ಕರ್ನಾಟಕ

karnataka

ETV Bharat / sports

ಪಾಕಿಸ್ತಾನಕ್ಕಿಂತ ಭಾರತದಲ್ಲೇ ಭದ್ರತೆ ಸಮಸ್ಯೆ ಹೆಚ್ಚು.. ಪಿಸಿಬಿ ಮುಖ್ಯಸ್ಥ ಹೇಳಿಕೆ - ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಲೇಟೆಸ್ಟ್​ ನ್ಯೂಸ್

ಶ್ರೀಲಂಕಾ ವಿರುದ್ಧ ಸಯಣಿಯನ್ನ ಯಶಸ್ವಿಯಾಗಿ ಆಯೋಜನೆ ಮಾಡುವ ಮೂಲಕ ಪಾಕಿಸ್ತಾನದಲ್ಲಿನ ಭದ್ರತೆ ವ್ಯವಸ್ಥೆ ಉತ್ತಮವಾಗಿದೆ ಎಂದು ತೋರಿಸಿಕೊಟ್ಟಿದ್ದೇವೆ ಎಂದು ಪಾಕ್ ಕ್ರಿಕೆಟ್​ ಬೋರ್ಡ್ ಮುಖ್ಯಸ್ಥ ಇಶಾನ್ ಮಣಿ ಹೇಳಿದ್ದಾರೆ.

ಪಾಕಿಸ್ತಾನಕ್ಕಿಂತ ಭಾರತದಲ್ಲೇ ಭದ್ರತೆ ಸಮಸ್ಯೆ ಹೆಚ್ಚು, India a far greater security risk than Pakistan
ಪಿಸಿಬಿ ಮುಖ್ಯಸ್ಥ ಇಶಾನ್ ಮ

By

Published : Dec 23, 2019, 7:18 PM IST

ಇಸ್ಲಮಾಬಾದ್: ಪಾಕಿಸ್ತಾನಕ್ಕಿಂತಲೂ ಭಾರತದಲ್ಲೇ ಭದ್ರತೆ ಸಮಸ್ಯೆ ಹೆಚ್ಚಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಖ್ಯಸ್ಥ ಇಶಾನ್​ ಮಣಿ ಹೇಳಿದ್ದಾರೆ.

ತವರಿನಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಯನ್ನ ಯಶಸ್ವಿಯಾಗಿ ಆಯೋಜಿಸಿ ಸರಣಿ ಗೆದ್ದ ನಂತರ ಮಾತನಾಡಿರುವ ಪಾಕ್ ಕ್ರಿಕೆಟ್​ ಬೋರ್ಡ್ ಮುಖ್ಯಸ್ಥ ಇಶಾನ್ ಮಣಿ, ಶ್ರೀಲಂಕಾ ವಿರುದ್ಧ ಸಯಣಿಯನ್ನ ಯಶಸ್ವಿಯಾಗಿ ಆಯೋಜನೆ ಮಾಡುವ ಮೂಲಕ ಪಾಕಿಸ್ತಾನದಲ್ಲಿನ ಭದ್ರತೆ ವ್ಯವಸ್ಥೆ ಉತ್ತಮವಾಗಿದೆ ಎಂದು ತೋರಿಸಿಕೊಟ್ಟಿದ್ದೇವೆ ಎಂದಿದ್ದಾರೆ. ಯಾವುದೇ ದೇಶ ಪಾಕ್ ಪ್ರವಾಸ ಕೈಗೊಳ್ಳಲು ಸಾಧ್ಯವಿಲ್ಲ ಎನ್ನುವುದಾದರೆ, ಭದ್ರತಾ ಲೋಪವನ್ನ ತೋರಿಸಲಿ ಎಂದಿದ್ದಾರೆ. ಅಲ್ಲದೆ ಸಧ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನಕ್ಕಿಂತ ಭಾರತದಲ್ಲೇ ಭದ್ರತಾ ಸಮಸ್ಯೆ ಹೆಚ್ಚಿದೆ ಎಂದು ಹೇಳಿದ್ದಾರೆ.

ಪಾಕ್​ ಭದ್ರತಾ ವ್ಯವಸ್ಥೆ ಉತ್ತಮವಾಗಿದೆ ಎಂದು ತಿಳಿಸುವಲ್ಲಿ ಮಾಧ್ಯಮ ಮತ್ತು ಪಾಕ್ ಕ್ರಿಕೆಟ್ ಅಭಿಮಾನಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಮುಂಬರುವ ದಿನಗಳಲ್ಲಿ ತವರಿನಲ್ಲಿ ಹೆಚ್ಚಿನ ಸರಣಿ ಆಯೋಜನೆ ಮಾಡಲಾಗುವುದು ಎಂದಿದ್ದಾರೆ.

ಈಗಾಗಲೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್​ನೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು. 2020ರ ಜನವರಿಯಲ್ಲಿ ಟಿ-20 ಮತ್ತು ಟೆಸ್ಟ್​ ಸರಣಿ ಆಯೋಜನೆ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ. ಶ್ರೀಲಂಕಾ ತಂಡವೇ ಪಾಕಿಸ್ತಾನ ಪ್ರವಾಸ ಕೈಗೊಂಡ ಮೇಲೆ ಇತರೆ ತಂಡಗಳೇಕೆ ಪ್ರವಾಸ ಕೈಗೊಳ್ಳಬಾರು ಎಂದು ಇಶಾನ್​ ಮಣಿ ಪ್ರಶ್ನಿಸಿದ್ದಾರೆ.

ಇಂದು ಮುಕ್ತಾಯಗೊಂಡ ಪಾಕ್ ಮತ್ತು ಶ್ರೀಲಂಕಾ ನಡುವಿನ 2ನೇ ಟೆಸ್ಟ್​ ಪಂದ್ಯದಲ್ಲಿ 263ರನ್​ಗಳ ಅಂತರದಲ್ಲಿ ಗೆಲುವು ಸಾಧಿಸಿದ ಪಾಕಿಸ್ತಾನ 1-0 ಅಂತರದಲ್ಲಿ ಟೆಸ್ಟ್ ಸರಣಿ ವಶಪಡಿಸಿಕೊಂಡಿದೆ.

ABOUT THE AUTHOR

...view details