

ಸಂಜು ಸಾಮ್ಸನ್​ ಇತ್ತೀಚೆಗೆ ಮುಗಿದ ವಿಜಯ್​ ಹಜಾರೆ ಟ್ರೋಫಿಯಲ್ಲಿ ಭರ್ಜರಿ ದ್ವಿಶತಕ ಬಾರಿಸಿ ದಾಖಲೆ ಬರೆದಿದ್ದರು. ಇನ್ನು ಮನೀಷ್​ ಪಾಂಡೆ ಕೂಡ ಟೂರ್ನಿಯಲ್ಲಿ ಗರಿಷ್ಠ ರನ್​ ಬಾರಿಸಿದ ಪಟ್ಟಿಯಲ್ಲಿ ಟಾಪ್​ 10ಯಲ್ಲಿ ಕಾಣಿಸಿಕೊಂಡಿದ್ದರು.

ಉದಯೋನ್ಮುಖ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುತ್ತೇವೆ ಎಂದಿರುವ ರೋಹಿತ್​ ಮಾತನ್ನು ನೋಡಿದರೆ ಸಂಜು ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಆದರೆ ರಾಹುಲ್​ ಚಹಾರ್​ ಹಾಗೂ ಪಾಂಡೆ ಆಯ್ಕೆಯ ಬಗ್ಗೆ ನಾಳೆ ತಿಳಿಯಲಿದೆ.

ಎರಡನೇ ಟಿ20 ಪಂದ್ಯ ರಾಜ್​ಕೋಟ್​ನಲ್ಲಿ ಗುರುವಾರ ಸಂಜೆ 7 ಗಂಟೆಗೆ ನಡೆಯಲಿದೆ.

ABOUT THE AUTHOR

...view details