ಮುಂಬೈ: ತವರಿನಲ್ಲಿ ಎದುರಾಳಿಗಳ ಪಾಲಿಗೆ ಕಬ್ಬಿಣದ ಕಡಲೆಯಾಗಿರುವ ಕೊಹ್ಲಿ ಬಳಗ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಗೆದ್ದರೆ ಆಸ್ಟ್ರೇಲಿಯಾ ಹೆಸರಿನಲ್ಲಿರುವ ವಿಶ್ವ ದಾಖಲೆ ಪತನವಾಗಲಿದೆ.
ಭಾರತದಲ್ಲಿ ಭಾರತ ತಂಡವೇ ಬಲಿಷ್ಠ. ಇಲ್ಲಿ ಕಳೆದ 9 ವರ್ಷಗಳಿಂದ ಟೀಂ ಇಂಡಿಯಾ ಟೆಸ್ಟ್ ಸರಣಿ ಸೋತಿಲ್ಲ. ಸತತ 10 ಟೆಸ್ಟ್ ಸರಣಿ ಗೆಲ್ಲುವ ಮೂಲಕ ಭಾರತ ತಂಡ ಆಸ್ಟ್ರೇಲಿಯಾದೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿದೆ. ಇದೀಗ ಆ ಮಹತ್ವದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಳ್ಳಲು ಕೊಹ್ಲಿ ಬಳಗಕ್ಕೆ ಅದ್ಭುತ ಅವಕಾಶ ದೊರೆತಿದೆ.
ಆಸ್ಟ್ರೇಲಿಯಾ ತಂಡ 1994/95ರಿಂದ 2000ದವರೆಗೆ ಹಾಗೂ 2004ರಿಂದ 2008/09ರವರೆಗೆ ತವರಿನಲ್ಲಿ ಸತತ 10 ಸರಣಿಗಳನ್ನು ಜಯಿಸಿತ್ತು. ಇದೀಗ ಭಾರತವೂ 2013 ರಿಂದ ಇಲ್ಲಿಯವರೆಗೆ ತವರಿನಲ್ಲಿ ಸತತ 10 ಟೆಸ್ಟ್ ಸರಣಿ ಜಯಿಸಿದೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಜಯಿಸಿದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ತವರಿನಲ್ಲಿ ಸತತ 11 ಸರಣಿ ಗೆದ್ದ ಮೊದಲ ತಂಡ ಎನಿಸಿಕೊಳ್ಳಲಿದೆ.
ಭಾರತದ 2013 ರಿಂದ ಗೆದ್ದಿರುವ ಟೆಸ್ಟ್ ಸರಣಿಗಳು:
- 2012-2013 ಆಸ್ಟ್ರೇಲಿಯಾ ವಿರುದ್ಧ 4-0
- 2013-14 ವೆಸ್ಟ್ ಇಂಡೀಸ್ ವಿರುದ್ಧ 2-0
- 2015-16 ದಕ್ಷಿಣ ಆಫ್ರಿಕಾ ವಿರುದ್ಧ 3-0
- 2016-17 ನ್ಯೂಜಿಲ್ಯಾಂಡ್ ವಿರುದ್ಧ 3-0
- 2016-17 ಇಂಗ್ಲೆಂಡ್ ವಿರುದ್ಧ 4-0
- 2016-17 ಬಾಂಗ್ಲಾದೇಶ ವಿರುದ್ಧ 1-0
- 2016-17 ಆಸ್ಟ್ರೇಲಿಯಾ ವಿರುದ್ಧ 2-1
- 2017-18 ಶ್ರೀಲಂಕಾ ವಿರುದ್ಧ 2-1
- 2018 ಆಫ್ಘಾನಿಸ್ತಾನ ವಿರುದ್ಧ 1-0
- 2018-2019 ವೆಸ್ಟ್ ಇಂಡೀಸ್ ವಿರುದ್ಧ 2-0