ಚೆನ್ನೈ: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 317 ರನ್ಗಳ ಅಂತರದಿಂದ ಗೆದ್ದ ಭಾರತ ತಂಡ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ 4ರಿಂದ 2ನೇ ಸ್ಥಾನಕ್ಕೆ ಜಿಗಿದಿದೆ.
ಚೆಪಾಕ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಭಾರತ ಗೆಲುವಿನ ಸರಾಸರಿ ಅಂಕ 69.7ಕ್ಕೆ ಏರಿಕೆಯಾಗಿದ್ದು, 2ನೇ ಸ್ಥಾನಕ್ಕೇರಿದೆ. ಈಗಾಗಲೆ ಫೈನಲ್ಗೆ ಅರ್ಹತೆಗಿಟ್ಟಿಸಿಕೊಂಡಿರುವ ನ್ಯೂಜಿಲ್ಯಾಂಡ್ ತಂಡ(70) ಮೊದಲ ಸ್ಥಾನದಲ್ಲಿದೆ. ಭಾರತ ಒಟ್ಟು 460 ಚಾಂಪಿಯನ್ಶಿಪ್ ಅಂಕಗಳನ್ನು ಹೊಂದಿದ್ದರೆ, ಕಿವೀಸ್ 420 ಅಂಕಗಳನ್ನು ಹೊಂದಿದೆ. ಕೋವಿಡ್ 19 ಕಾರಣದಿಂದ ಕೆಲವು ಸರಣಿ ರದ್ದಾಗಿರುವುದರಿಂದ ಒಟ್ಟು ಅಂಕಗಳಿಗೆ ಬದಲಾಗಿ ಗೆಲುವಿನ ಸರಾಸರಿ ಅಂಕದಲ್ಲಿ ಗರಿಷ್ಠ ಅಂಕ ಪಡೆದ ತಂಡಗಳು ಫೈನಲ್ನಲ್ಲಿ ಸೆಣಸಾಡಲಿವೆ.