ಕರ್ನಾಟಕ

karnataka

ETV Bharat / sports

ಭಾರತಕ್ಕೆ ಕೊನೆಗೂ ಧೋನಿ ಉತ್ತರಾಧಿಕಾರಿ ಸಿಕ್ಕಿದ್ದಾರೆ: ಕನ್ನಡಿಗನ ಬಗ್ಗೆ ಶೋಯೆಬ್​ ಮಾತು!

ಟೀಂ ಇಂಡಿಯಾ ತಂಡಕ್ಕೆ ಕೊನೆಗೂ ಧೋನಿ ಉತ್ತರಾಧಿಕಾರಿ ಸಿಕ್ಕಿದ್ದಾರೆ ಎಂದು ಪಾಕ್​ನ ಮಾಜಿ ವೇಗದ ಬೌಲರ್​ ಶೋಯೆಬ್​ ಅಖ್ತರ್​ ಹೇಳಿಕೊಂಡಿದ್ದಾರೆ.

Shoaib Akhtar
ಟೀಂ ಇಂಡಿಯಾ

By

Published : Jan 22, 2020, 3:29 AM IST

ಕರಾಚಿ:ಭಾರತ ಕ್ರಿಕೆಟ್​ ತಂಡಕ್ಕೆಕಳೆದ ಕೆಲ ತಿಂಗಳಿಂದ ಕಾಡುತ್ತಿದ್ದ ಮಹತ್ವದ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಹೇಳಿದ್ದು, ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಕನ್ನಡಿಗನ ಗುಣಗಾನ ಮಾಡಿದ್ದಾರೆ.

ಶೋಯೆಬ್​ ಅಖ್ತರ್​​

ಇಂಗ್ಲೆಂಡ್​ನಲ್ಲಿ ಮುಕ್ತಾಯಗೊಂಡ ವಿಶ್ವಕಪ್​ ಬಳಿಕ ಮಹೇಂದ್ರ ಸಿಂಗ್​ ಧೋನಿ ಮೈದಾನಕ್ಕೆ ಇಳಿದಿಲ್ಲ. ಅವರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್​ ಅನೇಕ ಪ್ಲೇಯರ್ಸ್​ಗಳಿಗೆ ಈ ಜಾಗದಲ್ಲಿ ಆಡಿಸಿ ನೋಡಿದ್ದು, ಇದೀಗ ಅದಕ್ಕೆ ಉತ್ತರ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಮನೀಷ್​-ಶ್ರೇಯಸ್​​

ಆಸ್ಟ್ರೇಲಿಯಾ ಸರಣಿಗಿಂತಲೂ ಮುಂಚಿತವಾಗಿ ಧೋನಿ ಸ್ಥಾನದಲ್ಲಿ ರಿಷಭ್​ ಪಂತ್​​ ಫಿನಿಶರ್​ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕನ್ನಡಿಗ ಮನೀಷ್​ ಪಾಂಡೆ ಆ ಸ್ಥಾನವನ್ನ ತುಂಬಿದ್ದು, ಭಾರತ ತಂಡಕ್ಕೆ ಧೋನಿಯ ಉತ್ತರಾಧಿಕಾರಿ ಸಿಕ್ಕಿದ್ದಾರೆ. ಆಸೀಸ್ ಸರಣಿಯಲ್ಲಿ ಮನೀಷ್ ಪಾಂಡೆ ಉತ್ತಮವಾಗಿ ಕಂಡರು. ಶ್ರೇಯಸ್ ಅಯ್ಯರ್ ಕೂಡಾ ಓರ್ವ ಪರಿಪೂರ್ಣ ಆಟಗಾರನಾಗುತ್ತಿದ್ದಾನೆ. ಇವರಿಬ್ಬರು ಭಾರತದ ಬ್ಯಾಟಿಂಟ್​ಗೆ ಶಕ್ತಿ ತುಂಬಿದ್ದಾರೆ ಎಂದು ಅಖ್ತರ್ ಗುಣಗಾನ ಮಾಡಿದ್ದಾರೆ.

ಇಬ್ಬರು ಆಟಗಾರರು ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಒತ್ತಡವನ್ನ ಹೇಗೆ ನಿಬಾಯಿಸಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ ಎಂದಿರುವ ಅಖ್ತರ್​​, ಟೀಂ ಇಂಡಿಯಾ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಆಯ್ಕೆ ಎಂದು ಹೇಳಿದ್ದಾರೆ.

ABOUT THE AUTHOR

...view details