ಅಹ್ಮದಾಬಾದ್: ಸೂರ್ಯಕುಮಾರ್ ಭರ್ಜರಿ ಅರ್ಧಶತಕ ಮತ್ತು ಶಾರ್ದುಲ್ ಠಾಕೂರ್ ಬೌಲಿಂಗ್ ನೆರವಿನಿಂದ 4ನೇ ಟಿ20 ಪಂದ್ಯವನ್ನು 8 ರನ್ಗಳಿಂದ ಗೆದ್ದ ಭಾರತ ತಂಡ ಸರಣಿಯಲ್ಲಿ 2-2ರಲ್ಲಿ ಸಮಬಲ ಸಾಧಿಸಿದೆ. ಈ ಮೂಲಕ ಶನಿವಾರ ನಡೆಯುವ ಕೊನೆಯ ಟಿ20 ಪಂದ್ಯವನ್ನು ಮತ್ತಷ್ಟು ರೋಚಕವಾಗುವಂತೆ ಮಾಡಿದೆ.
ಟಾಸ್ ಸೋತ ಭಾರತ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 185 ರನ್ಗಳಿಸಿತು. ಆರಂಭಿಕರಾದ ರೋಹಿತ್(12) ಮತ್ತು ರಾಹುಲ್(14) ಈ ಪಂದ್ಯದಲ್ಲೂ ವಿಫಲರಾದರೆ, ಕೊಹ್ಲಿ ಕೇವಲ 1 ರನ್ಗಳಿಸಿ ಔಟಾದರು. ಆದರೆ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಬ್ಯಾಟಿಂಗ್ ಬಂದ ಸೂರ್ಯಕುಮಾರ್ ಯಾದವ್ ಕೇವಲ 31 ಎಸತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 57 ರನ್ಗಳಿಸಿ ಅನುಮಾಸ್ಪದ ಕ್ಯಾಚ್ಗೆ ಬಲಿಯಾದರು.
ಕೊನೆಯಲ್ಲಿ ಅಬ್ಬರಿಸಿದ ಅಯ್ಯರ್ 18 ಎಸೆತಗಳಲ್ಲಿ 37 ರನ್ ಹಾಗೂ ಪಂತ್ 23 ಎಸೆತಗಳಲ್ಲಿ 30 ರನ್ಗಳಿಸಿದರು. ಪಾಂಡ್ಯ 11, ಠಾಕೂರ್ 10 ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಇಂಗ್ಲೆಂಡ್ ತಂಡದ ಪರ ಆರ್ಚರ್ 4 ವಿಕೆಟ್, ರಶೀದ್, ಮಾರ್ಕ್ ವುಡ್, ಸ್ಟೋಕ್ಸ್ ಹಾಗೂ ಕರ್ರನ್ ತಲಾ 1ವಿಕಟ್ ಪಡೆದುಕೊಂಡರು.
186 ರನ್ಗಳ ಬೆನ್ನತ್ತಿದ ಇಂಗ್ಲೆಂಡ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 177 ರನ್ಗಳಿಸಿ 8 ರನ್ಗಳ ಸೋಲುಂಡಿತು.
ಆರಂಭಿಕ ಬ್ಯಾಟ್ಸ್ಮನ್ ಜೋಸ್ ಬಟ್ಲರ್ರನ್ನು ಕೇವಲ 9 ರನ್ಗಳಿಗೆ ಔಟ್ ಮಾಡುವ ಮೂಲಕ ಭುವನೇಶ್ವರ್ ಕುಮಾರ್ ಭಾರತಕ್ಕೆ ಮೇಲುಗೈ ತಂದುಕೊಟ್ಟರು. ನಂತರ ಜೇಸನ್ ರಾಯ್ ಸೇರಿಕೊಂಡ ಮಲನ್ ಭಾರತದ ದಾಳಿಗೆ ರನ್ಗಳಿಸಲಾರದೆ ಪರದಾಡಿ 17 ಎಸೆತಗಳಲ್ಲಿ 14 ರನ್ಗಳಿಸಿ ರಾಹುಲ್ ಚಹಾರ್ಗೆ ವಿಕೆಟ್ ಒಪ್ಪಿಸಿದರು.
ಇದನ್ನು ಓದಿ:ಟಿ-20ಯಲ್ಲಿ ಮೊದಲ ಬಾರಿಗೆ ವಿರಾಟ್ ಸ್ಟಂಪ್ ಔಟ್: ರಶೀದ್ ಗೂಗ್ಲಿಗೆ ವಿಕೆಟ್ ಮೋದಿ ಮೈದಾನದಲ್ಲಿ ನಡೆಯದ ರಾಹುಲ್ ಆಟ; ಮತ್ತೊಮ್ಮೆ ನಿರಾಸೆ ಮೂಡಿಸಿದ ಕನ್ನಡಿಗ
ಆದರೆ ಅಬ್ಬರಿಸಿದ ರಾಯ್ 27 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ಸ ಹಿತ 40 ರನ್ಗಳಿಸಿ ಮಲನ್ ಔಟಾದ ನಂತರದ ಓವರ್ನಲ್ಲೆ ಪೆವಿಲಿಯನ್ಗೆ ಮರಳಿದರು. 66 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಈ ಹಂತದಲ್ಲಿ ಒಂದಾದ ಬೈರ್ಸ್ಟೋವ್ ಮತ್ತು ಬೆನ್ ಸ್ಟೋಕ್ಸ್ 4ನೇ ವಿಕೆಟ್ಗೆ 65 ರನ್ ಸೇರಿಸಿ ಆಘಾತದಿಂದ ಪಾರು ಮಾಡಿದಲ್ಲದೆ ಇಂಗ್ಲೆಂಡ್ ಮತ್ತೆ ಸ್ಪರ್ಧೆಗೆ ಮರಳುವಂತೆ ಮಾಡಿದರು.
19 ಎಸೆತಗಳಲ್ಲಿ 25 ರನ್ಗಳಿಸಿದ್ದ ಬೈರ್ಸ್ಟೋವ್ರನ್ನು ರಾಹುಲ್ ಚಹಾರ್ ಪೆವಿಲಿಯನ್ಗಟ್ಟುವ ಮೂಲಕ ಜೊತೆಯಾಟವನ್ನು ಬ್ರೇಕ್ ಮಾಡಿದರು. ನಂತರ 17ನೇ ಓವರ್ನಲ್ಲಿ ಠಾಕೂರ್ 23 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳೊಂದಿಗೆ 46 ರನ್ಗಳಿಸಿದ್ದ ಸ್ಟೋಕ್ಸ್ ಮತ್ತು 4 ರನ್ಗಳಿಸಿದ್ದ ಬಟ್ಲರ್ರನ್ನು ಸತತ 2 ಎಸೆತಗಳಲ್ಲಿ ಪೆವಿಲಿಯನ್ಗಟ್ಟುವ ಮೂಲಕ ಭಾರತಕ್ಕೆ ಗೆಲುವನ್ನು ಖಚಿತಪಡಿಸಿದರು. ಇವರಿಬ್ಬರ ಬೆನ್ನಲ್ಲೇ ಪಾಂಡ್ಯ ಸ್ಯಾಮ್ ಕರ್ರನ್ರನ್ನು ಬೌಲ್ಡ್ ಮಾಡಿದರು.
ಕೊನೆಯ ಓವರ್ನಲ್ಲಿ ಇಂಗ್ಲೆಂಡ್ಗೆ ಗೆಲ್ಲಲು 23ರನ್ಗಳ ಅವಶ್ಯಕತೆಯಿತ್ತು. ಠಾಕೂರ್ ಎಸೆದ ಮೊದಲ ಎಸೆತದಲ್ಲಿ ಸಿಂಗಲ್ಸ್ ಬಂದರೆ 2 ಮತ್ತು 3ನೇ ಎಸೆತಗಳಲ್ಲಿ ಆರ್ಚರ್ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ನಂತರ 2 ವೈಡ್ ಎಸೆದರು. 3 ಎಸೆತಗಳಲ್ಲಿ 10 ರನ್ಗಳ ಅವಶ್ಯಕತೆಯಿತ್ತು. ಆದರೆ 4ನೇ ಎಸೆತದಲ್ಲಿ ಒಂದು ರನ್ ಬಿಟ್ಟುಕೊಟ್ಟ ಠಾಕೂರ್, ನಂತರದ ಎಸೆತದಲ್ಲಿ ಜೋರ್ಡನ್ ವಿಕೆಟ್ ಪಡೆದು ಭಾರತಕ್ಕೆ 8 ರನ್ಗಳ ರೋಚಕ ಜಯ ತಂದುಕೊಟ್ಟರು.
ಆರ್ಚರ್ 8 ಎಸೆತಗಳಲ್ಲಿ 18 , ಜೋರ್ಡನ್ 12 ರನ್ಗಳಿಸಿದರು. ಭಾರತದ ಪರ ಶಾರ್ದುಲ್ ಠಾಕೂರ್ 3 ವಿಕೆಟ್, ಹಾರ್ದಿಕ್ ಪಾಂಡ್ಯ ಮತ್ತು ರಾಹುಲ್ ಚಹಾರ್ ತಲಾ 2 ಮತ್ತು ಭುವನೇಶ್ವರ್ ಕುಮಾರ್ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನು ಓದಿ:ಮೋದಿ ಮೈದಾನದಲ್ಲಿ ನಡೆಯದ ರಾಹುಲ್ ಆಟ; ಮತ್ತೊಮ್ಮೆ ನಿರಾಸೆ ಮೂಡಿಸಿದ ಕನ್ನಡಿಗ