ಇಂದೋರ್: ಭಾರತದ ಬೌಲರ್ಗಳ ಅಬ್ಬರಕ್ಕೆ ನಲುಗಿದ ಬಾಂಗ್ಲಾದೇಶ ತಂಡ 150 ಕ್ಕೆ ಆಲೌಟ್ ಆದರೆ, ಪೂಜಾರ ಅಗರ್ವಾಲ್ ಜಾಣ್ಮೆಯ ಆಟದ ನೆರವಿನಿಂದ ಭಾರತ ಮೊದಲದಿನದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಡು 86 ರನ್ಗಳಿಸಿದೆ.
ಬಾಂಗ್ಲಾದೇಶ ತಂಡವನ್ನು 150 ರನ್ಗಳಿಗೆ ಆಲೌಟ್ ಮಾಡಿದ ಭಾರತ ತಂಡ. ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸದ ಆರಂಭದಲ್ಲೇ ರೋಹಿತ್ ಶರ್ಮಾ(6) ವಿಕೆಟ್ ಕಳೆದುಕೊಂಡಿತು. ಆದರೆ ಮಯಾಂಕ್ 37 ಹಾಗೂ ಪೂಜಾರ 43 ರನ್ಗಳಿಸಿ 2ನೇ ವಿಕೆಟ್ಗೆ 72 ರನ್ಗಳ ಜೊತೆಯಾಟ ನೀಡಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿ ಬಾಂಗ್ಲಾತಂಡ ಆರಂಭಿಕರಾದ ಇಮ್ರುಲ್ ಕಾಯೆಸ್(6) ಉಮೇಶ್ ಯಾದವ್ಗೆ ವಿಕೆಟ್ ಒಪ್ಪಿಸಿದರೆ, ಶದ್ಮನ್ ಇಸ್ಲಾಮ್(6)ರನ್ನು ಇಶಾಂತ್ ಪೆವಿಲಿಯನ್ಗಟ್ಟಿದರು. ನಂತರ ಬಂದ ಮಿಥುನ್ 13 ರನ್ಗಳಿಗೆ ಶಮಿ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.