ಕರ್ನಾಟಕ

karnataka

ETV Bharat / sports

18 ವರ್ಷದ ಹಿಂದೆ ಈ ದಿನ.. ಆಸೀಸ್‌ ವಿಶ್ವ ದಾಖಲೆ ಕನಸಿಗೆ ದಾದಾ ಎಳ್ಳುನೀರು..!

2001ರ ಮಾರ್ಚ್‌ 15ರಂದು ಕೋಲ್ಕತಾದ ಈಡನ್‌ ಗಾರ್ಡನ್‌ನಲ್ಲಿ ದಾಖಲೆಗಾಗಿ ಶಕ್ತಿ ಮೀರಿ ಎಫರ್ಟ್ ಹಾಕಿದ್ದ ಆಸೀಸ್‌ ಪಡೆಯ ಕನಸಿಗೆ ಅಂದಿನ ಟೀಂ ಇಂಡಿಯಾದ ನಾಯಕ ಸೌರವ್‌ ಗಂಗೂಲಿ ತಮ್ಮ ತವರು ನೆಲದಲ್ಲಿ ಅದಕ್ಕೆ ತಣ್ಣೀರೆರಚಿದ್ದರು.

ಕೃಪೆ: ಟ್ವಿಟ್ಟರ್​

By

Published : Mar 15, 2019, 5:35 PM IST

ಕೋಲ್ಕತಾ: ಇವತ್ತಿಗೆ ಬರೋಬ್ಬರಿ 18 ವರ್ಷ. ಕೋಲ್ಕತಾ ಈಡನ್‌ ಗಾರ್ಡನ್‌ನಲ್ಲಿ ಸೌರವ್‌ ಗಂಗೂಲಿ ಆಸೀಸ್‌ ಕ್ಯಾಪ್ಟನ್‌ ಸ್ಟೀವ್‌ ವಾ ವಿಜಯದ ರಥ ಕಟ್ಟಿ ಹಾಕಿದ್ದರು. 2001ರ ಮಾರ್ಚ್‌ 15ರಂದು ನಡೆದ ಆ ಐತಿಹಾಸಿಕ ಟೆಸ್ಟ್‌ ಪಂದ್ಯದಲ್ಲಿ ಕಾಂಗರೂಗಳ ಬೆನ್ನ ಹುರಿಯನ್ನೇ ಮುರಿದಿದ್ದರು ಬಂಗಾಳದ ಹುಲಿ.

ಆಸೀಸ್‌ ವರ್ಲ್ಡ್‌ ರೆಕಾರ್ಡ್‌ ಕನಸು ನುಚ್ಚುನೂರು:

ಸ್ಟೀವ್‌ ವಾ ಕ್ಯಾಪ್ಟೆನ್ಸಿಯಲ್ಲಿ ಆಸೀಸ್‌ ಸತತ 10 ಟೆಸ್ಟ್‌ ಸಿರೀಸ್‌ ಗೆದ್ದು ವಿಶ್ವ ದಾಖಲೆ ನಿರ್ಮಿಸುವ ಕನಸು ಹೊಂದಿತ್ತು. 2001ರ ಮಾರ್ಚ್‌ 15ರಂದು ಕೋಲ್ಕತಾದ ಈಡನ್‌ ಗಾರ್ಡನ್‌ನಲ್ಲಿ ದಾಖಲೆಗಾಗಿ ಆಸೀಸ್‌ ಪಡೆ ಶಕ್ತಿಮೀರಿ ಎಫರ್ಟ್ ಹಾಕಿತ್ತು. ಆದರೆ, ಸೌರವ್‌ ಗಂಗೂಲಿ ತಮ್ಮ ತವರು ನೆಲದಲ್ಲಿ ಆಸೀಸ್‌ ಆಸೆಗೆ ತಣ್ಣೀರೆರಚಿದ್ದರು. ಟೀಂ ಇಂಡಿಯಾದ ಮರ್ಯಾದೆ ಕಾಪಾಡಿದ್ದರು ದಾದಾ.

ಕೃಪೆ: ಟ್ವಿಟ್ಟರ್​

ಇತಿಹಾಸ ರಚನೆಗೆ ಬಂಗಾಳ ಹುಲಿ ನೇತೃತ್ವ :

ಅವತ್ತು ಈಡನ್ ಗಾರ್ಡನ್‌ ಮೈದಾನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಟಾಸ್ ಗೆದ್ದ ಆಸೀಸ್‌ ಕ್ಯಾಪ್ಟನ್‌ ಸ್ವೀವ್ ವಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲೇ 445 ಗಳಿಸಿದ್ದ ಆಸ್ಟ್ರೇಲಿಯಾ, ಬಳಿಕ ಭಾರತವನ್ನ ಫಸ್ಟ್‌ ಇನ್ನಿಂಗ್ಸ್‌ನಲ್ಲಿ ಬರೀ 171ರನ್‌ಗೆ ಕಟ್ಟಿ ಹಾಕಿತ್ತು. ಟೀಂ ಇಂಡಿಯಾಗೆ ಆಸೀಸ್‌ ಫಾಲೋಆನ್‌ ಸವಾಲು ಒಡ್ಡಿತ್ತು. ಹೈದರಾಬಾದ್‌ ಸ್ಟೈಲಿಷ್ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಹಾಗೂ ವಾಲ್‌ ಖ್ಯಾತಿಯ ರಾಹುಲ್ ದ್ರಾವಿಡ್ ಅತ್ಯದ್ಭುತ ಪಾರ್ಟ್‌ನರ್‌ಶಿಪ್‌ ಮ್ಯಾಚ್‌ನ ಎಲ್ಲ ಸಮೀಕರಣ ಅದಲು ಬದಲು ಮಾಡಿತ್ತು. 7 ವಿಕೆಟ್‌ನಷ್ಟಕ್ಕೆ 657 ಪೇರಿಸಿದ ಭಾರತ ಫಾಲೋಆನ್‌ ತಪ್ಪಿಸಿಕೊಂಡಿತ್ತು. 5ನೇ ದಿನದಾಟದಲ್ಲಿ ಲಕ್ಷ್ಮಣ್ ಮತ್ತು ದ್ರಾವಿಡ್‌ ಜುಗಲ್‌ಬಂದಿ 376ರನ್‌ ಕಾಣಿಕೆ ನೀಡಿತ್ತು. ಲಕ್ಷ್ಮಣ್ 281ರನ್‌ ಗಳಿಸಿ ವಾಪಸಾದ್ರೇ, ದ್ರಾವಿಡ್‌ 180 ರನ್ ಸಿಡಿಸಿ ರನೌಟ್ ಆಗಿದ್ದರು.

ನಿರ್ಣಾಯಕ 5ನೇ ದಿನದಾಟದಲ್ಲಿ ಭಾರತ ಪವಾಡ :

ಭಾರತ 383 ರನ್‌ ಪೇರಿಸಿ, ಆಸೀಸ್‌ಗೆ ಗೆಲ್ಲಲು 384 ರನ್‌ ಗುರಿ ಇರಿಸಿತ್ತು. ಆ ರೀತಿ ಟೆಸ್ಟ್‌ ಇತಿಹಾಸದಲ್ಲಿಯೇ ಯಾವತ್ತೂ ಆಗಿರಲಿಲ್ಲ. 45ನೇ ಓವರ್‌ಗೆ ಕಾಂಗರೂ ತಂಡದ 3 ವಿಕೆಟ್‌ಗಳು ತರಗಲೆಗಳಂತೆ ಉದುರಿದ್ದವು. ಆಗ ಆಸೀಸ್‌ ತಂಡದ ಸ್ಕೋರ್‌166. ಕೊನೆ ದಿನದ ಆಟ ಮುಗಿಯಲು ಇನ್ನೂ 30 ಓವರ್‌ ಬಾಕಿಯಿದ್ದವು. ಎಲ್ಲರೂ ಪಂದ್ಯ ಡ್ರಾ ಆಗುತ್ತೆ ಅಂದ್ಕೊಂಡಿದ್ದರು. ಆದರೆ, ಪಂಜಾಬ್‌ ಪುತ್ತರ್‌ ಬೌಲಿಂಗ್‌ನಲ್ಲಿ ಜಾದೂ ಮಾಡಿಬಿಟ್ಟರು. ಕ್ಯಾಪ್ಟನ್‌ ಸ್ಟೀವ್‌ ವಾ ಮತ್ತು ರಿಕಿ ಪಾಂಟಿಂಗ್‌ ಇಬ್ಬರನ್ನೂ ಭಜ್ಜಿ ಪೆವಿಲಿಯನ್‌ಗೆ ಅಟ್ಟಿದ್ದರು. ಐದು ವಿಕೆಟ್‌ ಕಳ್ಕೊಂಡ ಬಳಿಕ ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ಬಾಲ್‌ ಕೈಗೆತ್ತಿಕೊಂಡಿದ್ದರು.

ಕೃಪೆ: ಟ್ವಿಟ್ಟರ್​

ಬಾಲ್‌ನಿಂದ ಜಾದೂ ಮಾಡಿದ ಕ್ರಿಕೆಟ್ ದೇವರು :

ಆ್ಯಡಂ ಗಿಲ್‌ಕ್ರಿಸ್ಟ್‌, ಶೇನ್‌ ವಾರ್ನ್‌ ಹಾಗೂ ಮಾಥ್ಯೂ ಹೇಡನ್‌ರಿಗೆ ಪೆವಿಲಿಯನ್ ದಾರಿ ತೋರಿಸಿದ್ದರು ಸಚಿನ್‌. ಆಗ ಟೀಂ ಇಂಡಿಯಾ ಗೆಲ್ಲುವ ವಿಶ್ವಾಸ ಮತ್ತಷ್ಟು ಹೆಚ್ಚಿತ್ತು. ಇನ್ನುಳಿದ ಆಸೀಸ್‌ನ ಎರಡೂ ವಿಕೆಟ್‌ಗಳನ್ನ ಹರ್ಭಜನ್‌ ಸಿಂಗ್‌ ಕಬಳಿಸಿದ್ದರು. ಆಸ್ಟ್ರೇಲಿಯಾ 212 ರನ್‌ಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತು. 171ರನ್‌ಗಳಿಂದ ಭಾರತ ಆ ಟೆಸ್ಟ್‌ ಪಂದ್ಯವನ್ನ ಗೆದ್ದುಬಿಟ್ಟಿತು. ಅದಾದ ಬಳಿಕ ಚೆನ್ನೈನಲ್ಲಿ ನಡೆದ 3ನೇ ಟೆಸ್ಟ್‌ ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡವನ್ನ ಬಗ್ಗುಬಡಿದಿದ್ದ ಭಾರತ, 2-1 ಅಂತರದಿಂದ ಆಸೀಸ್‌ ವಿರುದ್ಧ ಟೆಸ್ಟ್‌ ಸಿರೀಸ್‌ ಗೆದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿತ್ತು. 3ನೇ ಟೆಸ್ಟ್‌ನಲ್ಲೂ ಭಲ್ಲೆ ಭಲ್ಲೆ ಭಜ್ಜಿ, ಮೊದಲ ಇನ್ನಿಂಗ್ಸ್‌ನಲ್ಲಿ ರಿಕಿ ಪಾಂಟಿಂಗ್, ಆ್ಯಡಂ ಗಿಲ್‌ಕ್ರಿಸ್ಟ್‌ ಹಾಗೂ ಶೇನ್ ವಾರ್ನ್‌ ವಿಕೆಟ್‌ ಕಿತ್ತು ಆಸೀಸ್‌ ಬೆನ್ನುಮೂಳೆ ಮುರಿದಿದ್ದರು.

ABOUT THE AUTHOR

...view details