ಕರ್ನಾಟಕ

karnataka

ಕೇದಾರ್​ ಜಾದವ್ ಕಮಾಲ್: ಭಾರತ ಬಿ ತಂಡಕ್ಕೆ ದೇವ್​ಧರ್ ಕಿರೀಟ

By

Published : Nov 4, 2019, 11:22 PM IST

ಕೇದಾರ್ ಜಾದವ್​ ಭರ್ಜರಿ ಬ್ಯಾಟಿಂಗ್​ ಮತ್ತು ಶಹಬಾಜ್ ನದೀಮ್ ಬೌಲಿಂಗ್ ಪ್ರದರ್ಶನದಿಂದ ಭಾರತ ಬಿ ತಂಡ ದೇವ್​ಧರ್ ಟ್ರೋಫಿ ಎತ್ತಿಹಿಡಿದಿದೆ.

ಭಾರತ ಬಿ ತಂಡಕ್ಕೆ ದೇವ್​ಧರ್ ಕಿರೀಟ

ರಾಂಚಿ: ಇಲ್ಲಿ ನಡೆದ ದೇವ್​ಧರ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಬಿ ತಂಡ ಭಾರತ ಸಿ ತಂಡದ ವಿರುದ್ಧ 51 ರನ್​ಗಳಿಂದ ಜಯಗಳಿಸಿ ಟ್ರೋಫಿ ಮುಡಿಗೇರಿಸಿಕೊಂಡಿದೆ.

ಭಾರತ ಬಿ ತಂಡ ನೀಡಿದ್ದ 284 ರನ್​ಗಳ ಗುರಿ ಬೆನ್ನತ್ತಿದ ಭಾರತ ಸಿ ತಂಡದ ಆರಂಭ ಉತ್ತಮವಾಗಿರಲಿಲ್ಲ. ನಾಯಕ ಶುಬಮನ್ ಗಿಲ್ ವಿಕೆಟ್ ಬೀಳುತಿದ್ದಂತೆ ನಿದಾನಗತಿಯಲ್ಲಿ ರನ್ ಗಳಿಸುತ್ತಾ ಸಾಗಿತು. ಆಟಗಾರರು ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ತಂಡದ ಮೊತ್ತ 77 ರನ್​ ತಲುಪುವಷ್ಟರಲ್ಲೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತು.

ಈ ವೇಳೆ ತಂಡಕ್ಕೆ ಆಸರೆಯಾದ ಪ್ರಿಯಮ್ ಗರ್ಗ್ 74 ರನ್​ ಸಿಡಿಸಿ ಉತ್ತಮ ಆಟ ಪ್ರದರ್ಶಿಸಿದರಾದರು ತಂಡವನ್ನ ಗೆಲ್ಲಿಸಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ ಸಿ ತಂಡ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 232 ರನ್​ ಗಳಿಸಲಷ್ಟೆ ಶಕ್ತವಾಯಿತು. ಈ ಮೂಲಕ 51 ರನ್​ಗಳ ಅಂತರದಿಂದ ಸೋಲೊಪ್ಪಿಕೊಂಡಿತು.

ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಬಿ ತಂಡದ ಆರಂಭ ಕೂಡ ಉತ್ತಮವಾಗಿರಲಿಲ್ಲ. ಆರಂಭಿ ಆಟಗಾರು ಬಂದಷ್ಟೆ ವೇಗವಾಗಿ ಪರವಿಲಿಯನ್ ಸೇರಿಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾದವ್​ ತಂಡಕ್ಕೆ ಆಸರೆಯಾದ್ರು. ಭರ್ಜರಿ 86 ರನ್​ ಸಿಡಿಸುವ ಮೂಲಕ ತಂಡ ಮೊತ್ತ ಹೆಚ್ಚಿಸಿದ್ರು. ಮತ್ತೊಬ್ಬ ಆಟಗಾರ ಯಶಸ್ವಿ ಜೈಸ್ವಾಲ್ ಅರ್ಧ ಶತಕ(54) ಸಿಡಿಸಿ ಮಿಂಚಿದ್ರು.ಉತ್ತಮವಾಗಿ ಬ್ಯಾಟ್​ ಬೀಸಿದ ವಿಜಯ್​ ಶಂಕರ್​ 45 ರನ್​ ಗಳಿಸಿದ್ರು.

49ನೇ ಓವರ್​ನಲ್ಲಿ ಬ್ಯಾಟಿಂಗ್​ಗೆ ಇಳಿದ ಕನ್ನಡಿಗ ಕೆ.ಗೌತಮ್​ ಸ್ಪೋಟಕ ಬ್ಯಾಟಿಂಗ್​ ನಡೆಸಿದ್ರು. ಒಂದೇ ಓವರ್​ನಲ್ಲಿ 3 ಸಿಕ್ಸರ್​ ಮತ್ತು 2 ಬೌಂಡರಿ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದ್ರು.

ABOUT THE AUTHOR

...view details