ಮುಂಬೈ:ಮುಂದಿನ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ U-19 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ.
13ನೇ ಆವೃತ್ತಿಯ U-19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರಿಯಂ ಗರ್ಗ್ ಮುನ್ನಡೆಸಲಿದ್ದು, ಧ್ರುವ ಚಾಂದ್ ಜುರೆಲ್ಗೆ ಉಪನಾಯಕ ಜವಾಬ್ದಾರಿ ವಹಿಸಲಾಗಿದೆ. ತಂಡದಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಶುಭಾಂಗ್ ಹೆಗ್ಡೆ ಹಾಗೂ ವಿಧ್ಯಾಧರ್ ಪಾಟೀಲ್ ಸ್ಥಾನ ಪಡೆದ ಕರ್ನಾಟಕ ಮೂಲದ ಆಟಗಾರರು.
U-19 ವಿಶ್ವಕಪ್ 2020ರ ಜನವರಿ 17ರಿಂದ ಫೆಬ್ರವರಿ 9ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ಜರುಗಲಿದೆ. ಈ ಬಾರಿ ಹದಿನಾರು ತಂಡಗಳು ಸೆಣಸಾಡಲಿದ್ದು, ನಾಲ್ಕು ತಂಡಗಳ ನಾಲ್ಕು ಗುಂಪುಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೂಪರ್ ಲೀಗ್ ಹಂತಕ್ಕೇರಲಿವೆ. ಗುಂಪಿನ ಕೊನೆಯ ಎರಡು ತಂಡಗಳು ಪ್ಲೇಟ್ ಲೀಗ್ ಆಡಲಿವೆ.