ಕರ್ನಾಟಕ

karnataka

ETV Bharat / sports

ವಿಶ್ವದ ದೊಡ್ಡ ಸ್ಟೇಡಿಯಂ ಮೊಟೇರಾದಲ್ಲಿ ಭಾರತ-ಇಂಗ್ಲೆಂಡ್ ನಡುವೆ​ ಹಗಲು-ರಾತ್ರಿ ಟೆಸ್ಟ್​?

2021 ಜನವರಿ- ಫೆಬ್ರವರಿಯಲ್ಲಿ ಇಂಗ್ಲೆಂಡ್ ತಂಡ 5 ಪಂದ್ಯಗಳ ಟೆಸ್ಟ್​ ಸರಣಿಯನ್ನಾಡಲು ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಲ್ಲಿ ಮೊಟೇರಾದಲ್ಲಿ ಯಾವುದಾದರೊಂದು ಹಗಲು-ರಾತ್ರಿ ಪಂದ್ಯ ಆಯೋಜನೆ ಮಾಡುವ ನಿರ್ಧಾರವನ್ನು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್​ ಶಾ ಸಮ್ಮುಖದಲ್ಲಿ ನಡೆದ ಬಿಸಿಸಿಐ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

By

Published : Feb 17, 2020, 4:57 PM IST

Ind vs Eng day and night test
ಹಗಲು ರಾತ್ರಿ ಟೆಸ್ಟ್​ ಪಂದ್ಯ

ನವದೆಹಲಿ: ಗುಜರಾತ್​ನಲ್ಲಿ ಪರಿಷ್ಕೃತಗೊಳ್ಳುತ್ತಿರುವ ಪ್ರಧಾನಿ ಮೋದಿಯವರ ಕನಸಿನ ಕ್ರೀಡಾಂಗಣ ಹಾಗೂ ವಿಶ್ವದ ಅತಿ ದೊಡ್ಡದಾದ ಕ್ರೀಡಾಂಗಣ ಎಂದೇ ಕರೆಸಿಕೊಳ್ಳುತ್ತಿರುವ ಮೊಟೇರಾದಲ್ಲಿ ಭಾರತ ತಂಡವು ಇಂಗ್ಲೆಂಡ್​ ವಿರುದ್ಧ ಹಗಲು-ರಾತ್ರಿ ಟೆಸ್ಟ್​ ಪಂದ್ಯವಾಡುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.

ಮೊಟೇರಾ ಕ್ರೀಡಾಂಗಣ

2021 ಜನವರಿ- ಫೆಬ್ರವರಿಯಲ್ಲಿ ಇಂಗ್ಲೆಂಡ್ ತಂಡ 5 ಪಂದ್ಯಗಳ ಟೆಸ್ಟ್​ ಸರಣಿಯನ್ನಾಡಲು ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಲ್ಲಿ ಮೊಟೇರಾದಲ್ಲಿ ಯಾವುದಾದರೊಂದು ಹಗಲು-ರಾತ್ರಿ ಪಂದ್ಯ ಆಯೋಜನೆ ಮಾಡುವ ನಿರ್ಧಾರವನ್ನು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್​ ಶಾ ಸಮ್ಮುಖದಲ್ಲಿ ನಡೆದ ಬಿಸಿಸಿಐ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದ್ದು. ಇನ್ನು ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ ಎಂದು ತಿಳಿದುಬಂದಿದೆ.

ಹಗಲು ರಾತ್ರಿ ಟೆಸ್ಟ್ ಪಂದ್ಯಗಳ ಅಂಕಿ-ಅಂಶ

ಭಾರತ ತಂಡ ತನ್ನ ಮೊದಲ ಅಹರ್ನಿಶಿ ಟೆಸ್ಟ್​ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದಲ್ಲಿ ಬಾಂಗ್ಲಾದೇಶದ ವಿರುದ್ಧ ಸೆಣಸಾಡಿತ್ತು. ಇನ್ನು ಈ ವರ್ಷ್ಯಾಂತ್ಯಕ್ಕೆ ಆಸ್ಟ್ರೇಲಿಯಾ ಪ್ರವಾಸದಲ್ಲೂ ಒಂದು ಹಗಲು-ರಾತ್ರಿ ಪಂದ್ಯವಾಡಲು ಭಾರತ ತಂಡ ಸಿದ್ಧ ಎಂಬ ವಿಚಾರ ಕೂಡ ಅದೇ ಬಿಸಿಸಿಐ ಸಭೆಯಲ್ಲಿ ನಿರ್ಧಾರವಾಗಿದೆ ಎಂದು ಎಂದು ಹೇಳಲಾಗ್ತಿದೆ.

ಹಗಲು ರಾತ್ರಿ ಟೆಸ್ಟ್​ ಪಂದ್ಯ

ಮೊಟೇರಾ ಸ್ಟೇಡಿಯಂನಲ್ಲಿ ಕೊನೆಯ ಬಾರಿ 2014ರಲ್ಲಿ ಅಂತಾರಾಷ್ಟ್ರೀಯ ಪಂದ್ಯ​ ಭಾರತ- ಶ್ರೀಲಂಕಾ ನಡುವೆ ನಡೆದಿತ್ತು. ನಂತರ ಗುಜರಾತ್​ ಕ್ರಿಕೆಟ್​ ಅಸೋಸಿಯೇಷನ್​ ಕ್ರೀಡಾಂಗಣವನ್ನು ಪುನರ್​ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು. ಇದು ಇದೀಗ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾಗಿದೆ. ಇಲ್ಲಿ 1ಲಕ್ಷದ 10 ಸಾವಿರ ಮಂದಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಆಸ್ಟ್ರೇಲಿಯಾದಲ್ಲಿ 1ಲಕ್ಷ ಸೀಟುಗಳಿರುವ ಎಂಸಿಜೆ ಕ್ರಿಕೆಟ್​ ಸ್ಟೇಡಿಯಂ ಇಲ್ಲಿಯವರೆಗೂ ವಿಶ್ವದ ದೊಡ್ಡ ಕ್ರೀಡಾಂಗಣ ಎನಿಸಿಕೊಂಡಿತ್ತು.

ABOUT THE AUTHOR

...view details