ಚೆನ್ನೈ:ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸಂಪೂರ್ಣ ಮೇಲುಗೈ ಸಾಧಿಸಿದ್ದು, ಗೆಲುವು ಸಾಧಿಸಲು ಕೊಹ್ಲಿ ಪಡೆಗೆ 7 ವಿಕೆಟ್ಗಳ ಅವಶ್ಯಕತೆ ಇದೆ.
ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡ 3ವಿಕೆಟ್ ಕಳೆದುಕೊಂಡು 52 ರನ್ಗಳಿಸಿದ್ದು, ಇನ್ನು 429 ರನ್ಗಳ ಅವಶ್ಯಕತೆ ಇದೆ. ಇನ್ನೆರಡು ದಿನಗಳ ಆಟ ಬಾಕಿ ಉಳಿದುಕೊಂಡಿದ್ದು, ಟೀಂ ಇಂಡಿಯಾ ಗೆಲುವು ಸಾಧಿಸುವ ಎಲ್ಲ ಲಕ್ಷಣ ಗೋಚರಿಸುತ್ತಿವೆ.
ಓದಿ: 286ರನ್ಗಳಿಗೆ ಟೀಂ ಇಂಡಿಯಾ ಆಲೌಟ್: ಇಂಗ್ಲೆಂಡ್ ಗೆಲುವಿಗೆ 482ರನ್ ಟಾರ್ಗೆಟ್!
ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಆರ್ ಅಶ್ವಿನ್ ಭರ್ಜರಿ ಶತಕದ ನೆರವಿನಿಂದ ಟೀಂ ಇಂಡಿಯಾ 286 ರನ್ಗಳಿಕೆ ಮಾಡಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿದ್ದು, ಎದುರಾಳಿ ತಂಡಕ್ಕೆ 482ರನ್ಗಳ ಗೆಲುವಿನ ಟಾರ್ಗೆಟ್ ನೀಡಿದೆ.
ಇದರ ಗುರಿ ಬೆನ್ನಟ್ಟಿರುವ ಆಂಗ್ಲರ ಪಡೆ 53ರನ್ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದು, ಗೆಲುವಿಗೆ ಇನ್ನು 429 ರನ್ಗಳ ಅವಶ್ಯಕತೆ ಇದೆ. ರೋರಿ ಬರ್ನ್ಸ್(25), ಡಾಮಿನಿಕ್ ಸಿಬ್ಲಿ(0), ಲೀಚ್(0) ವಿಕೆಟ್ ಕಳೆದುಕೊಂಡಿದ್ದು, ಸದ್ಯ ರೂಟ್(2*), ಡೇನಿಯಲ್ ಲಾರೆನ್ಸ್(19*) ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಟೀಂ ಇಂಡಿಯಾ ಪರ ಎರಡನೇ ಇನ್ನಿಂಗ್ಸ್ನಲ್ಲಿ ಅಕ್ಸರ್ ಪಟೇಲ್ 2ವಿಕೆಟ್ ಹಾಗೂ ಅಶ್ವಿನ್ 1ವಿಕೆಟ್ ಪಡೆದುಕೊಂಡಿದ್ದಾರೆ. ಇದಕ್ಕೂ ಮೊದಲು ಬ್ಯಾಟಿಂಗ್ನಲ್ಲಿ ಮಿಂಚಿದ ಆರ್ ಅಶ್ವಿನ್ 106ರನ್ಗಳಿಕೆ ಮಾಡಿ ಟೀಂ ಇಂಡಿಯಾಗೆ ಉತ್ತಮ ಕೊಡುಗೆ ನೀಡಿದ್ದರು.