ಕರ್ನಾಟಕ

karnataka

ETV Bharat / sports

ಭಾರತ -ಶ್ರೀಲಂಕಾ ನಡುವೆ ಚುಟುಕು ಸಮರ.. ಬಿಸಿಸಿಐನಿಂದ ವೇಳಾಪಟ್ಟಿ ಬಿಡುಗಡೆ! - ಬಿಸಿಸಿಐ

2020ರ ಆರಂಭದಲ್ಲಿ ಶ್ರೀಲಂಕಾ ತಂಡ 3 ಟಿ-20 ಪಂದ್ಯಗಳ ಸರಣಿಯನ್ನ ಆಡಲು ಭಾರತದ ಪ್ರವಾಸ ಕೈಗೊಳ್ಳಲಿದೆ.

ಭಾರತ-ಶ್ರೀಲಂಕಾ

By

Published : Sep 25, 2019, 7:22 PM IST

ನವದೆಹಲಿ:ಮುಂಬರುವ 2020ರ ಜನವರಿಯಲ್ಲಿ ಶ್ರೀಲಂಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಆತಿಥೇಯರ ವಿರುದ್ಧ 3 ಪಂದ್ಯಗಳ ಟಿ-20 ಸರಣಿ ಆಡಲಿದೆ.

ಮೊದಲ ಟಿ-20 ಪಂದ್ಯ ಜನವರಿ 5 ಗುವಾಹಟಿ
ಎರಡನೇ ಟಿ-20 ಪಂದ್ಯ ಜನವರಿ 7 ಇಂದೋರ್
ಮೂರನೇ ಟಿ-20 ಪಂದ್ಯ ಜನವರಿ 10 ಪುಣೆ

ಈ ಮೊದಲು ಭಾರತ 2020ರ ಜನವರಿ 5 ರಿಂದ ಜಿಂಬಾಂಬೆ ವಿರುದ್ಧ ಟಿ-20 ಸರಣಿ ಆಡಬೇಕಿತ್ತು. ಆದರೆ, ಜಿಂಬಾಬ್ವೆ ದೇಶದ ಕ್ರೀಡಾ ಚಟುವಟಿಕೆಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ತಡೆಗಟ್ಟುವಲ್ಲಿ ಕ್ರಿಕೆಟ್ ಮಂಡಳಿ ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಐಸಿಸಿ ಜಿಂಬಾಬ್ವೆ ಕ್ರಿಕೆಟ್ ಬೋರ್ಡ್​ ಅಮಾನತು ಮಾಡಿ ಆದೇಶ ಹೊರಡಿಸಿತ್ತು.

ಆದ್ದರಿಂದ ಜಿಂಬಾಬ್ವೆ ತಂಡ ಐಸಿಸಿ ಪ್ರಾಯೋಜಿತ ಯಾವುದೇ ಸರಣಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಭಾರತ ತಂಡ ಶ್ರೀಲಂಕಾ ಕ್ರಿಕೆಟ್​ ಮಂಡಳಿಯನ್ನ ಟಿ-20 ಸರಣಿ ಆಡಲು ಆಹ್ವಾನ ನೀಡಿತ್ತು. ಬಿಸಿಸಿಐ ಮನವಿಗೆ ಲಂಕಾ ಕ್ರಿಕೆಟ್ ಬೋರ್ಡ್​ ಒಪ್ಪಿಗೆ ನೀಡಿದ್ದು, ಜನವರಿ 5ರಿಂದ 3 ಪಂದ್ಯಗಳ ಟಿ-20 ಸರಣಿ ಪ್ರಾರಂಭವಾಗಲಿದೆ.

ABOUT THE AUTHOR

...view details